ಸಾರಾಂಶ
ಭಾರತೀಯ ಜನತಾ ಪಾರ್ಟಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ನಗರದ ಕಾಯಿ ಪೇಟೆ ಬಸವೇಶ್ವರ ದೇವಸ್ಥಾನ ಸಮೀಪ ಶನಿವಾರ ಕಾರ್ಗಿಲ್ ವಿಜಯ ದಿವಸ ಹಾಗೂ ಮಾಜಿ ಸೈನಿಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ದಾವಣಗೆರೆ
ಭಾರತೀಯ ಜನತಾ ಪಾರ್ಟಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ನಗರದ ಕಾಯಿ ಪೇಟೆ ಬಸವೇಶ್ವರ ದೇವಸ್ಥಾನ ಸಮೀಪ ಶನಿವಾರ ಕಾರ್ಗಿಲ್ ವಿಜಯ ದಿವಸ ಹಾಗೂ ಮಾಜಿ ಸೈನಿಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಅಧ್ಯಕ್ಷ ಯಶವಂತ ರಾವ್ ಜಾಧವ್ ಮಾತನಾಡಿ, ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿ ಆಗಿದ್ದ ಸಂದರ್ಭ ಕಾರ್ಗಿಲ್ ಯುದ್ಧ ನಡೆದಿತ್ತು. ಪಾಕಿಸ್ತಾನ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದೆ ಎಂದು ಅಮೆರಿಕ ಅಧ್ಯಕ್ಷ ತಡರಾತ್ರಿ ಅಟಲ್‌ಜೀ ಅವರಿಗೆ ಕರೆ ಮಾಡಿ, ಪಾಕ್ ಮೇಲೆ ಯುದ್ಧ ನಿಲ್ಲಿಸದಿದ್ದರೆ ಪರಮಾಣು ದಾಳಿ ಮಾಡುವುದಾಗಿ ಹೇಳುತ್ತದೆ ಎಂದಿದ್ದರು. ಆಗ ಅಟಲ್‌ಜೀ ಅವರು ಇದಾದಲ್ಲಿ ಕಾಶ್ಮೀರದ ಒಂದು ಭಾಗ ನಾಶವಾಯಿತು ಎಂದು ತಿಳಿದುಕೊಳ್ಳುವೆ. ಆದರೆ, ಬೆಳಗಾಗುವುದರೊಳಗೆ ವಿಶ್ವ ಭೂಪಟದಲ್ಲಿ ಪಾಕಿಸ್ತಾನವೇ ಇರುವುದಿಲ್ಲ ಎಂದು ದಿಟ್ಟತನ ಪ್ರದರ್ಶಿಸಿದ್ದರು ಎಂದು ಸ್ಮರಿಸಿದರು.
ಮಾಜಿ ಸೈನಿಕ ಚಂದ್ರಪ್ಪ ಸುಬೇದಾರ್ ಗೌರವ ಸ್ವೀಕರಿಸಿ ಮಾತನಾಡಿ, ಸೈನಿಕರ ತ್ಯಾಗಕ್ಕೆ ಬೆಲೆ ಕೊಟ್ಟು ಪ್ರಧಾನಿ ಮೋದಿ ಪ್ರತಿವರ್ಷ ಸೈನಿಕರ ಜೊತೆ ಪ್ರತಿ ಹಬ್ಬ ಆಚರಿಸುವ ಸಂಪ್ರದಾಯ ರೂಢಿಸಿಕೊಂಡಿದ್ದಾರೆ. ಸೈನಿಕರಲ್ಲಿ ಆತ್ಮಸ್ಥೈರ್ಯ ತುಂಬುವಂಥ ಕೆಲಸ ಪ್ರಧಾನಿ ಮಾಡುತ್ತಿದ್ದಾರೆ. ಇಂಥ ಪ್ರಧಾನಿ ಜೊತೆ ದೇಶದ ಜನತೆ ಸದಾ ಬೆಂಬಲವಾಗಿ ನಿಲ್ಲಬೇಕೆಂದರು.ಮಾಜಿ ಸೈನಿಕರಾದ ಮೇಜರ್ ಸುಬೇದಾರ ಚಂದ್ರಪ್ಪ ಕೆ.ಬಿ. ಬಸವರಾಜ್, ಸುರೇಶ್ ರಾವ್, ರವಿಚಂದ್ರ, ಕೆ.ವೀರಪ್ಪ, ಸನ್ಮಾನಿಸಿ ಗೌರವಿಸಿದರು.
ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ರಮೇಶ್ ನಾಯಕ್, ಲೀಗಲ್ ಸೆಲ್ ಸಂಚಾಲಕ ಎಸಿ ರಾಘವೇಂದ್ರ, ಪಾಲಿಕೆ ಮಾಜಿ ಸದಸ್ಯರಾದ ರಾಕೇಶ ಜಾಧವ್, ಶಿವನಗೌಡ ಟಿ. ಪಾಟೀಲ್, ಸ್ಮಾರ್ಟ್ ಸಿಟಿ ಮಾಜಿ ನಿರ್ದೇಶಕ ಎಸ್.ಬಾಬು, ರೈಲ್ವೆ ಸಲಹಾ ಸಮಿತಿ ಸದಸ್ಯರಾದ ಎಸ್.ಬಾಲಚಂದ್ರ ಶೆಟ್ಟಿ, ಶಿವಾನಂದ, ಟಿಂಕರ್ ಮಂಜಣ್ಣ, ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಭಾಗ್ಯ ಪಿಸಾಳೆ, ಚೇತನ ಕುಮಾರ್, ರೇಣುಕಾ ಕೃಷ್ಣ, ಲೀಲಮ್ಮ, ಮಂಜುಳಾ ಇಟಿಗಿ, ಸೇರಿದಂತೆ ಕಾರ್ಯಕರ್ತರು ಮುಖಂಡರು, ವರ್ತಕರು ಭಾಗವಹಿಸಿದ್ದರು.- - -
-26ಕೆಡಿವಿಜಿ38, 39.ಜೆಪಿಜಿ:ದಾವಣಗೆರೆಯಲ್ಲಿ ಬಿಜೆಪಿ ದಕ್ಷಿಣ ಕ್ಷೇತ್ರದಿಂದ ಆಯೋಜಿಸಿದ ವಿಜಯ ದಿವಸ್ ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕರನ್ನು ಸನ್ಮಾನಿಸಲಾಯಿತು.