ಹಿಂದೂಗಳ ಮೇಲೆ ದೌರ್ಜನ್ಯ ಎಸಗೋರಿಗೆ ಗುಂಡಿಡಬೇಕು

| Published : Sep 14 2024, 01:48 AM IST

ಹಿಂದೂಗಳ ಮೇಲೆ ದೌರ್ಜನ್ಯ ಎಸಗೋರಿಗೆ ಗುಂಡಿಡಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಸಂದರ್ಭ ಹಿಂದೂ ಯುವಕರ ಮೇಲೆ ನಡೆದ ಹಲ್ಲೆ, ದೌರ್ಜನ್ಯ ಖಂಡನೀಯ. ಗೃಹಮಂತ್ರಿ ಜಿ.ಪರಮೇಶ್ವರ ನೈತಿಕ ಹೊಣೆ ಹೊತ್ತು ತಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೊನ್ನಾಳಿಯಲ್ಲಿ ಒತ್ತಾಯಿಸಿದ್ದಾರೆ.

- ಮಾಜಿ ಸಚಿವ ರೇಣುಕಾಚಾರ್ಯ ಹೇಳಿಕೆ । ನಾಗಮಂಗಲ ಗಲಭೆ ಹಿನ್ನೆಲೆ ಗೃಹಮಂತ್ರಿ ಪರಮೇಶ್ವರ ರಾಜೀನಾಮೆಗೆ ಒತ್ತಾಯ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಸಂದರ್ಭ ಹಿಂದೂ ಯುವಕರ ಮೇಲೆ ನಡೆದ ಹಲ್ಲೆ, ದೌರ್ಜನ್ಯ ಖಂಡನೀಯ. ಗೃಹಮಂತ್ರಿ ಜಿ.ಪರಮೇಶ್ವರ ನೈತಿಕ ಹೊಣೆ ಹೊತ್ತು ತಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಒತ್ತಾಯಿಸಿದರು.

ತಾಲೂಕಿನ ಬೇಲಿಮಲ್ಲೂರು ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಿಜೆಪಿ ಸದಸ್ಯತ್ವ ಅಭಿಯಾನ ಹಾಗೂ ಹಿಂದೂ ಜಾಗೃತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಾಗಮಂಗಲದಲ್ಲಿ ಪೊಲೀಸರ ಎದುರೇ ಮುಸ್ಲಿಂ ಗೂಂಡಾಗಳು ಮಸೀದಿಯಲ್ಲಿ ಸಂಗ್ರಹಿಸಿದ್ದ ಕಲ್ಲುಗಳು, ಪೆಟ್ರೋಲ್ ಬಾಂಬ್‍ಗಳು ಹಾಗೂ ಮಚ್ಚು,ಲಾಂಗ್‌ಗಳಿಂದ ಹಲ್ಲೆ ನಡೆದಿಸಿದ್ದಾರೆ. ಆದರೂ, ಗೃಹಮಂತ್ರಿ ಪರಮೇಶ್ವರ ಇದೊಂದು ಸಣ್ಣ ಘಟನೆ ಎಂದಿರುವುದು ಎಷ್ಟು ಸರಿ? ಅಲ್ಪಸಂಖ್ಯಾತರ ಓಲೈಕೆ ಮೀತಿಮೀರಿದೆ, ಇದಕ್ಕೆ ಕಡಿವಾಣ ಹಾಕಲೇಬೇಕು ಎಂದರು.

ಗುಂಡಿಟ್ಟು ಕೊಲ್ಲಬೇಕು:

