ಉಡುಪಿ ಪರ್ಯಾಯ ಶ್ರೀ ಪುತ್ತಿಗೆ ಮಠದ ವತಿಯಿಂದ ಸಪ್ತೋತ್ಸವ : ಬರಲಿದ್ದಾರೆ ಆಸ್ಟ್ರೇಲಿಯಾ ಸಂಸದ

| Published : Jan 08 2025, 12:19 AM IST / Updated: Jan 08 2025, 12:09 PM IST

ಉಡುಪಿ ಪರ್ಯಾಯ ಶ್ರೀ ಪುತ್ತಿಗೆ ಮಠದ ವತಿಯಿಂದ ಸಪ್ತೋತ್ಸವ : ಬರಲಿದ್ದಾರೆ ಆಸ್ಟ್ರೇಲಿಯಾ ಸಂಸದ
Share this Article
  • FB
  • TW
  • Linkdin
  • Email

ಸಾರಾಂಶ

ಪರ್ಯಾಯ ಶ್ರೀ ಪುತ್ತಿಗೆ ಮಠದ ವತಿಯಿಂದ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ನಡೆಯುವ ವಾರ್ಷಿಕ ಸಪ್ತೋತ್ಸವ ಕಾರ್ಯಕ್ರಮ ಜ. ೯ ರಿಂದ ಮೊದಲ್ಗೊಂಡು ಜ. 15 ರ ವರೆಗೆ 7 ದಿನಗಳ ಕಾಲ ವೈಭವ ದಿಂದ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯ ಸಂಸದ ಜಾನ್ ಮುಲಾಯ್ ಭಾಗವಹಿಸಲಿದ್ದಾರೆ.

  ಉಡುಪಿ  : ಪರ್ಯಾಯ ಶ್ರೀ ಪುತ್ತಿಗೆ ಮಠದ ವತಿಯಿಂದ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ನಡೆಯುವ ವಾರ್ಷಿಕ ಸಪ್ತೋತ್ಸವ ಕಾರ್ಯಕ್ರಮ ಜ. ೯ ರಿಂದ ಮೊದಲ್ಗೊಂಡು ಜ. 15 ರ ವರೆಗೆ 7  ದಿನಗಳ ಕಾಲ ವೈಭವ ದಿಂದ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯ ಸಂಸದ ಜಾನ್ ಮುಲಾಯ್ ಭಾಗವಹಿಸಲಿದ್ದಾರೆ.

ಸುಮಾರು ೮ ಶತಮಾನಗಳ ಹಿಂದೆ ಮಕರ ಸಂಕ್ರಮಣದ ಪವಿತ್ರ ದಿನದಂದು ಜಗದ್ಗುರು ಶ್ರೀಮನ್ಮಧ್ವಾಚಾರ್ಯರು ದ್ವಾರಕೆಯಿಂದ ಬಂದ ಶ್ರೀ ಕೃಷ್ಣನನ್ನು ಉಡುಪಿಯಲ್ಲಿ ಪ್ರತಿಷ್ಠಾಪಿಸಿದ್ದರು. ಇದರ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ನಡೆಯುವ ಈ ಸಪ್ತೋತ್ಸವವದಲ್ಲಿ ಭಾಗವಹಿಸಲು ಪರ್ಯಾಯ ಪೀಠಾಧಿಪತಿ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಆಹ್ವಾನದಂತೆ ಆಸ್ಟ್ರೇಲಿಯಾದ ವಿಕ್ಟೋರಿಯಾ ರಾಜ್ಯದ ಪ್ರಸಕ್ತ ಸಂಸದ ಜಾನ್ ಮುಲಾಯ್ ಆಗಮಿಸಲಿದ್ದಾರೆ.

ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿರುವ ಶ್ರೀ ಪುತ್ತಿಗೆ ಶಾಖಾ ಮಠಕ್ಕೆ ಅಲ್ಲಿನ ಸರ್ಕಾರದಿಂದ ವಿಶೇಷ ಸಹಕಾರ ನೀಡಿದ ಸಂಸದ ಜಾನ್ ಮುಲಾಯ್ ಅವರಿಗೆ ಶ್ರೀ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯ ಅವರು ಆಮಂತ್ರಣವಿತ್ತರು.

ತಮ್ಮ ಅಮೂಲ್ಯ ಭಾಗವತ ಪ್ರವಚನಗಳಿಂದ ಉಪರಾಷ್ಟ್ರಪತಿಯಾದಿಯಾಗಿ ಅನೇಕ ಗಣ್ಯರ ಗೌರವಕ್ಕೆ ಭಾಜನರಾದ ಉಡುಪಿಯ ಕೃಷ್ಣನ ಪರಮಭಕ್ತರಾದ ಗೌಡೀಯ ಮಾಧ್ವಮಠದ ಶ್ರೀ ಪುಂಡರೀಕ ಗೋಸ್ವಾಮಿ ಭಾಗವಹಿಸಲಿದ್ದಾರೆ.