ಸಾಧು, ಶರಣರ ಪಾದದಲ್ಲಿ ಪಾಪ-ಕರ್ಮ ದಹಿಸುವ ಶಕ್ತಿಯಿದೆ: ರುದ್ರಪ್ಪ ಲಮಾಣಿ

| Published : Feb 14 2024, 02:19 AM IST

ಸಾಧು, ಶರಣರ ಪಾದದಲ್ಲಿ ಪಾಪ-ಕರ್ಮ ದಹಿಸುವ ಶಕ್ತಿಯಿದೆ: ರುದ್ರಪ್ಪ ಲಮಾಣಿ
Share this Article
  • FB
  • TW
  • Linkdin
  • Email

ಸಾರಾಂಶ

ಸಾಧು, ಶರಣರ ಪಾದದಲ್ಲಿ ಪಾಪ-ಕರ್ಮ ದಹಿಸುವ ಶಕ್ತಿಯಿದೆ.

ಪಾದ ಪೂಜೆ, ಆರಾಧನೆ ಹಾಗೂ ಸತ್ಸಂಗ ಸಮಾರಂಭದಲ್ಲಿ ವಿಧಾನಸಭೆ ಉಪಾಧ್ಯಕ್ಷ ಅಭಿಪ್ರಾಯ

ಕನ್ನಡಪ್ರಭ ವಾರ್ತೆ ರಾಣಿಬೆನ್ನೂರು

ಸಾಧು, ಶರಣರ ಪಾದದಲ್ಲಿ ಪಾಪ-ಕರ್ಮ ದಹಿಸುವ ಶಕ್ತಿಯಿದೆ ಎಂದು ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.

ತಾಲೂಕಿನ ಖಂಡೇರಾಯನಹಳ್ಳಿಯ ಸಿದ್ದಾಶ್ರಮದಲ್ಲಿ ಗುರು ನಾಗರಾಜನಂದ ಮಹಾಸ್ವಾಮಿಜಿಗಳವರ 72ನೇ ಹುಟ್ಟು ಹಬ್ಬದ ಅಂಗವಾಗಿ ಏರ್ಪಡಿಸಲಾಗಿದ್ದ ಪಾದ ಪೂಜೆ, ಆರಾಧನೆ ಹಾಗೂ ಸತ್ಸಂಗ ಸಮಾರಂಭದಲ್ಲಿ ಮಾತನಾಡಿದರು. ಮನುಷ್ಯನಿಗೆ ಯಾವ ತೊಂದರೆಯಾದರೂ ಅದನ್ನು ಹೋಗಲಾಡಿಸಲು ಪಾದ ಸ್ಪರ್ಶವೇ ಕಾರಣವಾಗಿದೆ. ಪಾದದ ಮಹಿಮೆ ಅಪಾರ, ಅದಕ್ಕೆ ಅದ್ಭುತವಾದ ಶಕ್ತಿಯಿದೆ. ದೇಹವು ಮನಸ್ಸನ್ನು ನಿಯಂತ್ರಿಸಿದರೆ, ಮನಸ್ಸನ್ನು ಗ್ರಹಗಳು ಹತೋಟಿಯಲ್ಲಿಡುತ್ತವೆ. ದೈಹಿಕ, ಮಾನಸಿಕವಾಗಿ ಬಳಲುವ ಮನುಜರಿಗೆ ಸಮಸ್ಯೆ ಬಗೆಹರಿಸಲು ಗುರು ಮಾರ್ಗದರ್ಶನಬೇಕು. ಆತನಲ್ಲಿ ನಂಬಿಕೆ ಇಟ್ಟು ಮುನ್ನಡೆದರೆ ಒತ್ತಡಕ್ಕೆ, ಖಿನ್ನತೆಗೆ ಜಾರುವುದಿಲ್ಲ. ಜೀವನ ಪೂರ್ಣವಾಗಿ ನಂಬಿಕೆ, ವಿಶ್ವಾಸದ ಮೇಲೆಯೇ ನಿಂತಿದೆ. ಪ್ರತಿಯೊಬ್ಬರಲ್ಲಿ ನಂಬಿಕೆಯೊಂದಿದ್ದರೆ, ಏನನ್ನಾದರೂ ಸಾಧಿಸಬಹುದು. ಔಷಧಿ, ವೈದ್ಯಾಧಿಕಾರಿಗಿಂತಲೂ ಹತ್ತು ಪಟ್ಟು ಈ ನಂಬಿಕೆ ಸಂಜೀವಿನಿಯಾಗಿ ಕೆಲಸ ಮಾಡುತ್ತದೆ. ನಂಬಿಕೆ ಇದ್ದರೆ ಜೀವನ ಪಾವನ, ಕಳೆದುಕೊಂಡರೆ ಜೀವನ ನಶ್ವರ ಎಂದರು.

ಇದೇ ಸಂದರ್ಭದಲ್ಲಿ ಶ್ರೀಮಠದ ಭಕ್ತರು ಗುರು ನಾಗರಾಜನಂದ ಮಹಾಸ್ವಾಮಿಜಿಗಳಿಗೆ ಪಾದ ಪೂಜೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಚಳಗೇರಿಯ ಚನ್ನಯ್ಯ ಶಾಸ್ತ್ರೀಗಳು, ಟ್ರಸ್ಟ್‌ ಕಮಿಟಿ ಅಧ್ಯಕ್ಷ ಫಕ್ಕೀರಪ್ಪಗೌಡ್ರ, ಗ್ರಾಪಂ ಮಾಜಿ ಅಧ್ಯಕ್ಷ ಜನಾರ್ದನ ಕಡೂರ, ಡಾ. ಸುನಿತಾ, ನ್ಯಾಯವಾದಿ ಎಂ.ಬಿ. ಚಿನ್ನಪ್ಪನವರ ಹಾಗೂ ಪ್ರಮುಖರಾದ ಶಿವಣ್ಣ ಬಣಕಾರ, ಡಾಕೇಶ ಲಮಾಣಿ, ಬಸವರಾಜ ಬೇವಿನಹಳ್ಳಿ, ಗುರುಶಾಂತ ಬಾಗಿಲದವರ, ಗೋಪಾಲ ಹೆಡಿಯಾಲ, ಹೊನಕೇರಪ್ಪ ಹರಿಹರ, ಪ್ರಕಾಶ ಚನ್ನಗೌಡ್ರ, ಮಂಜುನಾಥ ಹೊರಕೇರಿ ಸೇರಿದಂತೆ ನೂರಾರು ಭಕ್ತರು ಇದ್ದರು.