ಹೊನ್ನೇನಹಳ್ಳಿ ಗ್ರಾಪಂಯಲ್ಲಿ ಹಳೆ ವಸ್ತುಗಳ ಹರಾಜು

| Published : Aug 22 2024, 12:57 AM IST

ಸಾರಾಂಶ

ಗ್ರಾ.ಪಂ. ವ್ಯಾಪ್ತಿಯಲ್ಲಿ ಉಪಯೋಗಿಸಿ ಮೂಲೆ ಸೇರಿದ್ದ ಅನೇಕ ಹಳೆಯ ವಸ್ತುಗಳನ್ನು ಪಾರದರ್ಶಕವಾಗಿ ಬಹಿರಂಗ ಹರಾಜು ಪ್ರಕ್ರಿಯೆ ಮೂಲಕ ಸಾರ್ವಜನಿಕರ ಸಮ್ಮುಖದಲ್ಲಿ ಮಾರಾಟ ಮಾಡಿದ್ದು, ಗ್ರಾ.ಪಂಯ ವಿವಿಧ ಕೆಲಸಗಳಿಗೆ ಈ ಹಣವನ್ನು ವಿನಿಯೋಗ ಮಾಡಲಾಗುತ್ತದೆ ಎಂದು ಹೊನ್ನೇನಹಳ್ಳಿ ಪಿಡಿಒ ಮಂಜಮ್ಮ ತಿಳಿಸಿದರು.

ದಾಬಸ್‌ಪೇಟೆ: ಗ್ರಾ.ಪಂ. ವ್ಯಾಪ್ತಿಯಲ್ಲಿ ಉಪಯೋಗಿಸಿ ಮೂಲೆ ಸೇರಿದ್ದ ಅನೇಕ ಹಳೆಯ ವಸ್ತುಗಳನ್ನು ಪಾರದರ್ಶಕವಾಗಿ ಬಹಿರಂಗ ಹರಾಜು ಪ್ರಕ್ರಿಯೆ ಮೂಲಕ ಸಾರ್ವಜನಿಕರ ಸಮ್ಮುಖದಲ್ಲಿ ಮಾರಾಟ ಮಾಡಿದ್ದು, ಗ್ರಾ.ಪಂಯ ವಿವಿಧ ಕೆಲಸಗಳಿಗೆ ಈ ಹಣವನ್ನು ವಿನಿಯೋಗ ಮಾಡಲಾಗುತ್ತದೆ ಎಂದು ಹೊನ್ನೇನಹಳ್ಳಿ ಪಿಡಿಒ ಮಂಜಮ್ಮ ತಿಳಿಸಿದರು.

ಗ್ರಾ.ಪಂ. ಆವರಣದಲ್ಲಿ ಹಳೆಯ ವಸ್ತುಗಳ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿ ಮಾತನಾಡಿದರು. ಹಳೆಯ ಕಬ್ಬಿಣ, 3 ಏಣಿ, 8 ಎರಕದ ಪೈಪ್, 60 ಕೆಜಿ ನ್ಯೂಸ್ ಪೇಪರ್, 400 ಮೀ. ಹಳೆಯ ಕೇಬಲ್ 37,500 ರು.ಗೆ, 18 ಜಿ.ಐ ಪೈಪ್ 24500 ರು.ಗೆ ಸಿದ್ದಯ್ಯ.ಜಿ ಎಂಬುವವರು ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಕೊಂಡುಕೊಂಡಿದ್ದು, ಇದರಿಂದ ಒಟ್ಟಾರೆ ಒಂದು ಲಕ್ಷದ ಐದು ಸಾವಿರ ರು. ಗ್ರಾಪಂಗೆ ಬಂದಿದೆ ಎಂದರು.

ಗ್ರಾ.ಪಂ.ಅಧ್ಯಕ್ಷೆ ವಸಂತ ವೆಂಕಟೇಶ್, ಉಪಾಧ್ಯಕ್ಷ ರಾಜೇಶ್ ಕುಮಾರ್, ಮಾಜಿ ಅಧ್ಯಕ್ಷ ಶಿವಾನಂದ್, ಸದಸ್ಯೆ ರೇವಮ್ಮ, ಕಾರ್ಯದರ್ಶಿ ಚಂದ್ರಯ್ಯ, ಕಂಪ್ಯೂಟರ್ ಆಪರೇಟರ್ ರಮೇಶ್, ಕಾವ್ಯ, ಕರವಸೂಲಿಗಾರರಾದ ರಮೇಶ್, ವೀರಭದ್ರಸ್ವಾಮಿ, ಮುನಿಯನಾಯ್ಕ್, ಪ್ರದೀಪ್ ಮತ್ತಿತರರಿದ್ದರು.