ಸಾರಾಂಶ
ತಾಲೂಕಿನ ಗೊರೇಬಾಳ ಗ್ರಾಮದಲ್ಲಿ ಮಂಗಳವಾರ ಎಂಎಲ್ಸಿ ಮೇಲೆ ಹಲ್ಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ಹೂಲಗೇರಿ ಬಣ ಹಾಗೂ ಬಯ್ಯಾಪುರ ಬಣದ ಮೇಲೆ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ.
ಕನ್ನಡಪ್ರಭ ವಾರ್ತೆ ಲಿಂಗಸುಗೂರು
ತಾಲೂಕಿನ ಗೊರೇಬಾಳ ಗ್ರಾಮದಲ್ಲಿ ಮಂಗಳವಾರ ಎಂಎಲ್ಸಿ ಮೇಲೆ ಹಲ್ಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ಹೂಲಗೇರಿ ಬಣ ಹಾಗೂ ಬಯ್ಯಾಪುರ ಬಣದ ಮೇಲೆ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ.ಮಂಗಳವಾರ ಗೊರೇಬಾಳ ಗ್ರಾಮದಲ್ಲಿ ಎಂಎಲ್ಸಿ ಶರಣಗೌಡ ಪಾಟೀಲ್ ಬಯ್ಯಾಪೂರ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭೂಪನಗೌಡ ಪಾಟೀಲ್ ಕರಡಕಲ್ ಸೇರಿದಂತೆ ಹೂಲಗೇರಿ ಬಣದ ಮುಖಂಡರು ಕಾರ್ಯಕರ್ತರ ಮಧ್ಯೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ ಯಾರೆಂಬುದು ಗೊತ್ತಿಲ್ಲ ಎಂಬ ಎಂಎಲ್ಸಿ ಹೇಳಿಕೆ ಖಂಡಿಸಿ ತೀವ್ರ ಮಾತಿನ ಚಕಮಕಿ ನಡೆದು ಎಂಎಲ್ಸಿ ಕಾರು ಅಡ್ಡಗಟ್ಟಿದ್ದರು. ಅಲ್ಲದೇ, ಬಯ್ಯಾಪುರ ಬಣದವರು ನೇಮಕ ಮಾಡಿದ ಎಸ್.ಟಿ. ಮೋರ್ಚಾ ತಾಲೂಕು ಅಧ್ಯಕ್ಷ ಜಗದೀಶಗೌಡ ಹಾಲಬಾವಿ ಮೇಲೆ ಹಲ್ಲೆ ನಡೆಸಿದ ಕುರಿತು ವಿಡಿಯೋ ಭಾರಿ ವೈರಲ್ ಆಗಿ ಕಾಂಗ್ರೆಸ್ ಬಣ ಬಡಿದಾಟ ಬಯಲಿಗೆ ಬಂದಿತ್ತು.
ಘಟನೆಗೆ ಸಂಬಂಧಿಸಿದಂತೆ ಗೊರೇಬಾಳ ಗ್ರಾಮದಲ್ಲಿ ವಿಎಸ್ಎಸ್ಎನ್ ಕಟ್ಟಡ ಉದ್ಘಾಟಿಸಿ ಎಂಎಲ್ಸಿ ಶರಣಗೌಡ ಬಯ್ಯಾಪುರ, ಯೋಜನಾ ಪ್ರಾಧಿಕಾರ ಅಧ್ಯಕ್ಷ ಭೂಪನಗೌಡ ಕರಡಕಲ್, ಗ್ಯಾರಂಟಿ ಯೋಜನೆ ಅಧ್ಯಕ್ಷ ಪಾಮಯ್ಯ ಮುರಾರಿ ಸಮಾರಂಭ ಮುಗಿಸಿ ಕೊಂಡು ಬರುವಾಗ ಹಾಲಬಾವಿ ಗ್ರಾಮದ ಪ್ರೇಮಗೌಡ (37), ಚೆನ್ನಬಸವ (37), ಶಿವರಾಜ (28). ಮಂಜುನಾಥ (37), ಹನುಮನಗೌಡ (37) ಸಂಗಮೇಶ ಆನಾಹೊಸೂರ, ದೇವಪ್ಪ ಹಿರೇಉಪ್ಪೇರಿ ಆರೋಪಿತರು ಅಕ್ರಮಕೂಟ ಕಟ್ಟಿಕೊಂಡು ಬಂದು ಎಂಎಲ್ಸಿ ಶರಣಗೌಡ ಬಯ್ಯಾಪುರ ನಮ್ಮ ಸಮಾಜದ ಬಗ್ಗೆ ಅವಹೇಳಕಾರಿಯಾಗಿ ಮಾತನಾಡಿದ್ದೀರೆಂದು ಏರುಧ್ವನಿಯಲ್ಲಿ ಮಾತನಾಡಲು ಶುರು ಮಾಡಿದರು. ಅವರ ಜೊತೆಯಲ್ಲಿದ್ದ ದೂರುದಾರ ಜಗದೀಶ ಗೌಡ ಪ್ರಶ್ನಿಸಿದನು ಆಗ ಆರೋಪಿಗಳು ನಿನ್ನನ್ನು ಎಸ್.ಟಿ. ಮೋರ್ಚಾ ಅಧ್ಯಕ್ಷರನ್ನಾಗಿ ಮಾಡಿದ್ದು ಯಾರು? ಎಂದು ಪ್ರಶ್ನಿಸಿ ಕೈಯಿಂದ ತಲೆಗೆ ಹೊಡೆದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಊರಾಗಿ ನಿನ್ನ ನೋಡಿ ಕೊಳ್ಳು ತ್ತೇವೆ ಎಂದು ಕೊಲೆ ಬೆದರಿಕೆ ಹಾಕಿದ್ದರು. ಇದಕ್ಕೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ ಕುಮಕ್ಕು ನೀಡಿದ್ದಾರೆಂದು ದೂರು ನೀಡಿದ್ದು, ದೂರು ಆಧರಿಸಿ 189(2), 19(2), 115(2), 126(2), 352 ಸಹಿತ ಬಿಎನ್ಎಸ್ ಕಾಯ್ದೆ ಕಲಂ 143, 147, 323, 341, 504, 506 ರೆ/ವಿ 149 ಐಪಿಸಿ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಯ್ಯಾಪುರ ಬಣದ ವಿರುದ್ಧವೂ ಪ್ರತಿದೂರು ದಾಖಲಾಗಿದೆ ಎಂದು ತಿಳಿದು ಬಂದಿದೆ.