ಸಾರಾಂಶ
ಹೈಜಂಪ್‌ನಲ್ಲಿ ಸುಪ್ರೀತ್ ರಾಜ್ ಗೆ ಚಿನ್ನ, ಜಾವೆಲಿನ್ ಮತ್ತು ಶಾಟ್‌ಪುಟ್ ಕ್ರೀಡೆಯಲ್ಲಿ ಶಹೆಜಹಾನಿ ಅವರು ಚಿನ್ನದ ಪದಕ ಮತ್ತು ರಿಲೇ ಓಟದಲ್ಲಿ ಬೆಳ್ಳಿ ಪದಕ ಪಡೆದರು.
ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಉತ್ತರಾಖಂಡ್ ರಾಜಧಾನಿ ಡೆಹ್ರಾಡೂನ್‌ನಲ್ಲಿ ಇತ್ತೀಚೆಗೆ ನಡೆದ ಅಖಿಲ ಭಾರತ ಸರ್ಕಾರಿ ಸ್ವಾಮ್ಯದ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಕ್ರೀಡಾಕೂಟದಲ್ಲಿ ಎಲ್‌ಐಸಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.ತಂಡದ ಸದಸ್ಯೆ, ಆಳ್ವಾಸ್ ಕಾಲೇಜಿನ ಹಳೆ ವಿದ್ಯಾರ್ಥಿನಿ ಶಿರ್ತಾಡಿಯ ಜಾಯ್ಲಿನ್ ಲೋಬೊ ಅವರು ಲಾಂಗ್ ಜಂಪ್ ಮತ್ತು ಟ್ರಿಬ್ಬಲ್ ಜಂಪ್ ಕ್ರೀಡೆಯಲ್ಲಿ ಗಮನಾರ್ಹ ಸಾಧನೆ ಮೂಲಕ ಚಿನ್ನದ ಪದಕ ಹಾಗೂ ರಿಲೇ ಓಟದಲ್ಲಿ ಬೆಳ್ಳಿ ಪದಕ ಗಳಿಸಿ ಗಮನ ಸೆಳೆದರು. ಹೈಜಂಪ್‌ನಲ್ಲಿ ಸುಪ್ರೀತ್ ರಾಜ್ ಗೆ ಚಿನ್ನ, ಜಾವೆಲಿನ್ ಮತ್ತು ಶಾಟ್‌ಪುಟ್ ಕ್ರೀಡೆಯಲ್ಲಿ ಶಹೆಜಹಾನಿ ಅವರು ಚಿನ್ನದ ಪದಕ ಮತ್ತು ರಿಲೇ ಓಟದಲ್ಲಿ ಬೆಳ್ಳಿ ಪದಕ ಪಡೆದರು.