ಸಭೆಗಳಿಗೆ ಹಾಜರಾಗಿ ನೌಕರರ ಸಮಸ್ಯೆಗಳಿಗೆ ಸ್ಪಂದಿಸಿ

| Published : Sep 03 2025, 01:00 AM IST

ಸಭೆಗಳಿಗೆ ಹಾಜರಾಗಿ ನೌಕರರ ಸಮಸ್ಯೆಗಳಿಗೆ ಸ್ಪಂದಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಪದಾಧಿಕಾರಿಗಳು ನೌಕರರ ನಿರೀಕ್ಷೆಗೆ ತಕ್ಕಂತೆ ಸಂಘದ ಎಲ್ಲ ಕಾರ್ಯಗಳಲ್ಲಿ ಭಾಗವಹಿಸಿ, ತಮಗೆ ಮತ ನೀಡಿದ ನೌಕರರ ಸಮಸ್ಯೆಗಳ ಪರಿಹಾರಕ್ಕೆ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಆಗ ಮಾತ್ರ ಸರ್ಕಾರಿ ನೌಕರರ ಸಂಘ ಒಳ್ಳೆಯ ಹೆಸರು ಹಾಗೂ ನೌಕರರ ಪ್ರೀತಿ- ವಿಶ್ವಾಸ ಗಳಿಸಲು ಸಾಧ್ಯ ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅರುಣ್ ಹೇಳಿದ್ದಾರೆ.

- ನಾಮನಿರ್ದೇಶಿತ ಸದಸ್ಯರ ಸನ್ಮಾನ ಸಮಾರಂಭದಲ್ಲಿ ಅಧ್ಯಕ್ಷ ಅರುಣ್‌ ಸಲಹೆ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಪದಾಧಿಕಾರಿಗಳು ನೌಕರರ ನಿರೀಕ್ಷೆಗೆ ತಕ್ಕಂತೆ ಸಂಘದ ಎಲ್ಲ ಕಾರ್ಯಗಳಲ್ಲಿ ಭಾಗವಹಿಸಿ, ತಮಗೆ ಮತ ನೀಡಿದ ನೌಕರರ ಸಮಸ್ಯೆಗಳ ಪರಿಹಾರಕ್ಕೆ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಆಗ ಮಾತ್ರ ಸರ್ಕಾರಿ ನೌಕರರ ಸಂಘ ಒಳ್ಳೆಯ ಹೆಸರು ಹಾಗೂ ನೌಕರರ ಪ್ರೀತಿ- ವಿಶ್ವಾಸ ಗಳಿಸಲು ಸಾಧ್ಯ ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅರುಣ್ ಹೇಳಿದರು.

ಸೋಮವಾರ ರಾತ್ರಿ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಲಾಗಿದ್ದ ನಿವೃತ್ತ ನೌಕರರಿಗೆ ಬೀಳ್ಕೋಡುಗೆ ಸಮಾರಂಭ ಹಾಗೂ ತಾಲೂಕು ಸಂಘಕ್ಕೆ ನೂತನವಾಗಿ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಯಾದ 10 ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂಘದ ಚುನಾವಣೆಗಳಲ್ಲಿ ನಮ್ಮ ನೌಕರರು ತಮ್ಮ ಮೇಲೆ ಭರವಸೆ ಇಟ್ಟು ಅಭಿಮಾನ, ಗೌರವಗಳೊಂದಿಗೆ ಮತ ಹಾಕಿ ಸಂಘದ ಸದಸ್ಯರಾಗಲು ಕಾರಣರಾಗಿರುತ್ತಾರೆ. ಇದನ್ನು ಅರಿತು ಸದಸ್ಯರು ಸಂಘದ ಎಲ್ಲ ಕಾರ್ಯ ಚಟುವಟಿಕೆಗಳು, ಸಭೆಗಳಿಗೆ ತಪ್ಪದೇ ಹಾಜರಾಗಿ ನೌಕರರ ಸಮಸ್ಯೆಗಳು ಹಾಗೂ ಇತರೆ ವಿಚಾರಗಳ ಕುರಿತು ಚರ್ಚೆಯಲ್ಲಿ ಭಾಗವಹಿಸುವುದನ್ನು ಮರೆಯಬಾರದು. ಕೆಲ ಪದಾಧಿಕಾರಿಗಳು ಭಾಗವಹಿಸದೇ ಇರುವುದು ತಮಗೆ ಬೇಸರ ತಂದಿದೆ ಎಂದರು.

ಕಾರ್ಯಕ್ರಮದಲ್ಲಿ ತಾಲೂಕಿನ ಚೀಲಾಪುರದ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ನಿವೃತ್ತರಾದ ವಿಜಯಕುಮಾರ್ ಅವರನ್ನು ಸನ್ಮಾನಿಸಿ ಬೀಳ್ಕೋಡಲಾಯಿತು. ಇದೇ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘಕ್ಕೆ ನೂತನವಾಗಿ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಯಾದ ಚಂದ್ರಶೇಖರ ಎಚ್.ಕೆ., ಸಿದ್ದಪ್ಪಹೊಸಕೇರಿ, ಕೆ.ಪ್ರಕಾಶ್ ನಾಯ್ಕ, ಬಿ.ಕುಮಾರ್, ಬಿ.ಎಸ್. ರುದ್ರೇಶ್, ಎನ್.ಎಂ. ದೀಪಕ್, ಪಿ.ರವಿಕುಮಾರ್, ವೈ.ಎಲ್. ಸಂತೋಷ್ ಕುಮಾರ್, ಎಚ್.ಆರ್.ಬಸವರಾಜ ಹಾಗೂ ಎಸ್. ರಾಜೇಂದ್ರ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಎಚ್.ಕೆ. ಚಂದ್ರಶೇಖರ್, ನಾಗರಾಜ್ ನಾಯ್ಕ ಹಾಗೂ ದೊಡ್ಡೇಶ್ ಮಾತನಾಡಿದರು. ಸಂಘದ ಅನೇಕ ಪದಾಧಿಕಾರಿಗಳು, ಸರ್ಕಾರಿ ನೌಕರರು ಇದ್ದರು.

- - -

-2ಎಚ್.ಎಲ್.ಐ2.ಜೆಪಿಜಿ:

ಹೊನ್ನಾಳಿ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಸೋಮವಾರ ಸಂಜೆ ನಿವೃತ್ತ ನೌಕರರಿಗೆ ಬೀಳ್ಕೋಡುಗೆ, ತಾಲೂಕು ಸಂಘದ ನಾಮನಿರ್ದೇಶಿತ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.