- ವೈದ್ಯರ ಚಿಕಿತ್ಸೆಗೆ ಸ್ಪಂದಿಸುತ್ತಿರುವ ಟಂಟಂ ಚಾಲಕ । ಪ್ರಾಣಾಪಾಯದಿಂದ ಚಾಲಕ ಪಾರು
---ಕನ್ನಡಪ್ರಭ ವಾರ್ತೆ ಕಲಬುರಗಿ
ಅಫಜಲಪುರ ತಾಲೂಕಿನ ಪ್ರಸಿದ್ಧ ಯಾತ್ರಾಸ್ಥಳ ದೇವಲಗಾಣಗಾಪುರದಲ್ಲಿ ಶುಕ್ರವಾರ ಟಂ-ಟಂ ಚಾಲಕನನ್ನು ಕೊಲೆಗೆ ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ.ಶುಕ್ರವಾರ ಬೆಳಗಿನ ಜಾವ 2:17ರ ಈ ಬರ್ಬರ ಹತ್ಯೆಗೆ ಯತ್ನಿಸಿದ್ದು, ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಟಂ-ಟಂ ಚಾಲಕನನ್ನು 19 ವರ್ಷದ ದತ್ತು ಎಂದು ಗುರುತಿಸಲಾಗಿದೆ.
ಕೇವಲ ದಿಟ್ಟಿಸಿ ನೋಡಿದ ಎಂಬ ವಿಚಾರವೇ ನೆಪವಾಗಿ, ಟಂ-ಟಂ ಚಾಲಕನಾಗಿದ್ದ ಯುವಕ ದತ್ತುನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೆ ಯತ್ನಿಸಲಾಗಿತ್ತು. ಸಣ್ಣ ವಿಚಾರವೇ ನೆಪವಾಗಿ ಇಟ್ಟುಕೊಂಡು ಟಂ-ಟಂ ಆಟೋ ಚಾಲಕನಾಗಿದ್ದ 19 ವರ್ಷದ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಘಟನೆ ಅಫಜಲಪುರ ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳವಾದ ದೇವಲ ಗಾಣಗಾಪುರದಲ್ಲಿ ನಡೆದಿದೆ. ಈ ಘಟನೆ ಗ್ರಾಮದ ಜನತೆಯನ್ನು ಬೆಚ್ಚಿ ಬೀಳಿಸಿದೆ.
ದೇವಲಗಾಣಗಾಪುರದ ಸಂಗಮ ರಸ್ತೆಯಲ್ಲಿರುವ ಅವಧೂತ ಆಶ್ರಮದ ಬಳಿ ಈ ಕ್ರೌರ್ಯ ನಡೆದಿದ್ದು, ದತ್ತು ಮೇಲೆ ಅದೇ ಗ್ರಾಮದ ಪ್ರಜ್ವಲ್ ಮಲ್ಕಪ್ಪ ಹೊಸಮನಿ ಹಾಗೂ ಪ್ರೀತಮ್ ಹೊಸಮನಿ ಎಂಬಿಬ್ಬರು ದಾಳಿ ನಡೆಸಿ ಮಾರಕಾಸ್ತ್ರಗಳಿಂದ ತೀವ್ರ ಹಲ್ಲೆ ನಡೆಸಿದ್ದಾರೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ದತ್ತು ಅವರನ್ನು ತಕ್ಷಣವೇ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಚಾಲಕ ಸ್ಪಂದಿಸುತ್ತಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.ಆರೋಪಿಗಳು, ನಾನು ಅವರನ್ನು ದಿಟ್ಟಿಸಿ ನೋಡಿದೆ ಎಂಬ ಕ್ಷುಲ್ಲಕ ನೆಪವನ್ನಿಟ್ಟುಕೊಂಡು ನನ್ನ ಮೇಲೆ ಹಲ್ಲೆ ನಡೆಸಿದರು ಎಂದು ಯುವಕ ಆಸ್ಪತ್ರೆಯಲ್ಲಿದ್ದಾಗ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ದೇವಲಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳೀಯ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ದೇವಲ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳೀಯ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಪವಿತ್ರ ಕ್ಷೇತ್ರದಲ್ಲೇ ನಡುರಾತ್ರಿ ನಡೆದ ಈ ಭೀಕರ ಘಟನೆಯಿಂದಾಗಿ ಗ್ರಾಮದಲ್ಲಿ ತೀವ್ರ ಆತಂಕ ಮನೆ ಮಾಡಿದ್ದು, ಬೂದಿ ಮುಚ್ಚಿದ ಕೆಂಡದಂತಹ ವಾತಾವರಣ ನಿರ್ಮಾಣವಾಗಿದೆ.
ಫೋಟೋ- ದತ್ತುಫೋಟೋ- ಕೊಲೆಯ ದೃಶ್ಯ ಸಸಿಟೀವಿ ಕೆಮೆರಾದಲ್ಲಿ ಸರೆ