ಸಾರಾಂಶ
ತಾಲೂಕಿನ ಲಿಂಗದಹಳ್ಳಿ ಹೋಬಳಿ ತ್ಯಾಗದಬಾಗಿ, ಮಲ್ಲೇನಹಳ್ಳಿ ಸುತ್ತಮುತ್ತ ಮಂಗಳವಾರ 2 ತಂಡಗಳಲ್ಲಿ 26 ಕಾಡಾನೆಗಳು ದಾಂಧಲೆ ಮಾಡಿವೆ.ಒಂದು ತಂಡದಲ್ಲಿ 15 ಆನೆಗಳಿದ್ದರೆ, ಮತ್ತೊಂದು ತಂಡದಲ್ಲಿ 4 ಮರಿಯಾನೆಗಳು ಸೇರಿದಂತೆ 11 ಆನೆಗಳು ಹೊಲ ಗದ್ದೆ ಗಳನ್ನು ನಾಶಪಡಿಸಿರುವುದಲ್ಲದೆ ಬೋರ್‌ವೆಲ್‌ಗಳನ್ನು ತುಳಿದು ಹಾನಿ ಮಾಡಿವೆ.
ಕನ್ನಡಪ್ರಭ ವಾರ್ತೆ, ತರೀಕೆರೆ

ತ್ಯಾಗದಬಾಗಿ ಹಾಗೂ ಮಲ್ಲಿಗೇನಹಳ್ಳಿ ಗ್ರಾಮಗಳು ಸಮೀಪದ ಭದ್ರಾ ಅಭಯಾರಣ್ಯಕ್ಕೆ ಹೊಂದಿಕೊಂಡಿದ್ದು, ಅರಣ್ಯದಿಂದ ಹೊರಗೆ ಬಂದಿರುವ ಕಾಡಾನೆಗಳು ತೋಟ, ಹೊಲ, ಗದ್ದೆಗಳಲ್ಲಿ ಬೆಳೆದಿದ್ದ ಬೆಳೆಗಳನ್ನು ತುಳಿದು ನಾಶ ಮಾಡಿವೆ. ಬೋರ್ ವೆಲ್ ಗಳನ್ನು ತುಳಿದು ಹಾಕಿವೆ.ಅಭಯಾರಣ್ಯದಿಂದ ಕಾಡಾನೆಗಳು ಹೊರಗೆ ಬರದಂತೆ ಕಾಡಂಚಿನಲ್ಲಿ ಆನೆ ಕಂದಕಗಳನ್ನು ನಿರ್ಮಿಸಲಾಗಿದೆ. ಕಂದಕಗಳು ಇಲ್ಲದಿರುವ ಕಡೆಗಳಿಂದ ಆನೆಗಳು ಗಡಿ ದಾಟಿ ಹೊರಗೆ ಬಂದು ನೀರು ಮತ್ತು ಆಹಾರಕ್ಕಾಗಿ ಗ್ರಾಮಗಳ ಆಸುಪಾಸಿಗೆ ಬಂದಿವೆ ಎಂದು ತರೀಕೆರೆ ಎಸಿಎಫ್ ಉಮ್ಮರ್ ಬಾದ್‌ಷಾ ತಿಳಿಸಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಿ ಪಟಾಕಿ ಸಿಡಿಸಿ, ಡ್ರಮ್‌ಗಳಿಂದ ಭಾರಿ ಶಬ್ಧ ಮಾಡುವ ಮೂಲಕ ಕಾರ್ಯಾಚರಣೆ ನಡೆಸಿ ಎಲ್ಲಾ ಆನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸಲಾಗಿದೆ ಎಂದು ತಿಳಿಸಿದ್ದಾರೆ.ಕಾರ್ಯಾಚರಣೆಯಲ್ಲಿ ಕಾಡಾನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸುವುದರಲ್ಲಿ ಗ್ರಾಮಸ್ಥರು ಸಹಕರಿಸಿದ್ದಾರೆ ಎಂದು ತಿಳಿಸಿರುವ ಅವರು, ಆರ್.ಎಫ್.ಒ. ರಾಘವೇಂದ್ರ, ಡಿಆರ್ ಎಫ್ಒ ಮಾರುತಿಬಾಬು, ಸಿಬ್ಬಂದಿ ಸಚಿನ್, ಸುಬ್ರಹ್ಮಣ್ಯ ಭಾಗವಹಿಸಿದ್ದರು ಎಂದು ಹೇಳಿದ್ದಾರೆ. 17 ಕೆಸಿಕೆಎಂ 4ಲಿಂಗದಹಳ್ಳಿ ಹೋಬಳಿ ತ್ಯಾಗದಬಾಗಿ ಹಾಗೂ ಮಲ್ಲೇನಹಳ್ಳಿ ಸುತ್ತಮುತ್ತ ಮಂಗಳವಾರ ಕಂಡು ಬಂದ ಕಾಡಾನೆಗಳ ಹಿಂಡು.