ಫೋಟೋಗ್ರಾಫರ್‌ ಮೇಲೆ ಹಲ್ಲೆ, ಕಾರಟಗಿಯಲ್ಲಿ ಖಂಡನೆ

| Published : May 25 2024, 12:48 AM IST

ಫೋಟೋಗ್ರಾಫರ್‌ ಮೇಲೆ ಹಲ್ಲೆ, ಕಾರಟಗಿಯಲ್ಲಿ ಖಂಡನೆ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರಿನಲ್ಲಿ ವೃತ್ತಿನಿರತ ಛಾಯಾಗ್ರಾಹಕನ ಹಲ್ಲೆ ನಡೆಸಿದ ಪುಂಡರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಕಾರಟಗಿ ತಾಲೂಕು ಫೋಟೋ ಮತ್ತು ವಿಡಿಯೋಗ್ರಾಪರ್ ಸಂಘದಿಂದ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

ಕಾರಟಗಿ: ಬೆಂಗಳೂರಿನಲ್ಲಿ ವೃತ್ತಿನಿರತ ಛಾಯಾಗ್ರಾಹಕನ ಹಲ್ಲೆ ನಡೆಸಿದ ಪುಂಡರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಇಲ್ಲಿನ ತಾಲೂಕು ಫೋಟೋ ಮತ್ತು ವಿಡಿಯೋಗ್ರಾಪರ್ ಸಂಘ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ಇಲ್ಲಿನ ತಹಸೀಲ್ದಾರ್ ಕಚೇರಿಗೆ ಶುಕ್ರವಾರ ತೆರಳಿದ ಸಂಘದ ಪದಾಧಿಕಾರಿಗಳು, ಹಲ್ಲೆ ನಡೆಸಿದವರನ್ನು ಬಂಧಿಸುವಂತೆ ಒತ್ತಾಯಿಸಿ, ಗ್ರೇಡ್-೨ ತಹಸೀಲ್ದಾರ್ ವಿಶ್ವೇಶ್ವರಯ್ಯ ಸಾಲಿಮಠ ಅವರಿಗೆ ಮನವಿ ಸಲ್ಲಿಸಿದರು.

ಸಂಘದ ತಾಲೂಕಾಧ್ಯಕ್ಷ ಉಮಾಪತಿ ಹೊಸಮನಿ ಮಾತನಾಡಿ, ಮೇ ೧೮ರಂದು ಬೆಂಗಳೂರಿನ ಶಿವಾಜಿನಗರದ ಕಲ್ಯಾಣ ಮಂಟಪವೊಂದರಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭವೊಂದರ ಕಾರ್ಯಕ್ರಮದ ಫೋಟೋ ಹಾಗೂ ವಿಡಿಯೋ ಮಾಡುತ್ತಿದ್ದ ಛಾಯಾಚಿತ್ರಗಾರನ ಮೇಲೆ ಮನಬಂದಂತೆ ಥಳಿಸಿ ಮಾರಣಾಂತಿಕ ಹಲ್ಲೆ ನಡೆಸಿರುವುದು ಅಮಾನವೀಯ ಘಟನೆಯಾಗಿದೆ. ಈ ಘಟನೆಯಿಂದ ನಮಗೆಲ್ಲ ರಕ್ಷಣೆಯಿಲ್ಲ ಎನ್ನುವುದು ಸಾಬೀತಾಗಿದೆ. ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ವೃತ್ತಿನಿರತ ಛಾಯಾಗ್ರಾಹಕರಿಗೆ ರಕ್ಷಣೆ ನೀಡಬೇಕು. ಹಲ್ಲೆ ಮಾಡಿರುವ ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಅದೇ ರೀತಿ ಹಲ್ಲೆಗೊಳಗಾದ ಛಾಯಾಗ್ರಾಹಕನಿಗೆ ರಾಜ್ಯ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ಜತೆಗೆ ಇಂಥ ಪ್ರಕರಣಗಳು ಮರುಕಳಿಸದಂತೆ ಭದ್ರತೆ ಒದಗಿಸಬೇಕು. ಅದೇ ರೀತಿ ಸರ್ಕಾರದಿಂದ ಛಾಯಾಗ್ರಾಹಕರಿಗೂ ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳಲ್ಲಿ ಸೇರಿಸಿ ಅವರ ಬದುಕಿಗೆ ನೆರವಾಗಬೇಕು ಎಂದರು.

ಛಾಯಾಗ್ರಾಹಕರ ಸಂಘದ ಉಪಾಧ್ಯಕ್ಷ ನಾಗರಾಜ್ ಚವ್ಹಾಣ್, ಕಾರ್ಯದರ್ಶಿ ಸಂಗಮೇಶ್, ಸುನೀಲ್, ಕಿರಣ್, ಮಹಾದೇವ್, ಜಗದೀಶ್, ಜಮಾನಸಿಂಗ್, ಕಾರ್ತಿಕ್, ಸುಕುಮನಿ, ಸಂಗಮೇಶ್ ಬಿ., ಸಿದ್ದರಾಮೇಶ್ವರ, ಬಸವರಾಜ್ ಹೊಸಮನಿ, ಯಮನೂರ, ಹನುಮಂತಪ್ಪ, ಕೃಷ್ಣಸಿಂಗ್, ಲಾಜರ್ ವಾಸುದೇವ್, ನಾಗರಾಜ್, ವೀರೇಶ್, ಅಬ್ದುಲ್ ರಜಾಕ್, ಬಿ. ವೀರೇಶ್, ಸುನೀಲ್, ಶರಣು ರಾಮನಗರ, ಶರಣು, ಅನಿಲ್ ಅರುಣ್, ಮಂಜುನಾಥ್ ಪವರ್, ವಿನಾಯಕ್, ಗಂಗಾಧರ್ ಇನ್ನಿತರರು ಇದ್ದರು.