ಸಾರಾಂಶ
ಕಾರಿಗೆ ಲಾರಿಯಿಂದ ಅಪಘಾತಪಡಿಸಿ ಕೊಲೆಗೆ ಯತ್ನಿಸಿರುವ ಘಟನೆ ದೊಡ್ಡಕುಂದ ಗ್ರಾಮದಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಪೆಟ್ರೋಲ್ ಬಂಕ್ ಮಾಲೀಕೊಬ್ಬರ ಕಾರಿಗೆ ಲಾರಿಯಿಂದ ಅಪಘಾತ ಪಡಿಸಿ ಕೊಲೆಗೆ ಯತ್ನಿಸಿರುವ ಘಟನೆ ಮಂಗಳವಾರ ರಾತ್ರಿ ಕೊಡ್ಲಿಪೇಟೆ ಸಮಿಪದ ದೊಡ್ಡಕುಂದ ಗ್ರಾಮದಲ್ಲಿ ನಡೆದಿದೆ. ಕೊಡ್ಲಿಪೇಟೆ ಹ್ಯಾಂಡ್‍ಪೋಸ್ಟ್‌ನಲ್ಲಿರುವ ಎಸ್‍ಆರ್ ಪೆಟ್ರೋಲ್ ಬಂಕ್ ಮಾಲೀಕ ಮತ್ತು ಕೊಡ್ಲಿಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಜೆ.ಕೆ.ತೇಜಕುಮಾರ್ ಮೇಲೆ ದುಷ್ಕರ್ಮಿಗಳು ಲಾರಿ ಹತ್ತಿಸಿ ಕೊಲೆ ಮಾಡುವ ಯತ್ನ ನಡೆಯಿತು.ಮಂಗಳವಾರ ರಾತ್ರಿ ತೇಜಕುಮಾರ್ ದೊಡ್ಡಕುಂದ ಗ್ರಾಮದ ಕಿರಿಕೊಡ್ಲಿ ರಸ್ತೆ ಮೂಲಕ ತನ್ನ ಕಾರಿನಲ್ಲಿ ಮನೆಗೆ ಹೋಗುತ್ತಿದ್ದಾಗ ದುಷ್ಕರ್ಮಿಗಳು ಲಾರಿಯಿಂದ ಕಾರಿಗೆ ಡಿಕ್ಕಿಗೊಳಿಸಿದ್ದಾರೆ. ಲಾರಿ ಗುದ್ದಿದ ರಭಸಕ್ಕೆ ಕಾರು ಹಿಂತಿರುಗಿ ನಿಂತಿದೆ ಮತ್ತೆ ದುಷ್ಕರ್ಮಿಗಳು ಲಾರಿಯನ್ನು ಹಿಂದೆ ಚಲಿಸಿ ಹಿಂಬದಿಯಿಂದ ಡಿಕ್ಕಿ ಪಡಿಸಲು ಯತ್ನಿಸುತ್ತಿದ್ದಾಗ ಇದೆ ರಸ್ತೆಯಲ್ಲಿ ಬರುತ್ತಿದ್ದ ಬೈಕ್ ಮೇಲೆ ಲಾರಿಯನ್ನು ಹತ್ತಿಸಲಾಗಿದೆ. ಈ ಸಂದರ್ಭ ಬೈಕ್‍ನಲ್ಲಿ ಇಬ್ಬರು ನೀರುಗುಂದ ಗ್ರಾಮದ ಇಬ್ಬರು ಬೈಕ್ ಸವಾರರು ಅಪಘಾತದಿಂದ ಪಾರಾಗಿದ್ದಾರೆ. ಅಪಘಾತಗೊಳಿಸಿದ ಲಾರಿ ರಸ್ತೆ ಬದಿಯಲ್ಲಿದ್ದ ಗುಂಡಿಗೆ ಇಳಿದ ಕಾರಣ ಲಾರಿ ಬಿಟ್ಟು ಚಾಲಕ ಸೇರಿದಂತೆ ಮತ್ತೊಬ್ಬ ಪರಾರಿಯಾಗಿದ್ದಾರೆ.
ಕೆರೆಗನಹಳ್ಳಿ ಗ್ರಾಮದ ಕೆ.ಟಿ.ರಮೇಶ್ ಮಾಲಿಕತ್ವದ ಲಾರಿ ಎಂಬುವುದು ಪತ್ತೆಯಾಗಿದ್ದು ಈ ಕುರಿತು ತೇಜಕುಮಾರ್ ಕೆರಗನಹಳ್ಳಿ ಗ್ರಾಮದ ಕೆ.ಆರ್.ರಮೇಶ್ ಮತ್ತು ಕೊಡ್ಲಿಪೇಟೆಯ ದಿವಾಕರ್ ಅವರ ವಿರುದ್ದ ಶನಿವಾರಸಂತೆ ಪೊಲೀಸರಿಗೆ ದೂರು ನೀಡಿರುವ ಹಿನ್ನಲೆ ಪೊಲೀಸರು ಬುಧವಾರ ಸ್ಥಳಕ್ಕೆ ಬಂದು ಮಹಜರು ನಡೆಸಿ ತನಿಖೆ ನಡೆಸುತ್ತಿದ್ದಾರೆ. ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.;Resize=(128,128))
;Resize=(128,128))
;Resize=(128,128))
;Resize=(128,128))