₹೨.೯೬ ಕೋಟಿ ಮೊತ್ತದ ಸ್ವತ್ತು ವಾರಸುದಾರರಿಗೆ ಹಸ್ತಾಂತರ

| Published : Jan 01 2024, 01:15 AM IST

₹೨.೯೬ ಕೋಟಿ ಮೊತ್ತದ ಸ್ವತ್ತು ವಾರಸುದಾರರಿಗೆ ಹಸ್ತಾಂತರ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ೨೦೨೩ನೇ ಸಾಲಿನಲ್ಲಿ ಒಟ್ಟು ೫೫೭ ಸ್ವತ್ತಿನ ಕಳವು ಪ್ರಕರಣಗಳು ವರದಿಯಾಗಿದ್ದು, ಒಟ್ಟಾರೆ ₹೭.೮೯ ಕೋಟಿ ಮೊತ್ತದ ಸ್ವತ್ತು ಕಳವು ಆಗಿದೆ. ಈ ಪೈಕಿ ಒಟ್ಟು ೧೪೨ ಪ್ರಕರಣಗಳನ್ನು ಪತ್ತೆ ಮಾಡಿ ೨.೯೬ ಕೋಟಿ ರೂ. ಮೊತ್ತದ ಸ್ವತ್ತನ್ನು ವಶಪಡಿಸಿಕೊಂಡು ಸಂಬಂಧಪಟ್ಟವರಿಗೆ ಹಸ್ತಾಂತರ ಮಾಡಲಾಗಿದೆ

ಕನ್ನಡಪ್ರಭ ವಾರ್ತೆ ಹಾವೇರಿ

ಜಿಲ್ಲೆಯಲ್ಲಿ ೨೦೨೩ನೇ ಸಾಲಿನಲ್ಲಿ ಒಟ್ಟು ೫೫೭ ಸ್ವತ್ತಿನ ಕಳವು ಪ್ರಕರಣಗಳು ವರದಿಯಾಗಿದ್ದು, ಒಟ್ಟಾರೆ ₹೭.೮೯ ಕೋಟಿ ಮೊತ್ತದ ಸ್ವತ್ತು ಕಳವು ಆಗಿದೆ. ಈ ಪೈಕಿ ಒಟ್ಟು ೧೪೨ ಪ್ರಕರಣಗಳನ್ನು ಪತ್ತೆ ಮಾಡಿ ₹೨.೯೬ ಕೋಟಿ ಮೊತ್ತದ ಸ್ವತ್ತನ್ನು ವಶಪಡಿಸಿಕೊಂಡು ಸಂಬಂಧಪಟ್ಟವರಿಗೆ ಹಸ್ತಾಂತರ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ್ ತಿಳಿಸಿದರು.

ನಗರದ ಜಿಲ್ಲಾ ಪೊಲೀಸ್ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಪ್ರಾಪರ್ಟಿ ಪರೇಡ್ ರಿಟರ್ನ್ ಕಾರ್ಯಕ್ರಮದಲ್ಲಿ ಸ್ವತ್ತು ಕಳೆದುಕೊಂಡಿದ್ದ ವಾರಸುದಾರರಿಗೆ ಸ್ವತ್ತುಗಳನ್ನು ಹಿಂತಿರುಗಿಸಿ ಮಾಹಿತಿ ನೀಡಿದರು.

೨೦೨೩ನೇ ಸಾಲಿನಲ್ಲಿ ಲಾಭಕ್ಕಾಗಿ ಕೊಲೆ ಪ್ರಕರಣವು ವರದಿಯಾಗಿದ್ದು, ಸದರಿ ಪ್ರಕರಣವನ್ನು ಪತ್ತೆ ಮಾಡಲಾಗಿದ್ದು, ಒಟ್ಟು ₹೧.೩೩ ಕೋಟಿ ಮೊತ್ತದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ. ೯ ದರೋಡೆ ಪ್ರಕರಣಗಳಲ್ಲಿ ೪ ಪ್ರಕರಣಗಳನ್ನು ಪತ್ತೆ ಮಾಡಿ ₹೧.೭೫ ಲಕ್ಷ ಮೊತ್ತದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

೧೩ ಸುಲಿಗೆ ಪ್ರಕರಣಗಳಲ್ಲಿ ೩ ಪ್ರಕರಣಗಳನ್ನು ಪತ್ತೆ ಮಾಡಿ, ₹೨.೩೭ ಲಕ್ಷ ಮೊತ್ತದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ. ೧೮ ಹಗಲು ಕನ್ನ ಕಳವು ಪ್ರಕರಣಗಳಲ್ಲಿ ೬ ಪ್ರಕರಣಗಳನ್ನು ಪತ್ತೆ ಮಾಡಿ ₹೧೨.೫೪ ಲಕ್ಷ ಮೊತ್ತದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

೧೪೫ ರಾತ್ರಿ ಕನ್ನಾ ಕಳವು, ಮನೆ ಕಳವು ಪ್ರಕರಣಗಳಲ್ಲಿ ೨೫ ಪ್ರಕರಣಗಳನ್ನು ಪತ್ತೆ ಮಾಡಿ ₹೯೨.೪೭ ಲಕ್ಷ ಮೊತ್ತದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ. ೩೭೧ ಸಾಮಾನ್ಯ ಕಳವು ಪ್ರಕರಣಗಳಲ್ಲಿ ೧೦೩ ಪ್ರಕರಣಗಳನ್ನು ಪತ್ತೆ ಮಾಡಿ ₹೫೪.೫೬ ಲಕ್ಷ ಮೊತ್ತದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

೫೪ ಮೋಟಾರ್ ಸೈಕಲ್, ೧ ಟ್ರ್ಯಾಕ್ಟರ್, ೨ ನಾಲ್ಕು ಚಕ್ರದ ವಾಹನಗಳನ್ನು ಪತ್ತೆ ಮಾಡಲಾಗಿದೆ. ಒಟ್ಟು ೬೦೪ ಗ್ರಾಂ ತೂಕದ ಬಂಗಾರದ ಆಭರಣ, ೭೧೫೦ ಗ್ರಾಂ ತೂಕದ ಬೆಳ್ಳಿಯ ಆಭರಣ ಹಾಗೂ ₹೧೬.೫೦ ಲಕ್ಷ ನಗದು ಜಪ್ತಿ ಮಾಡಲಾಗಿದೆ ಎಂದು ವಿವರಿಸಿದರು.