ಸಾರಾಂಶ
ಕುಂಜಿಬೆಟ್ಟು ಶಾರದಾ ಕಲ್ಯಾಣ ಮಂಟಪದ ನವೀಕೃತ ರಿಕ್ಷಾ ನಿಲ್ದಾಣವನ್ನು ಅದಮಾರು ಮಠದ ಹಿರಿಯ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಲೋಕಾರ್ಪಣೆ ಮಾಡಿ ಅವರು ಆಶೀರ್ವದಿಸಿದರು.
ಉಡುಪಿ: ಜನರ ಸೇವೆ ಮಾಡುವುದೇ ಭಗವಂತನಿಗೆ ನೀಡುವ ಕಪ್ಪ, ಆಟೋ ಚಾಲಕರು ಜನರ ಸೇವೆ ಮಾಡುವವರು. ಆದ್ದರಿಂದ ಆಟೋ ಚಾಲಕರಿಗೆ ತಾಳ್ಮೆ ಅತೀ ಮುಖ್ಯ, ಸೇವಾ ಮನೋಭಾವ ಇನ್ನಷ್ಟು ಬೆಳೆಸಿಕೊಳ್ಳಿ ಎಂದು ಅದಮಾರು ಮಠದ ಹಿರಿಯ ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಇಲ್ಲಿನ ಆಟೋ ಚಾಲಕರಿಗೆ ಆಶೀರ್ವಚನ ನೀಡಿದ್ದಾರೆ.
ನಗರದ ಕುಂಜಿಬೆಟ್ಟು ಶಾರದಾ ಕಲ್ಯಾಣ ಮಂಟಪದ ನವೀಕೃತ ರಿಕ್ಷಾ ನಿಲ್ದಾಣವನ್ನು ಲೋಕಾರ್ಪಣೆ ಮಾಡಿ ಅವರು ಆಶೀರ್ವದಿಸಿದರು.ನವೀಕೃತ ಆಟೋ ನಿಲ್ದಾಣದ ಸ್ಥಾಪನೆಗೆ ಶಿಫಾರಸ್ಸು ಮಾಡಿದ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮತ್ತು ಈ ಆಟೋ ನಿಲ್ದಾಣಕ್ಕೆ ಇಂಟರ್‌ಲಾಕ್, ಉದ್ಯಾನವನ ನಿರ್ಮಿಸಿಕೊಟ್ಟ ಸಮಾಜಸೇವಕ ಯಶೋಧಾ ಆಟೋ ಯೂನಿಯನ್‌ನ ಜಿಲ್ಲಾಧ್ಯಕ್ಷ ಕೆ. ಕೃಷ್ಣಮೂರ್ತಿ ಆಚಾರ್ಯ ಶುಭ ಕೋರಿದರು.ರಿಕ್ಷಾ ನಿಲ್ದಾಣದ ಮೇಲ್ಛಾವಣಿ ನಿರ್ಮಾಣಕ್ಕೆ ಸಹಕರಿಸಿದ ಉದ್ಯಮಿಗಳಾದ ಸಂತೋಷ್ ಪಟೇಲ್ ಮತ್ತು ಸೂರಜ್ ಪಟೇಲ್, ಸಿಸಿ ಕ್ಯಾಮರ ಕೊಡುಗೆ ನೀಡಿದ ಉದ್ಯಮಿ ಗಣೇಶ್ ಅಮೀನ್, ಸೋಲಾರ್ ಬೆಳಕಿನ ವ್ಯವಸ್ಥೆ ಕಲ್ಪಿಸಿದ ಪ್ರಶಾಂತ್ ಪೂಜಾರಿ ಮನ್ನೂಳಿಗುಜ್ಜಿ ಅವರನ್ನು ಶ್ರೀಗಳು ಸನ್ಮಾನಿಸಿದರು.
ಆಟೋ ನಿಲ್ದಾಣದ ಅಧ್ಯಕ್ಷ ಹರೀಶ್ ಕಾಂಚನ್, ಗೌರವಾಧ್ಯಕ್ಷ ಸತೀಶ್ ಕುಮಾರ್, ಸ್ಥಾಪಕಾಧ್ಯಕ್ಷ ಭಾಸ್ಕರ್ ಸೇರಿಗಾರ್, ಉಪಾಧ್ಯಕ್ಷ ಜಯರಾಮ್ ಸೇರಿಗಾರ್, ಪ್ರಧಾನ ಕಾರ್ಯದರ್ಶಿ ಹರೀಶ್ ಅಮೀನ್, ಜೊತೆ ಕಾರ್ಯದರ್ಶಿ ಸಂದೇಶ್ ದೇವಾಡಿಗ, ಕೋಶಾಧಿಕಾರಿ ಪ್ರಶಾಂತ್ ಪೂಜಾರಿ, ಜೊತೆಕೋಶಾಧಿಕಾರಿ ಗಣೇಶ್ ಸೇರಿಗಾರ್, ಸದಸ್ಯರು ಉಪಸ್ಥಿತರಿದ್ದರು.;Resize=(128,128))
;Resize=(128,128))