ಅಥಣಿ ಮುರುಘೇಂದ್ರ ಶಿವಯೋಗಿಗಳ ಸಾಧನೆ ಎಲ್ಲರಿಗೂ ಮಾದರಿ-ಸ್ವಾಮೀಜಿ

| Published : Jul 07 2024, 01:26 AM IST

ಅಥಣಿ ಮುರುಘೇಂದ್ರ ಶಿವಯೋಗಿಗಳ ಸಾಧನೆ ಎಲ್ಲರಿಗೂ ಮಾದರಿ-ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಅಥಣಿ ಮುರುಘೇಂದ್ರ ಮಹಾಶಿವಯೋಗಿಗಳು ನಾಡಿನ ಸರ್ವ ಜನರ ಶಿವಯೋಗದ ಗುರುಗಳು. ಅವರ ಬದುಕು, ಸಾಧನೆ ಎಲ್ಲರಿಗೂ ಮಾದರಿಯಾಗಿದ್ದು, ಅಂತರಂಗ ಹಾಗೂ ಬಹಿರಂಗ ಶುದ್ಧಿಗೆ ಶ್ರೀ ಮುರುಘೇಂದ್ರ ಮಹಾಶಿವಯೋಗಿಗಳು ಆದರ್ಶ ಎಂದು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಹೇಳಿದರು.

ಹಾವೇರಿ: ಅಥಣಿ ಮುರುಘೇಂದ್ರ ಮಹಾಶಿವಯೋಗಿಗಳು ನಾಡಿನ ಸರ್ವ ಜನರ ಶಿವಯೋಗದ ಗುರುಗಳು. ಅವರ ಬದುಕು, ಸಾಧನೆ ಎಲ್ಲರಿಗೂ ಮಾದರಿಯಾಗಿದ್ದು, ಅಂತರಂಗ ಹಾಗೂ ಬಹಿರಂಗ ಶುದ್ಧಿಗೆ ಶ್ರೀ ಮುರುಘೇಂದ್ರ ಮಹಾಶಿವಯೋಗಿಗಳು ಆದರ್ಶ ಎಂದು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಹೇಳಿದರು.

ನಗರದ ಹೊಸಮಠದಲ್ಲಿ ಶನಿವಾರ ಶ್ರೀ ಮುರುಘೇಂದ್ರ ಮಹಾಶಿವಯೋಗಿಗಳವರ ಜಯಂತಿ ನಿಮಿತ್ತ ನಡೆದ ವಚನ ಸಾಹಿತ್ಯ ಪಲ್ಲಕ್ಕಿ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಧಾರ್ಮಿಕ ಸಮಾನತೆಗಾಗಿ ಬಸವಣ್ಣನವರು ಇಷ್ಟಲಿಂಗ ದೀಕ್ಷೆ ಹಾಗೂ ಅನುಭವ ಮಂಟಪವನ್ನು ಸ್ಥಾಪಿಸಿ ಧಾರ್ಮಿಕ ಕ್ರಾಂತಿಗೆ ನಾಂದಿ ಹಾಡಿದರು. ಶ್ರೀ ಮುರುಘೇಂದ್ರ ಮಹಾಶಿವಯೋಗಿಗಳ ನಿರ್ಮಲವಾದ ಮನಸ್ಸಿನಿಂದ ಲೋಕಹಿತಕ್ಕಾಗಿ ದಿವ್ಯಪಥವಾದರು. ಶಿವಯೋಗಿಗಳದು ದಿವ್ಯಪಥ. ಅಂದರೆ ಆಧ್ಯಾತ್ಮ ಪಥ, ಧಾರ್ಮಿಕ ಪಥ, ಯೋಗ ಪಥ, ಧ್ಯಾನಪಥ. ಲೋಕಕಲ್ಯಾಣಕ್ಕಾಗಿ ಅವುಗಳನ್ನು ಬಳಸಿದರು. ಧ್ಯಾನದಿಂದ ದಿವ್ಯತೆ, ಭವ್ಯತೆ ಅದರಿಂದಾಗಿ ಅವರು ದಿವ್ಯ ಮಾನವ, ಭವ್ಯಮಾನವರಾದರು ಎಂದರು.ದಿವ್ಯಪಥವನ್ನು ಅನುಸರಿಸುತ್ತ ಅದರಲ್ಲಿ ಮೈಮರೆತವರಲ್ಲ; ಅದನ್ನು ಲೋಕಕಲ್ಯಾಣಕ್ಕೆ ಬಳಸಿದರು. ಹಲವರು ವ್ಯಕ್ತಿಗತ ಶಾಂತಿ-ಸಮಾಧಾನಕ್ಕಾಗಿ ಮನೆ-ಮಠ ತೊರೆಯುತ್ತಾರೆ. ಈ ದಿಶೆಯಲ್ಲಿ ಶಿವಯೋಗಿಗಳದು ಜವಾಬ್ದಾರಿಯುತ ಜೀವನ. ನಿತ್ಯವೂ ಶಿವಯೋಗ ಸುಖ ಅನುಭವಿಸುತ್ತ ಲೋಕಕಲ್ಯಾಣ ಕುರಿತು ಚಿಂತಿಸಿ ಅದನ್ನು ಸಾಧಿಸಿದ್ದಾರೆ. ಲೋಕಹಿತ ಸಾಧಿಸದ ಜೀವನ ವ್ಯರ್ಥವೆಂಬ ಅರಿವು ಅವರಲ್ಲಿ ಜಾಗೃತವಾಗಿದ್ದರಿಂದ ಲೋಕಹಿತ ಸಾಧಿಸುತ್ತಾ ಹೋಗಿದ್ದಾರೆ ಎಂದರು.ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖ ವಹಿಸಿ ಮಾತನಾಡಿ, ಶ್ರೀ ಮುರುಘೇಂದ್ರ ಮಹಾಶಿವಯೋಗಿಗಳು ನುಡಿದಂತೆ ನಡೆದು ಸಮಾಜಕ್ಕೆ ಮಾದರಿಯಾದರು. ೨೦ನೇ ಶತಮಾನದ ಅಲ್ಲಮಪ್ರಭುಗಳೆಂದರೆ ಮುರುಘೇಂದ್ರ ಶಿವಯೋಗಿಗಳು. ಜನಸಾಮಾನ್ಯರಿಗೆ ಸನ್ಮಾರ್ಗ ತೋರಿಸಿ ಅವರ ನೋವಿಗೆ ಸ್ಪಂದಿಸಿ, ಸೇವಾ ಕಾರ್ಯ ಮಾಡಿ ನಿಜ ಶಿವಾರಾಧನೆ ಮಾಡಿದ ಶಿವಯೋಗಿಗಳು. ನಮಗೆಲ್ಲ ಪುಣ್ಯದ ಕಣಜವನ್ನೆ ಬಿಟ್ಟಿದ್ದಾರೆ. ಅಂತಹವರು ನೀಡಿದ ಜ್ಞಾನದ ನುಡಿಗಳಿಂದ ಸನ್ಮಾರ್ಗದಲ್ಲಿ ನಡೆಯುವುದು ನಮ್ಮೆಲ್ಲರ ಕರ್ತವ್ಯ ಎಂದರು. ಈ ವೇಳೆ ಪರಮೇಶಪ್ಪ ಮೇಗಳಮನಿ, ಜಯದೇವ ಕೆರೂಡಿ, ಎಸ್.ಎಚ್.ಮಜೀದ್, ಮುರುಗೆಪ್ಪ ಕಡೆಕೊಪ್ಪ ಸೇರಿದಂತೆ ಇತರರು ಇದ್ದರು.