ಬಾಡಿಗೆ ವಿಚಾರಕ್ಕೆ ಪ್ರಯಾಣಿಕಳ ಜತೆ ಅನುಚಿತ ವರ್ತನೆ: ಆಟೋ ಚಾಲಕ ಸೆರೆ

| N/A | Published : Oct 11 2025, 02:00 AM IST / Updated: Oct 11 2025, 08:06 AM IST

auto driver
ಬಾಡಿಗೆ ವಿಚಾರಕ್ಕೆ ಪ್ರಯಾಣಿಕಳ ಜತೆ ಅನುಚಿತ ವರ್ತನೆ: ಆಟೋ ಚಾಲಕ ಸೆರೆ
Share this Article
  • FB
  • TW
  • Linkdin
  • Email

ಸಾರಾಂಶ

ಬಾಡಿಗೆ ವಿಚಾರವಾಗಿ ಪ್ರಯಾಣಿಕಳ ಜತೆ ಅನುಚಿತವಾಗಿ ವರ್ತಿಸಿದ ಆರೋಪದ ಮೇರೆಗೆ ಆಟೋ ಚಾಲಕನೊಬ್ಬನನ್ನು ಕೊತ್ತನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಟೋ ಚಾಲಕ ಪವನ್ ಬಂಧಿತನಾಗಿದ್ದು, ಈಶಾನ್ಯ ಭಾರತ ಮೂಲದ ಯುವತಿ ಜತೆ ಆತ ಅನುಚಿತ ವರ್ತನೆ ತೋರಿದ್ದ. 

 ಬೆಂಗಳೂರು :  ಬಾಡಿಗೆ ವಿಚಾರವಾಗಿ ಪ್ರಯಾಣಿಕಳ ಜತೆ ಅನುಚಿತವಾಗಿ ವರ್ತಿಸಿದ ಆರೋಪದ ಮೇರೆಗೆ ಆಟೋ ಚಾಲಕನೊಬ್ಬನನ್ನು ಕೊತ್ತನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆಟೋ ಚಾಲಕ ಪವನ್ ಬಂಧಿತನಾಗಿದ್ದು, ಈಶಾನ್ಯ ಭಾರತ ಮೂಲದ ಯುವತಿ ಜತೆ ಆತ ಅನುಚಿತ ವರ್ತನೆ ತೋರಿದ್ದ. ಈ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಸಂತ್ರಸ್ತೆಯಿಂದ ದೂರು ಪಡೆದು ಆರೋಪಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅ.2 ರಂದು ಸಂಜೆ 7.30ರ ಸುಮಾರಿಗೆ ಕ್ಯಾಲಸನಹಳ್ಳಿಯಿಂದ ಬಾಣಸವಾಡಿಗೆ ತೆರಳಲು ಆಟೋ ಅನ್ನು ಸಂತ್ರಸ್ತ ಯುವತಿ ಬುಕ್ ಮಾಡಿದ್ದಳು. ಆದರೆ ಬುಕ್ ಮಾಡಿದ್ದ ಆಟೋ ಬರುವುದು ತಡವಾಗಿದೆ. ಹೀಗಾಗಿ ಅದೇ ಮಾರ್ಗದಲ್ಲಿ ಬಂದ ಮತ್ತೊಂದು ಆಟೋವನ್ನು ಆಕೆ ಹತ್ತಿದ್ದಳು. ಬಳಿಕ ತಕ್ಷಣವೇ ಬುಕ್ ಮಾಡಿದ್ದ ಆಟೋವನ್ನು ಆಕೆ ರದ್ದುಪಡಿಸಿದ್ದಳು. ಅಷ್ಟರಲ್ಲಿ ಸ್ಥಳಕ್ಕೆ ಬಂದ ಚಾಲಕ ಪವನ್, ಬೇರೆ ಆಟೋದಲ್ಲಿ ಹೋಗುತ್ತಿದ್ದ ಯುವತಿಯನ್ನು ತಡೆದು ಗಲಾಟೆ ಮಾಡಿದ್ದಾನೆ. ಈ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹೊಡೆಯಲು ಸಹ ಯತ್ನಿಸಿದ್ದಾನೆ. ಈ ಕೃತ್ಯದ ವಿಡಿಯೋವನ್ನು ಮೊಬೈಲ್‌ನಲ್ಲಿ ಸಂತ್ರಸ್ತೆ ಚಿತ್ರೀಕರಿಸಿಕೊಂಡಿದ್ದಳು ಎಂದು ತಿಳಿದು ಬಂದಿದೆ.

Read more Articles on