ಕಮ್ಯುನಿಸ್ಟ್ ಮತ್ತು ಜಿಹಾದಿ ಮಾನಸಿಕತೆ ಹಿಂದೂ ಸಮಾಜವನ್ನು ಒಡೆಯುವ ಪ್ರಯತ್ನ ಮಾಡುತ್ತಿವೆ. ಧಾರ್ಮಿಕ ನಂಬಿಕೆಗಳ ವಿರುದ್ಧ ಅಪಪ್ರಚಾರ, ಜಾತಿಗಳ ನಡುವೆ ವಿಭಜನೆ ಹಾಗೂ ವಿವಿಧ ಕ್ಷೇತ್ರಗಳಲ್ಲಿನ ಚಟುವಟಿಕೆ ಬಗ್ಗೆ ಸಮಾಜ ಎಚ್ಚರಿಕೆಯಿಂದ ಇರಬೇಕು
ಆರ್ಎಸ್ಎಸ್ ಪಥಸಂಚಲನ, ಸಾರ್ವಜನಿಕ ಸಮಾರಂಭ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿಕಮ್ಯುನಿಸ್ಟ್ ಮತ್ತು ಜಿಹಾದಿ ಮಾನಸಿಕತೆ ಹಿಂದೂ ಸಮಾಜವನ್ನು ಒಡೆಯುವ ಪ್ರಯತ್ನ ಮಾಡುತ್ತಿವೆ. ಧಾರ್ಮಿಕ ನಂಬಿಕೆಗಳ ವಿರುದ್ಧ ಅಪಪ್ರಚಾರ, ಜಾತಿಗಳ ನಡುವೆ ವಿಭಜನೆ ಹಾಗೂ ವಿವಿಧ ಕ್ಷೇತ್ರಗಳಲ್ಲಿನ ಚಟುವಟಿಕೆ ಬಗ್ಗೆ ಸಮಾಜ ಎಚ್ಚರಿಕೆಯಿಂದ ಇರಬೇಕು ಎಂದು ಆರ್ಎಸ್ಎಸ್ ಉತ್ತರ ಕರ್ನಾಟಕದ ಪ್ರಚಾರ ವಿಭಾಗದ ಪ್ರಮುಖ ಕೃಷ್ಣ ಜೋಶಿ ಹೇಳಿದರು.
ನಗರದ ನೆಹರೂ ಮೈದಾನದಲ್ಲಿ ಭಾನುವಾರ ಸಂಜೆ ಆರ್ಎಸ್ಎಸ್ ಹುಬ್ಬಳ್ಳಿ ಮಹಾನಗರದಿಂದ ವಿಜಯದಶಮಿ ನಿಮಿತ್ತ ಪಥಸಂಚಲನದ ಬಳಿಕ ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.ವಿಚಾರವಾದ ಮತ್ತು ಸಮಾಜ ಸುಧಾರಣೆಯ ಹೆಸರಿನಲ್ಲಿ ಹಿಂದೂ ದೇವರು, ದೇವತೆಗಳು ಹಾಗೂ ಧಾರ್ಮಿಕ ಆಚರಣೆಗಳ ವಿರುದ್ಧ ಮಾತನಾಡಲಾಗುತ್ತಿದೆ. ಮೈಸೂರಿನ ಮಹಿಷ ದಸರಾ ಕೂಡ ಸಮಾಜದಲ್ಲಿ ಗೊಂದಲ ಮೂಡಿಸುವ ಪ್ರಯತ್ನವಾಗಿದೆ ಎಂದು ಆಕ್ಷೇಪಿಸಿದರು.