ನಾಗಮಂಗಲದಲ್ಲಿ ನಡೆದ ಘಟನೆಯಲ್ಲಿ ನಷ್ಟ ಅನುಭವಿಸಿದ ಅಂಗಡಿ ಮಾಲೀಕರಿಗೆ, ಸಣ್ಣಪುಟ್ಟ ವ್ಯಾಪಾರಿಗಳಿಗೆ ಸರ್ಕಾರ ತಕ್ಷಣ ಪರಿಹಾರ ನೀಡಬೇಕು. ರಾಜ್ಯದಲ್ಲಿ ಕಾಂಗ್ರೆಸ್‌ ಯಾವ್ಯಾವಾಗ ಅಧಿಕಾರ ಹಿಡಿದಿದೆಯೋ ಆ ಎಲ್ಲ ಸಂದರ್ಭಗಳಲ್ಲಿ ಸರ್ಕಾರದ ಅಲ್ಪಸಂಖ್ಯಾತರ ವ್ಯಾಪಕ ಓಲೈಕೆ ಹಾಗೂ ಹಿಂದೂಗಳ ಮೇಲೆ ಮುಸ್ಲಿಂ ಗುಂಡಾಗಳಿಂದ ಹಲ್ಲೆ, ದೌರ್ಜನ್ಯಗಳು ನಡೆದಿವೆ. ಹಿಂದೂಗಳು ಜಾಗೃತರಾಗದೇ ಹೋದಲ್ಲಿ ನಮಗೆ ಗಂಡಾಂತರ ತಪ್ಪಿದ್ದಲ್ಲ. ಹಿಂದೂ ಯುವಕರ ಮೇಲೆ ದೌರ್ಜನ್ಯ ಮಾಡಿದವರನ್ನು ಗುಂಡಿಟ್ಟು ಕೊಲ್ಲಬೇಕು ಎಂದು ಗುಡುಗಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ ಒಂದೂವರೆ ವರ್ಷವಾಗಿದೆ ಅಷ್ಟರಲ್ಲಿಯೇ ಆಡಳಿತದಲ್ಲಿ ಬ್ರಹ್ಮಾಂಡ ಭ್ರಷ್ಚಾಚಾರ ನಡೆದಿದೆ. ಕಾಂಗ್ರೆಸ್ ಅಧಿಕಾರ ಹಿಡಿದ ಆರಂಭದಲ್ಲಿ ರಾಜ್ಯದಲ್ಲಿ ಹನುಮಧ್ವಜ ತೆಗೆಸುವುದು, ಹಿಂದೂ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸುವುದು, ಅಲ್ಪಸಂಖ್ಯಾತರ ಮೇಲಿದ್ದ ಪ್ರಕರಣಗಳನ್ನು ಹಿಂಪಡೆಯುವುದು ನಡೆಯುತ್ತಲೇ ಇದೆ. ಅಲ್ಪಸಂಖ್ಯಾತರ ತುಷ್ಠೀಕರಣ ಹಾಗೂ ಹಿಂದೂಗಳ ಮೇಲೆ ದೌರ್ಜನ್ಯಗಳು ಇದೇ ರೀತಿ ಮುಂದಿನ ದಿನಗಳಲ್ಲೂ ನಡೆದರೆ ಸರ್ಕಾರ ವಿರುದ್ಧ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ತಾಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ.ಸುರೇಶ್, ಜಿಪಂ ಮಾಜಿ ಉಪಾಧ್ಯಕ್ಷ ಸುರೇಂದ್ರ ನಾಯ್ಕ, ತಾಪಂ ಮಾಜಿ ಉಪಾಧ್ಯಕ್ಷ ಸಿ.ಆರ್.ಶಿವಾನಂದ, ಮುಂಖಂಡರಾದ ಎಸ್.ಎಸ್.ಬೀರಪ್ಪ, ಸಿದ್ದಪ್ಪ, ಉಮೇಶ್ ಹಾಗೂ ಇತರರು ಇದ್ದರು.

- - -

ಕೋಟ್‌ ಕಾಂಗ್ರೆಸ್‍ನವರಿಗೆ ಹಿಂದೂ ಸಂಪ್ರದಾಯದ ಕುಂಕುಮ, ಕೇಸರಿ, ದೇವತೆಗಳು, ಗಣೇಶಮೂರ್ತಿ, ದೇವಸ್ಥಾನಗಳು ಕಂಡರೆ ಅಲರ್ಜಿ. ಆದರೆ, ಮುಸ್ಲಿಂ ಹಬ್ಬಗಳು, ಮಸೀದಿಗಳ ಪ್ರಾರ್ಥನೆಗಳಲ್ಲಿ ಭಾಗವಹಿಸಿ ಟೋಪಿ ಹಾಕಿಕೊಳ್ಳುವುದು ಬಲು ಇಷ್ಟ. ಇದಕ್ಕೆಲ್ಲ ಕಾರಣ ಮುಸ್ಲಿಂ ಮತ ಸೆಳೆಯುವ ಕಾಂಗ್ರೆಸ್‌ ಹುನ್ನಾರ

- ಎಂ.ಪಿ. ರೇಣುಕಾಚಾರ್ಯ, ಮಾಜಿ ಸಚಿವ

- - - -13ಎಚ್.ಎಲ್.ಐ3:

ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರು ಗ್ರಾಮದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಮತ್ತು ಹಿಂದೂ ಜಾಗೃತ ಸಭೆಯಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿದರು.