ಸಾರಾಂಶ
ಅಕ್ರಮವಾಗಿ ಒಣಗಾಂಜಾ ಮಾರಾಟ ಮಾಡಲು ಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಯನ್ನು ಅಗರ-ಮಾಂಬಳ್ಳಿ ಪೊಲೀಸರು ಬಂಧಿಸಿದ್ದಾರೆ.
ಕೊಳ್ಳೇಗಾಲ: ಅಕ್ರಮವಾಗಿ ಒಣಗಾಂಜಾ ಮಾರಾಟ ಮಾಡಲು ಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಯನ್ನು ಅಗರ-ಮಾಂಬಳ್ಳಿ ಪೊಲೀಸರು ಬಂಧಿಸಿದ್ದಾರೆ.
ಕೊಳ್ಳೇಗಾಲ ನೂರ್ ಮೊಹಾಲ್ಲಾ ಫೈಜಾನ್ ಪಾಷ ಬಂಧಿತ ಆರೋಪಿ. ಈತನಿಂದ ಸುಮಾರು 108 ಗ್ರಾಂ ತೂಕದ ಒಣಗಾಂಜಾವನ್ನು ಜಪ್ತಿ ಮಾಡಿದ್ದಾರೆ.ಆರೋಪಿ ತಾಲ್ಲೂಕಿನ ಕುಣಗಳ್ಳಿ ಗ್ರಾಮದ ಕೆರೆಯ ರಸ್ತೆಯ ಬಳಿ ಒಣಗಾಂಜಾ ಮಾರಾಟ ಮಾಡುತ್ತಿರುವುದರ ಖಚಿತ ಮಾಹಿತಿ ಮೇರೆಗೆ ಪೊಲೀಸರು ಆರೋಪಿಯನ್ನು ಒಣಗಾಂಜಾ ಸಮೇತ ಬಂಧಿಸಿದ್ದಾರೆ.
ಈ ಸಂಬಂಧ ಅಗರ-ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಬಂಧಿತನನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದಾರೆ.ದಾಳಿಯಲ್ಲಿ ಅಗರ - ಮಾಂಬಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಕರಿಬಸಪ್ಪ, ಹೆಚ್.ಸಿ ಸಕ್ರುನಾಯ್ಕ, ಸಿದ್ದರಾಜು, ಕಾನ್ಸಟೇಬಲ್ ಶಿವಕುಮಾರ್, ಬಸವರಾಜು, ಶಿವಕುಮಾರ್, ಚಾಲಕ ಮಲ್ಲೇಶ್ ಇದ್ದರು.