ಲವ್ ಜಿಹಾದ್, ಜನಸಂಖ್ಯೆ ಬದಲಾವಣೆ, ಅಕ್ರಮ ವಲಸೆ, ಭೂಮಿ ಅತಿಕ್ರಮಣ, ಮಾದಕ ವಸ್ತುಗಳ ಜಾಲ, ಆರ್ಥಿಕ ವ್ಯವಹಾರ ಹಾಗೂ ಶಿಕ್ಷಣ ಕ್ಷೇತ್ರದ ಬೆಳವಣಿಗೆಗಳನ್ನು ಪ್ರಸ್ತಾಪಿಸಿದ ಅವರು, ಇವು ದೇಶದ ಭವಿಷ್ಯದ ಮೇಲೆ ಪರಿಣಾಮ ಬೀರಬಹುದು ಎಂದು ಆತಂಕ ವ್ಯಕ್ತಪಡಿಸಿದರು.ವಿಜಯದಶಮಿ ವಿಜಯದ ಆರಾಧನೆ:
ಭಾರತ ಎಂದಿಗೂ ಸೋಲನ್ನು ಆರಾಧಿಸಿದ ದೇಶವಲ್ಲ. ವಿಜಯದಶಮಿ ವಿಜಯದ ಆರಾಧನೆಯ ಸಂಕೇತ. ರಾಮ-ರಾವಣರ ಯುದ್ಧದಲ್ಲಿ ದುಷ್ಟರ ಸಂಹಾರ ಮತ್ತು ಶಿಷ್ಟರ ಸಂರಕ್ಷಣೆಯ ಸಂದೇಶವಿದ್ದರೆ, ನವರಾತ್ರಿಯಲ್ಲಿ ದುರ್ಗೆಯು ರಾಕ್ಷಸೀ ಪ್ರವೃತ್ತಿಯನ್ನು ನಾಶ ಮಾಡುವ ಪರಿಕಲ್ಪನೆಯಿದೆ ಎಂದರು.ಪಂಚ ಪರಿವರ್ತನೆಗೆ ಕರೆ:
ಪರಿಸರ ಸಂರಕ್ಷಣೆ, ನಾಗರಿಕ ಕರ್ತವ್ಯ, ಸಾಮಾಜಿಕ ಸಾಮರಸ್ಯ, ಸ್ವದೇಶಿ ಮನೋಭಾವ ಮತ್ತು ಕುಟುಂಬ ವ್ಯವಸ್ಥೆಯ ಬಲವರ್ಧನೆಯ ಪಂಚ ಪರಿವರ್ತನೆಯನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಜಾತಿ-ಮತಗಳ ಭೇದ ಮರೆತು ಸಮಾಜ ಸಂಘಟಿತವಾಗಬೇಕು ಎಂದರು.ಆರ್ಎಸ್ಎಸ್ ಶತಮಾನೋತ್ಸವದ ಮನೆಮನೆ ಸಂಪರ್ಕ ಅಭಿಯಾನದಲ್ಲಿ ದೇಶಾದ್ಯಂತ 10.19 ಕೋಟಿ ಮನೆಗಳನ್ನು ಸಂಪರ್ಕಿಸಲಾಗಿದೆ. 5,036 ತಾಲೂಕುಗಳಲ್ಲಿ ಸದ್ಭಾವ ಗೋಷ್ಠಿ, 34,187 ಮಂಡಲಗಳಲ್ಲಿ ಹಿಂದೂ ಸಮ್ಮೇಳನಗಳನ್ನು ನಡೆಸಲಾಗಿದ್ದು, ಯುವ ಸಮ್ಮೇಳನಗಳಲ್ಲಿ 39.25 ಲಕ್ಷಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದಾರೆ ಎಂದು ತಿಳಿಸಿದರು.
ವಿಜ್ಞಾನಿ ಡಾ. ನಾಗರಾಜ ಪುಂಡಲೀಕ ಶೆಟ್ಟಿ ಮಾತನಾಡಿ, ರಾಷ್ಟ್ರೀಯತೆ ಮತ್ತು ನಿಸ್ವಾರ್ಥ ಸೇವೆ ಸಂಘದ ಹಿರಿಮೆಯಾಗಿದ್ದು, ಯುವಜನರ ಜ್ಞಾನ, ಕೌಶಲ ಮತ್ತು ವೈಜ್ಞಾನಿಕ ಚಿಂತನೆ ದೇಶದ ಪ್ರಗತಿಗೆ ಪೂರಕವಾಗಬೇಕು. ಯುವಕರು ವೈಜ್ಞಾನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಹೊಸ ಆವಿಷ್ಕಾರಗಳಿಗೆ ಮುಂದಾಗಬೇಕು. ಮಾದಕ ವ್ಯಸನಕ್ಕೆ ಬಲಿಯಾಗಿ ಆತ್ಮಹತ್ಯೆಗೆ ಶರಣಾಗುತ್ತಿರುವುದು ಕಳವಳಕಾರಿ. ವೈಫಲ್ಯಗಳಿಂದ ಧೃತಿಗೆಡದೆ ಸಾಧನೆಯತ್ತ ಸಾಗಬೇಕು. ದೇಶದ ಅಭಿವೃದ್ಧಿಗೆ ಯುವಜನರ ಪರಿಶ್ರಮ ಹಾಗೂ ರಾಷ್ಟ್ರೀಯ ನಾಯಕತ್ವದ ಇಚ್ಛಾಶಕ್ತಿ ಅಗತ್ಯ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಗೋವಿಂದಪ್ಪ ಗೌಡಪ್ಪಗೋಳ, ಶಿವಾನಂದ ಅವಟಿ, ಭಾಸ್ಕರ ಜಿತೂರಿ, ವಿಠ್ಠಲ್ ಲದ್ವಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.