ಟಿಎಸ್‌ಎಸ್‌ ಸಿಬ್ಬಂದಿ, ಪೊಲೀಸರ ಮೇಲೆ ಹಲ್ಲೆ: ಇಬ್ಬರು ಯುವತಿಯರ ಸೆರೆ

| Published : Sep 06 2024, 01:04 AM IST

ಟಿಎಸ್‌ಎಸ್‌ ಸಿಬ್ಬಂದಿ, ಪೊಲೀಸರ ಮೇಲೆ ಹಲ್ಲೆ: ಇಬ್ಬರು ಯುವತಿಯರ ಸೆರೆ
Share this Article
  • FB
  • TW
  • Linkdin
  • Email

ಸಾರಾಂಶ

ಶಿರಸಿ ತಾಲೂಕಿನ ತಡಗುಗುಣಿ ಸಮೀಪದ ಸಂತೆಮನೆಯ ಪವಿತ್ರಾ ಹರಿಹರ ಹೆಗಡೆ (೩೩) ಹಾಗೂ ರಂಜಿತಾ ಹರಿಹರ ಹೆಗಡೆ (೩೫) ದಾಂಧಲೆ ನಡೆಸಿ, ಬಂಧಿತರಾದ ಯುವತಿಯರು.

ಶಿರಸಿ: ಪ್ರತಿಷ್ಠಿತ ಟಿಎಸ್‌ಎಸ್ ಸಂಸ್ಥೆಗೆ ಅಕ್ರಮವಾಗಿ ಒಳನುಗ್ಗಿ ಅಲ್ಲಿನ ಸಿಬ್ಬಂದಿಯನ್ನು ನಿಂದಿಸಿ, ಅದನ್ನು ತಡೆಯಲು ಬಂದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಇಬ್ಬರು ಯುವತಿಯರನ್ನು ಹೊಸ ಮಾರುಕಟ್ಟೆ ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.ಶಿರಸಿ ತಾಲೂಕಿನ ತಡಗುಗುಣಿ ಸಮೀಪದ ಸಂತೆಮನೆಯ ಪವಿತ್ರಾ ಹರಿಹರ ಹೆಗಡೆ (೩೩) ಹಾಗೂ ರಂಜಿತಾ ಹರಿಹರ ಹೆಗಡೆ (೩೫) ದಾಂಧಲೆ ನಡೆಸಿ, ಬಂಧಿತರಾದ ಯುವತಿಯರು.ಘಟನೆಯ ವಿವರ: ಇವರ ತಂದೆಯವರು ೨೦೧೦ರಲ್ಲಿ ಟಿಎಸ್‌ಎಸ್‌ನಲ್ಲಿ ಸಾಲ ಪಡೆದಿದ್ದರು. ಅದನ್ನು ತೀರಿಸಲಾಗದೇ ಸಾಲಕ್ಕೆ ಬಡ್ಡಿ ಬೆಳೆದು ಕಳೆದ ನಾಲ್ಕೈದು ವರ್ಷದ ಹಿಂದೆಯೇ ಜಮೀನು ಲೀಲಾವಾಗಿದೆ ಎನ್ನಲಾಗಿದೆ. ಅವರ ಜಮೀನನ್ನು ಬೇರೆಯವರು ಖರೀದಿಸಿದ್ದು, ಈಗ ನಮ್ಮ ಜಮೀನನ್ನು ವಾಪಸ್‌ ನೀಡಿ, ಎಂದು ಸೆ. ೪ರಂದು ಸಂಜೆ ೫ ಗಂಟೆ ಸುಮಾರಿಗೆ ಟಿಎಸ್‌ಎಸ್ ಕಚೇರಿಗೆ ಆಗಮಿಸಿ, ಜಗಳ ತೆಗೆದಿದ್ದಾರೆ.

ಆಗ ಅಲ್ಲಿದ್ದ ಆಡಳಿತ ಮಂಡಳಿಯವರು ಹಾಗೂ ಸಿಬ್ಬಂದಿ ಸರಿಯಾದ ಮಾಹಿತಿ ನೀಡಿ, ವಿಷಯ ಎಲ್ಲವನ್ನೂ ತಿಳಿಸಿದ್ದಾರೆ. ಆದರೂ ಅವರ ಮಾತಿಗೆ ಒಪ್ಪದೇ ಕಂಡ ಕಂಡವರ ಹೆಸರು ಹೇಳಿ ದರ್ಪ ತೋರಿಸಿದ್ದಲ್ಲದೇ, ಸಮಾಜದ ಗಣ್ಯ ವಕ್ತಿಗಳ ಹೆಸರು ಹೇಳಿ ಅವರಿಗೆ ಬಾಯಿಗೆ ಬಂದಂತೆ ಅವಾಚ್ಯ ಶಬ್ದದಿಂದ ನಿಂದಿಸಿದರು ಎನ್ನಲಾಗಿದೆ.

ಇಷ್ಟೆಲ್ಲ ಘಟನೆ ನಡೆದರೂ ಟಿಎಸ್‌ಎಸ್‌ನ ಸಿಬ್ಬಂದಿ ಮನವೊಲಿಸಲು ಪ್ರಯತ್ನಿಸಿದರೂ ಅವರ ಮೇಲೆ ಹಲ್ಲೆಗೆ ಮುಂದಾದಾಗ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ಅಧಿಕಾರಿಗಳು ಆಗಮಿಸಿ, ಯುವತಿಯರಿಗೆ ಬುದ್ಧಿವಾದ ಹೇಳಿದರೂ ಒಪ್ಪದೇ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಟಿಎಸ್‌ಎಸ್‌ನ ಉಪವ್ಯವಸ್ಥಾಪಕ ಪ್ರಕಾಶ ನರಸಿಂಹ ಹೆಗಡೆ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.ಮಹಿಳಾ ಪಿಎಸ್‌ಐ ಕರ್ತವ್ಯಕ್ಕೆ ಅಡ್ಡಿ: ವಿಷಯ ತಿಳಿದು ಸ್ಥಳಕ್ಕೆ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯ ಪಿಎಸ್‌ಐ ರತ್ನಾ ಕುರಿ ತಮ್ಮ ಮಹಿಳಾ ಸಿಬ್ಬಂದಿ ಜತೆ ತೆರಳಿ ಯುವತಿಯತಿಗೆ ಬುದ್ಧಿವಾದ ಹೇಳಿದ್ದಾರೆ. ಅಲ್ಲದೇ ಗಲಾಟೆ ಮಾಡಬಾರದೆಂದು ತಿಳಿಸಿದ್ದಾರೆ. ಆಗ ಯುವತಿಯರು ಪೊಲೀಸರ ಜತೆ ವಾಗ್ವಾದ ನಡೆಸಿದರು. ಅಲ್ಲದೇ ಮಹಿಳಾ ಪಿಎಸ್‌ಐ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡಿದ್ದಾರೆ. ಯುವತಿಯರಿಬ್ಬರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಪಿಎಸ್‌ಐ ರತ್ನಾ ಕುರಿ ದೂರು ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.

ತನಿಖಾ ಪಿಎಸ್‌ಐ ರಾಜಕುಮಾರ ಉಕ್ಕಲಿ ನೇತೃತ್ವದಲ್ಲಿ ಸಿಬ್ಬಂದಿ ಈ ಯುವತಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ೧೪ ದಿನ ನ್ಯಾಯಾಂಗ ಬಂಧನ ವಿಧಿಸಿದೆ.