ಗಾಂಜಾ ಮಾರಾಟ ಯತ್ನ; ತ್ರಿಪುರಾ ಮೂಲದ ಇಬ್ಬರು ಯುವಕರು ವಶ

| Published : Mar 29 2024, 12:52 AM IST

ಸಾರಾಂಶ

ಖಚಿತ ಮಾಹಿತಿಯಂತೆ ಮೂಲ್ಕಿ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ ಆರೋಪಿಗಳಿಂದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಕನ್ನಡಪ್ರ ವಾರ್ತೆ ಮೂಲ್ಕಿ ಮೂಲ್ಕಿ ಕೆ.ಎಸ್. ರಾವ್ ನಗರದ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟಕ್ಕೆ ಯತ್ನಿಸಿದ ತ್ರಿಪುರ ಮೂಲದ ಆರೋಪಿಗಳನ್ನು ಖಚಿತ ಮಾಹಿತಿಯಂತೆ ಮೂಲ್ಕಿ ಪೊಲೀಸರು ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ಬಂಧಿಸಿದ್ದಾರೆ. ಆರೋಪಿಗಳಿಂದ ಲಕ್ಷಾಂತರ ರು. ಮೌಲ್ಯದ ಸುಮಾರು 6 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ತ್ರಿಪುರ ಮೂಲದ ಸಚ್ಲಾಂಗ್ ದೆಬರ್ಮ (22) ಮತ್ತು ಪ್ರಮೇಶ್ ದೆಬರ್ಮ(22) ಬಂಧಿತರು. ಆರೋಪಿಗಳು ಗಾಂಜಾವನ್ನು ತಲಾ ಒಂದುವರೆ ಕೆಜಿಯಂತೆ ಪಾರ್ಸೆಲ್ ಮಾಡಿ ಸೂಟ್‌ಕೇಸ್‌ನ ಒಳಗಡೆ ಪ್ಯಾಕ್ ಮಾಡಿ ಅನುಮಾನ ಬಾರದಂತೆ ಬಚ್ಚಿಟ್ಟು ಮೂಲ್ಕಿ ರೈಲ್ವೆ ಸ್ಟೇಷನ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಖಚಿತ ಮಾಹಿತಿಯಂತೆ ಮೂಲ್ಕಿ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ ಆರೋಪಿಗಳಿಂದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ರೈಲ್ವೆ ಸ್ಟೇಷನ್ ಮುಖಾಂತರ ಮಣಿಪಾಲಕ್ಕೆ ತೆರಳಿ ವಿದ್ಯಾರ್ಥಿಗಳಿಗೆ ಗಾಂಜಾವನ್ನು ಮಾರಾಟ ಮಾಡುವ ಸಲುವಾಗಿ ಹೋಗುತ್ತಿದ್ದರು ಎಂದು ತಿಳಿದುಬಂದಿದೆ. ಗಾಂಜಾ ಮಾರಾಟಗಾರರ ಕಿಂಗ್ ಪಿನ್ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಕಾರ್ಯಾಚರಣೆಯಲ್ಲಿ ಮೂಲ್ಕಿ ಪೊಲೀಸ್ ಉಪ ನಿರೀಕ್ಷಕ ವಿನಾಯಕ ಬಾವಿಕಟ್ಟೆ, ಸಿಬ್ಬಂದಿ ಸಂಜೀವ, ಚಂದ್ರಶೇಖರ್, ಅರುಣ್ ಕುಮಾರ್, ಸುರೇಂದ್ರ, ವೀರೇಶ್ ಭಾಗವಹಿಸಿದ್ದರು.

ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಕಾರ್ಮಿಕ ಗಾಯ

ಮೂಲ್ಕಿ: ಮೂಲ್ಕಿ ಪೊಲೀಸ್‌ ಠಾಣಾ ವ್ಯಾಪ್ತಿಯ ತಾಳಿಪಾಡಿ ಗ್ರಾಮದ ಕಿನ್ನಿಗೋಳಿ ಬಸ್ ನಿಲ್ದಾಣ ಹಿಂದುಗಡೆಯಲ್ಲಿರುವ ಜೆಎಂ ಬಿಲ್ಡಿಂಗ್ ಪಕ್ಕದಲ್ಲಿ ಅರುಣ್ ಶೆಟ್ಟಿ ಎಂಬುವರ ಮಾಲಿಕತ್ವದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡದಲ್ಲಿ ಕೆಲಸ ಮಾಡುವಾಗ ಕಾರ್ಮಿಕನೊಬ್ಬ ಬಿದ್ದು ಗಾಯಗೊಂಡಿರುವ ಘಟನೆ ನಡೆದಿದೆ.ಪಶ್ಚಿಮ ಬಂಗಾಳ ಮೂಲದ ರಾಣ ಬಿಸ್ವಾಸ್ ಗಾಯಗೊಂಡ ಕಾರ್ಮಿಕ. ಮಾ.23ರಂದು ಇತರ ಕಾರ್ಜಮಿಕರೊಂದಿಗೆ ಈತ 2 ನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದಾಗ ಕಾಲು ಜಾರಿ ನೆಲಮಹಡಿಗೆ ಬಿದ್ದು ತಲೆಯ ಹಿಂಬಾಗಕ್ಕೆ ಗಂಬೀರ ಗಾಯವಾಗಿದೆ. ಈತನನ್ನು ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿತೇಶ್‌ ಅವರು ಮೂಲ್ಕಿ ಠಾಣೆಯಲ್ಲಿ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.