ಎಸ್‌ಬಿಐ ಶಾಖೆಯಲ್ಲಿ ದರೋಡೆ ಮಾಡಲು ಯತ್ನಿಸಿದ್ದ ಖದೀಮರು ಬ್ಯಾಂಕ್‌ನ ಹಿಂಬದಿ ಗೋಡೆ ಒಡೆದು ಒಳ ಹೋಗಲು ಯತ್ನಿಸಿದ್ದರು. ಅರ್ಧ ಗೋಡೆಯೊಡೆದ ನಂತರ ಬ್ಯಾಂಕ್‌ನಲ್ಲಿ ಸೈರನ್ ಸೌಂಡ್ ಆಗುತ್ತಿದ್ದಂತೆ ಖದೀಮರು ಅರ್ಧಕ್ಕೆ ಬಿಟ್ಟು ಪರಾರಿಯಾಗಿದ್ದಾರೆ.
ನವಲಗುಂದ:
ತಾಲೂಕಿನ ಶಿರೂರು ಗ್ರಾಮದಲ್ಲಿನ ಎಸ್‌ಬಿಐ ಶಾಖೆಯ ಗೋಡೆ ಒಡೆದು ದರೋಡೆ ಮಾಡಲು ಯತ್ನಿಸಿರುವ ಘಟನೆ ಸೋಮವಾರ ರಾತ್ರಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.ಗ್ರಾಮದ ಎಸ್‌ಬಿಐ ಶಾಖೆಯಲ್ಲಿ ದರೋಡೆ ಮಾಡಲು ಯತ್ನಿಸಿದ್ದ ಖದೀಮರು ಬ್ಯಾಂಕ್‌ನ ಹಿಂಬದಿ ಗೋಡೆ ಒಡೆದು ಒಳ ಹೋಗಲು ಯತ್ನಿಸಿದ್ದರು. ಅರ್ಧ ಗೋಡೆಯೊಡೆದ ನಂತರ ಬ್ಯಾಂಕ್‌ನಲ್ಲಿ ಸೈರನ್ ಸೌಂಡ್ ಆಗುತ್ತಿದ್ದಂತೆ ಖದೀಮರು ಅರ್ಧಕ್ಕೆ ಬಿಟ್ಟು ಪರಾರಿಯಾಗಿದ್ದಾರೆ. ಮಂಗಳವಾರ ಬೆಳಗ್ಗೆ ಬ್ಯಾಂಕ್ ಸಿಬ್ಬಂದಿ ಕೆಲಸಕ್ಕೆ ಬಂದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ನವಲಗುಂದ ಠಾಣೆ ಸಿಪಿಐ ರವಿಕುಮಾರ ಕಪ್ಪತ್ತನವರ, ಪಿಎಸ್ಐ ಜನಾರ್ಧನ ಭಟ್ರಳ್ಳಿ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಈ ಕುರಿತಾಗಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಳ್ಳರ ಪತ್ತೆಗೆ ಜಾಲ ಬೀಸಿದ್ದಾರೆಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.