ಕನ್ನಡ ನವೋದಯ ಕಾವ್ಯ ಸಮೃದ್ಧವಾಗಲು ಪಾಶ್ಚಿಮಾತ್ಯ ಸಾಹಿತ್ಯದ ಪ್ರಭಾವ ಸಾಕಷ್ಟಿದೆ. ಇಂಗ್ಲಿಷ್ ಸಾಹಿತ್ಯದಿಂದ ಕನ್ನಡ ಸಾಹಿತ್ಯ, ಸಂಸ್ಕೃತಿ, ಪರಂಪರೆ ಅಸ್ತಿತ್ವದ ಮೇಲೆ ಹೊಸ ಸಂವೇದನೆಗಳು ಹುಟ್ಟಿಕೊಳ್ಳಲು ಸಾಧ್ಯವಾಯಿತು.
ಚಂದ್ರಶೇಖರ ಶಾಸ್ತ್ರಿ ದತ್ತಿಯಲ್ಲಿ ಡಾ. ಬಸವರಾಜ ಡೋಣೂರ
ಕನ್ನಡಪ್ರಭ ವಾರ್ತೆ ಧಾರವಾಡಕನ್ನಡ ನವೋದಯ ಕಾವ್ಯ ಸಮೃದ್ಧವಾಗಲು ಪಾಶ್ಚಿಮಾತ್ಯ ಸಾಹಿತ್ಯದ ಪ್ರಭಾವ ಸಾಕಷ್ಟಿದೆ. ಇಂಗ್ಲಿಷ್ ಸಾಹಿತ್ಯದಿಂದ ಕನ್ನಡ ಸಾಹಿತ್ಯ, ಸಂಸ್ಕೃತಿ, ಪರಂಪರೆ ಅಸ್ತಿತ್ವದ ಮೇಲೆ ಹೊಸ ಸಂವೇದನೆಗಳು ಹುಟ್ಟಿಕೊಳ್ಳಲು ಸಾಧ್ಯವಾಯಿತು ಎಂದು ಕಲಬುರಗಿಯ ಕೇಂದ್ರೀಯ ವಿವಿ ಇಂಗ್ಲಿಷ್ ಹಿರಿಯ ಪ್ರಾಧ್ಯಾಪಕ ಡಾ. ಬಸವರಾಜ ಡೋಣೂರ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘ ಪಂ. ಚಂದ್ರಶೇಖರ ಶಾಸ್ತ್ರೀಗಳ ದತ್ತಿಯಲ್ಲಿ ''''ಕನ್ನಡ ನವೋದಯ ಕಾವ್ಯದ ಮೇಲೆ ಇಂಗ್ಲಿಷ್ ಕಾವ್ಯದ ಪ್ರಭಾವ'''' ಕುರಿತು ಉಪನ್ಯಾಸ ನೀಡಿದ ಅವರು, ಕನ್ನಡ ಸಂಸ್ಕೃತಿ ಪರಂಪರೆ ಬೆಳೆಸಬೇಕು. ಹೊಸ ಆಸೆ, ಹೊಸ ಕನಸು ಇಂಗ್ಲಿಷ್ ಗೀತಗಳಿಂದ ಬಂದರೂ ಆಧುನಿಕ ಪರಂಪರೆಯಲ್ಲಿ ಬಿ.ಎಂ.ಶ್ರೀ, ಸಕ್ರಿ ಬಾಳಾಚಾರ್ಯರಿಂದ ಹಿಡಿದು ಕುವೆಂಪು, ಲಂಕೇಶ, ಡಿ.ಆರ್. ನಾಗರಾಜ, ಕೀರ್ತಿನಾಥ ಕುರ್ತಕೋಟಿ, ಚಂಪಾ, ಗಿರಡ್ಡಿ ಗೋವಿಂದರಾಜ ವರೆಗೂ ಪಂಪ, ರನ್ನ, ಪೊನ್ನ, ಲಕ್ಷ್ಮೀಶರನ್ನು ಮರೆಯದೆ ಹೊಸ ಪರಂಪರೆಗೆ ಹೊಸ ವಿಚಾರಗಳನ್ನು ಕಟ್ಟಿಕೊಟ್ಟ ಆಧುನಿಕ ಪರಿಕಲ್ಪನೆಯೊಂದಿಗೆ ಸಂಸ್ಕೃತಿ, ಸಮುದಾಯ ನಿಷ್ಠೆ, ವಸ್ತುನಿಷ್ಠೆ ಮುಂದುವರಿಸಿಕೊಂಡು ಬಂದಿದ್ದಾರೆ. ಕಾವ್ಯ ಜನಸಾಮಾನ್ಯರ ಸಂವೇದನೆ, ಭಾಷೆ ಆಗಬೇಕು ಎಂದರು.ಕವಿವ ಸಂಘದ ಗೌರವ ಉಪಾಧ್ಯಕ್ಷ ಶ್ರೀನಿವಾಸ ವಾಡಪ್ಪಿ ಅಧ್ಯಕ್ಷತೆ ವಹಿಸಿ, ನವೋದಯ ಸಾಹಿತ್ಯವು ಬಹುತೇಕ ಎಲ್ಲ ಕವಿಗಳು, ಸಾಹಿತಿಗಳು ಕಾವ್ಯಕ್ಕೆ ಮೀಸಲಿರಿಸಿಕೊಂಡು ನಾಟಕ, ಕಾದಂಬರಿ, ಸಣ್ಣಕಥೆಗಳು, ಪ್ರಬಂಧಗಳು ಶ್ರೀಸಾಮಾನ್ಯರ ಜೀವನದ ಮೇಲೆ ಪ್ರಭಾವ ಬೀರುವ ಹಾಗೆ ಬೆಳೆದು ಬಂದಿದೆ. ಪ್ರಗತಿಶೀಲ ಪರಂಪರೆಯು ಇಂದಿನವರೆಗೂ ಕನ್ನಡ ನಾಡು, ಸಂಸ್ಕೃತಿ ಉಳಿಸಿ, ಬೆಳೆಸುವಲ್ಲಿ ಅನೇಕ ಕವಿವರ್ಯರ ಕೊಡುಗೆ ಅಪಾರ ಎಂದರು.
ಶಂಕರ ಕುಂಬಿ ಸ್ವಾಗತಿಸಿದರು. ಗುರು ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ಶಂಕರ ಹಲಗತ್ತಿ ವಂದಿಸಿದರು.