ಸಂತರೊಂದಿಗೆ ಬೆರೆತರೆ ಮನಸ್ಸಿಗೆ ನೆಮ್ಮದಿ: ಎಸ್.ಟಿ. ಪಾಟೀಲ

| Published : Apr 12 2025, 12:45 AM IST

ಸಂತರೊಂದಿಗೆ ಬೆರೆತರೆ ಮನಸ್ಸಿಗೆ ನೆಮ್ಮದಿ: ಎಸ್.ಟಿ. ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದಲ್ಲಿ ಸಂತಪರಂಪರೆ ಹಿಂದಿನಿಂದಲೂ ಬಂದಿದೆ ಅವರು ಕೀರ್ತನೆಗಳ ಮೂಲಕ ಸಮಾಜ ಸುದಾರಣೆ ಮಾಡಿದರು. ಭಕ್ತಿ ಪರಂಪರೆಯ ಸಂತರೊಂದಿಗೆ ಬೆರೆತರೆ ಮನಸ್ಸಿಗೆ ನೆಮ್ಮದಿ ಉಂಟಾಗುತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಟಿ. ಪಾಟೀಲ ಹೇಳಿದರು.

ಕನ್ನಡ ಪ್ರಭ ವಾರ್ತೆ ಗುಳೇದಗುಡ್ಡ

ದೇಶದಲ್ಲಿ ಸಂತಪರಂಪರೆ ಹಿಂದಿನಿಂದಲೂ ಬಂದಿದೆ ಅವರು ಕೀರ್ತನೆಗಳ ಮೂಲಕ ಸಮಾಜ ಸುಧಾರಣೆ ಮಾಡಿದರು. ಭಕ್ತಿ ಪರಂಪರೆಯ ಸಂತರೊಂದಿಗೆ ಬೆರೆತರೆ ಮನಸ್ಸಿಗೆ ನೆಮ್ಮದಿ ಉಂಟಾಗುತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಟಿ. ಪಾಟೀಲ ಹೇಳಿದರು.

ಪಟ್ಟಣದ ಪಾಂಡುರಂಗ ವಿಠ್ಠಲ ದೇವಸ್ಥಾನದಲ್ಲಿ ರಾಮನವಮಿ ಉತ್ಸವದ ನಿಮಿತ್ತ ಗುರುವಾರ ಹಮ್ಮಿಕೊಂಡ ದಿಂಡಿ ಸಪ್ತಾಹ, ಜ್ಞಾನೇಶ್ವರಿ ಪಾರಾಯಣ ಹಾಗೂ ಕಳಸಾರೋಹಣ ಸಮಾರಂಭದಲ್ಲಿ ಮಾತನಾಡಿದರು. ಜನರು ಭಕ್ತಿ ಪರಂಪರೆ ಮಾರ್ಗದ ಮೂಲಕ ಸಾಕಷ್ಟು ನೆಮ್ಮದಿ ಕಾಣಬಹುದಾಗಿದ್ದು, ದೇವರನ್ನು ಭಜನೆ, ಕೀರ್ತನೆಗಳ ಮೂಲಕ ಸ್ಮರಿಸಬಹುದಾಗಿದೆ. ದಿಂಡಿ ಬಜನೆ ಪಾರಾಯಣ ಇಂದಿನ ದಿನಗಳಲ್ಲಿ ಅಗತ್ಯವಾಗಿದೆ ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬರಗುಂಡಿ ಮಾತನಾಡಿ, ದೇವರನ್ನು ಭಕ್ತಿಯೋಗದ ಮೂಲಕ ಭಜಿಸುವುದರಿಂದ ಮಾನಸಿಕವಾಗಿ ನೆಮ್ಮದಿ ಸಿಗುತ್ತದೆ. ಭಕ್ತಿ ಮಾರ್ಗ ಅತ್ಯಂತ ಮಹತ್ವದ್ದಾಗಿದೆ ಎಂದರು.

ಕೃಷ್ಣ ಮಹಾರಾಜರು,ಮುರುಘಾಮಠದ ಕಾಶೀನಾಥ ಶ್ರೀಗಳು ಸಾನಿಧ್ಯವಹಿಸಿ ಮಾತನಾಡಿ, ಪರಮಾತ್ಮನನ್ನು ಬಿಟ್ಟು ಜಗತ್ತು ಇಲ್ಲ ದೇವರ ಸ್ಮರಣೆ ನಾವೆಲ್ಲರೂ ಮಾಡಬೇಕು ಅಂದಾಗ ನಾಡು ಸಮೃದ್ದವಾಗಿರುತ್ತದೆ ಎಂದರು.

ಕೀರ್ತನಕಾರರಿಗೆ, ಮೃದಂಗವಾದಕರಿಗೆ, ದಾನಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಸಂಪತ್‌ಕುಮಾರ ರಾಠಿ, ರಂಗಪ್ಪ ಶೇಬಿನಕಟ್ಟಿ, ಮುರುಗೇಶ ರಾಜನಾಳ, ಸುಭಾಷ ಸಿಂಧೆ, ಗೋಪಾಲ ಸಿಂಧೆ, ಪರಶುರಾಮ ಸಿಂಧೆ ಇದ್ದರು.

ಮೆರವಣಿಗೆ : ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಾಂಡುರಂಗನ ಭಾವಚಿತ್ರದ ಮೆರವಣಿಗೆ ಮಹಿಳೆಯರು ಕುಂಭ ಕಳಸದೊಂದಿಗೆ ಜರುಗಿತು.