ಗಾಂಧಿ ಜಯಂತಿ ಪ್ರಯುಕ್ತ ವೃದ್ಧಾಶ್ರಮಕ್ಕೆ ನೆರವು

| Published : Oct 03 2025, 01:07 AM IST

ಸಾರಾಂಶ

ಕನಕಪುರ: ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆ ರೂರಲ್ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಸ್ವಯಂ ಸೇವಕರು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಜಯಂತಿ ಅಂಗವಾಗಿ ಗುರುವಾರ ರಾಮನಗರದ ದಾರಿ ದೀಪ ವೃದ್ಧಾಶ್ರಮಕ್ಕೆ ಭೇಟಿ ನೀಡಿ ದಿನಸಿ ಸಾಮಗ್ರಿ ವಿತರಿಸಿದರು.

ಎನ್ನೆಸ್ಸೆಸ್‌ ಅಧಿಕಾರಿ ಡಾ.ಹನುಮಂತರಾಜು ಮಾತನಾಡಿ, ನಾವು ಗಾಂಧೀಜಿ ಹಾಗು ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜಯಂತಿ ಪ್ರಯುಕ್ತ ಸಮಾಜಕ್ಕೆ ನಮ್ಮ ಕಾಲೇಜಿನ ಪರವಾಗಿ ಎನ್ನೆಸ್ಸೆಸ್‌ ತಂಡದೊಂದಿಗೆ ವೃದ್ಧಾಶ್ರಮಕ್ಕೆ ಸಹಾಯ ಮಾಡುವ ಉದ್ದೇಶದಿಂದ ದಿನಸಿ ಸಾಮಗ್ರಿ ಸಂಗ್ರಹಿಸಿ ನೀಡುತ್ತಿರುವುದಾಗಿ ತಿಳಿಸಿದರು.

ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿ ಸೇವೆ ತತ್ವವನ್ನು ನೆನೆಯುವ ಅವಕಾಶವನ್ನು ಅರ್ಥ ಪೂರ್ಣವಾಗಿ ಆಚರಿಸಬೇಕೆಂಬ ಸದುದ್ದೇಶದಿಂದ ವಿಜಯದಶಮಿ ಅಂಗವಾಗಿ ಆಶ್ರಮದಲ್ಲೇ ಪೂಜೆ ನೆರವೇರಿಸಿ ಆಶ್ರಮವಾಸಿಗಳಿಗೆ ಸಿಹಿ ಹಂಚಿ ಅವರೊಂದಿಗೆ ಸಂಭ್ರಮಾಚರಣೆ ಮಾಡಿರುವುದು ಸಂತಸ ತಂದಿದೆ ಎಂದರು.

ರೂರಲ್ ಪದವಿ ಕಾಲೇಜಿನ ಪ್ರಾಂಶುಪಾಲ ಎಂ.ಟಿ.ಬಾಲಕೃಷ್ಣ ಎನ್ನೆಸ್ಸೆಸ್‌ ಸ್ವಯಂ ಸೇವಕರನ್ನು ಅಭಿನಂದಿಸಿದರು.