ಅಕ್ರಮ ಮರಳು ಸಾಗಾಟಗಾರರ ಮೇಲೆ ಪ್ರಕರಣ ದಾಖಲಿಸುವ ಬದಲಿಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಶನಿವಾರ ರಾತ್ರಿ ಗ್ರಾಮೀಣ ಪೊಲೀಸ್ ಠಾಣೆ ಎದುರು ದಿಢೀರ್ ಪ್ರತಿಭಟನೆ ನಡೆಸಿದರು.

ರಾಣಿಬೆನ್ನೂರು: ಅಕ್ರಮ ಮರಳು ಸಾಗಾಟಗಾರರ ಮೇಲೆ ಪ್ರಕರಣ ದಾಖಲಿಸುವ ಬದಲಿಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಶನಿವಾರ ರಾತ್ರಿ ಗ್ರಾಮೀಣ ಪೊಲೀಸ್ ಠಾಣೆ ಎದುರು ದಿಢೀರ್ ಪ್ರತಿಭಟನೆ ನಡೆಸಿದರು. ಮಾಜಿ ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ತಾಲೂಕಿನ ಹರನಗಿರಿ ಗ್ರಾಮದ ದಲಿತ ಯುವಕರಾದ ಹನುಮಂತ ಅಣ್ಣಿಗೇರಿ, ಮಧು ಕಾಟೇಪ್ಪನವರ ಅವರಿಗೆ ಮರಳು ವಿಷಯವಾಗಿ ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ಎನ್.ಸಿ. ಕಾಡದೇವರಮಠ ಆ ಯುವಕರಿಗೆ ಮನದಂತೆ ಥಳಿಸಿ ದೌರ್ಜನ್ಯ ಎಸಗಿದ್ದಾರೆ. ಅದನ್ನು ಕೇಳಿದರೆ ನಾನೆ ಹೊಡೆದು ಎಲ್ಲರನ್ನೂ ಹೆಡೆಮುರಿ ಕಟ್ಟುತ್ತೇನೆ ಎಂದು ಹೇಳಿದ್ದಾನೆ. ಕಾನೂನು ರೀತಿ ಕ್ರಮಕೈಗೊಳ್ಳಲಿ, ಅದನ್ನು ಬಿಟ್ಟು ಮನದಂತೆ ವರ್ತಿಸಿದ್ದಾರೆ. ಅಕ್ರಮ ಮರಳು ದಂಧೆ ತಾಲೂಕಿನದ್ಯಾಂತ ನಡೆಯುತ್ತಿದೆ. ಅದನ್ನು ತಡೆಗಟ್ಟುವ ಬದಲು ಪೊಲೀಸ್ ಅಧಿಕಾರಿ ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿರುವುದು ಖಂಡನೀಯ. ಈ ಕೂಡಲೇ ಇದಕ್ಕೆ ಕಾರಣರಾದ ಅಧಿಕಾರಿಯನ್ನು ಅಮಾನತು ಮಾಡಬೇಕು. ಇಲ್ಲವಾದಲ್ಲಿ ನಾಳೆಯಿಂದ ಇಡೀ ಕ್ಷೇತ್ರದಾದ್ಯಂತ ಪ್ರತಿಭಟನೆಗೆ ಕರೆ ನೀಡುತ್ತೇನೆ ಎಂದರು.ನಗರ ಘಟಕ ಅಧ್ಯಕ್ಷ ಮಂಜುನಾಥ ಕಾಟಿ, ಚೋಳಪ್ಪ ಕಸವಾಳ, ಪರಮೇಶ ಗೂಳಣ್ಣನವರ, ಮಾಳಪ್ಪ ಪೂಜಾರ, ಸಿದ್ದು ಚಿಕ್ಕಬಿದರಿ, ನಿಂಗರಾಜ ಕೋಡಿಹಳ್ಳಿ, ಹುಚ್ಚಪ್ಪ ಮೇಡ್ಲೇರಿ, ರವಿ ತಳವಾರ, ಪ್ರಕಾಶ ಪೂಜಾರ, ಭೀಮಣ್ಣ ಎಡಚಿ, ಶ್ರೀನಿವಾಸ ಜಾಡಮಲಿ,ಅಮೋಘ ಬದಾಮಿ, ಶಿವಕುಮಾರ ನರಸಗೊಂಡರ, ರಾಜು ಬಣಕಾರ, ರಾಯಣ್ಣ ಮಾಕನೂರು, ಮೌನೇಶ ತಳವಾರ, ಹನುಮಂತಪ್ಪ ಮೀನಕಟ್ಟಿ, ರಮೇಶ ಕರಡೆಣ್ಣನವರ, ಕುಬೇರಪ್ಪ ಕೊಂಡಜ್ಜಿ, ನಾಗರಾಜ ಪವಾರ, ಬಸವರಾಜ ಚಳಗೇರಿ, ಮೈಲಪ್ಪ ಗೋಣಿಬಸಮ್ಮನವರ, ಮಲ್ಲಿಕಾರ್ಜುನ ಅಂಗಡಿ ಸೇರಿದಂತೆ ನೂರಾರು ಕಾರ್ಯಕರ್ತರು ಜಮಾಯಿಸಿದ್ದರು.