ಸಾಂಸ್ಕೃತಿಕ ವೈವಿಧ್ಯತೆ, ನಾಡಿನ ಪರಂಪರೆ ಮತ್ತು ಕನ್ನಡಿಗರ ಆತ್ಮಗೌರವಕ್ಕೆ ಹೊಸ ಚೈತನ್ಯ ತುಂಬಿದವರು ಆಟೋ ಸಂಘದವರು ಎಂದು ಮಾಜಿ ಶಾಸಕ ಎಂ. ಎ. ಗೋಪಾಲಸ್ವಾಮಿ ತಿಳಿಸಿದರು. ಕನ್ನಡದ ಶ್ರೀಮಂತ ಸಂಸ್ಕೃತಿ, ಭಾಷೆಯ ಸವಿಯ ಹಾಗೂ ನಾಡಿನ ಪರಂಪರೆಯನ್ನು ಎಲ್ಲರೂ ಒಂದಾಗಿ ಗೌರವಿಸಿ. ಕನ್ನಡದ ಆಚರಣೆ, ಸಮುದಾಯದ ಸೌಹಾರ್ದತೆ ಮತ್ತು ಒಗ್ಗಟ್ಟಿಗೆ ಅದ್ಭುತ ಉದಾಹರಣೆಯಾಗಿದೆ. ಕನ್ನಡ ರಾಜ್ಯೋತ್ಸವಕ್ಕೆ ಭಾಗಿಯಾದ ಎಲ್ಲರಿಗೂ ಹೃದಯಪೂರ್ವಕ ಅಭಿನಂದನೆಗಳು, ಇದೇ ರೀತಿ ಪ್ರತಿ ವರ್ಷ ಸಂಘದವರು ಒಗ್ಗಟ್ಟಿನಿಂದ ಸಂಘದ ಏಳಿಗೆಗೆ ಶ್ರಮಿಸಿ ಕನ್ನಡ ಉಳಿಸುವ ಕೆಲಸ ಮಾಡಿ ಎಂದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಸಾಂಸ್ಕೃತಿಕ ವೈವಿಧ್ಯತೆ, ನಾಡಿನ ಪರಂಪರೆ ಮತ್ತು ಕನ್ನಡಿಗರ ಆತ್ಮಗೌರವಕ್ಕೆ ಹೊಸ ಚೈತನ್ಯ ತುಂಬಿದವರು ಆಟೋ ಸಂಘದವರು ಎಂದು ಮಾಜಿ ಶಾಸಕ ಎಂ. ಎ. ಗೋಪಾಲಸ್ವಾಮಿ ತಿಳಿಸಿದರು.

ಅವರು ಪಟ್ಟಣದ ಧನಲಕ್ಷ್ಮಿ ಚಿತ್ರಮಂದಿರದ ಹತ್ತಿರ ನೂತನ ತಾಲೂಕು ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಆಟೋ ಚಾಲಕರು ಇರುವುದಕ್ಕೆ ಕನ್ನಡ ಇಷ್ಟೊಂದು ಶ್ರೀಮಂತವಾಗಿರುವುದು, ನಮ್ಮ ನಾಡು, ನುಡಿ, ಜಲದ ವಿಚಾರ ಬಂದಾಗ ಎಲ್ಲರೂ ಒಟ್ಟುಗೂಡಬೇಕು. ಸಂಘದ ಸದಸ್ಯರ ಏಕತೆ, ನಾಡು ನುಡಿ ಪ್ರೇಮ ಎಲ್ಲರಲ್ಲೂ ಮೂಡಬೇಕು. ಕನ್ನಡದ ಗೌರವ ಕಾಪಾಡುವ ಈ ಕಾರ್ಯಕ್ರಮ ಮತ್ತೊಂದು ಬಲವಾದ ಹೆಜ್ಜೆಯಾಗಿದೆ.ಕನ್ನಡದ ಶ್ರೀಮಂತ ಸಂಸ್ಕೃತಿ, ಭಾಷೆಯ ಸವಿಯ ಹಾಗೂ ನಾಡಿನ ಪರಂಪರೆಯನ್ನು ಎಲ್ಲರೂ ಒಂದಾಗಿ ಗೌರವಿಸಿ. ಕನ್ನಡದ ಆಚರಣೆ, ಸಮುದಾಯದ ಸೌಹಾರ್ದತೆ ಮತ್ತು ಒಗ್ಗಟ್ಟಿಗೆ ಅದ್ಭುತ ಉದಾಹರಣೆಯಾಗಿದೆ. ಕನ್ನಡ ರಾಜ್ಯೋತ್ಸವಕ್ಕೆ ಭಾಗಿಯಾದ ಎಲ್ಲರಿಗೂ ಹೃದಯಪೂರ್ವಕ ಅಭಿನಂದನೆಗಳು, ಇದೇ ರೀತಿ ಪ್ರತಿ ವರ್ಷ ಸಂಘದವರು ಒಗ್ಗಟ್ಟಿನಿಂದ ಸಂಘದ ಏಳಿಗೆಗೆ ಶ್ರಮಿಸಿ ಕನ್ನಡ ಉಳಿಸುವ ಕೆಲಸ ಮಾಡಿ ಎಂದರು.ಇದೇ ಸಂದರ್ಭದಲ್ಲಿ ಡಾ.ವಿ.ಮಹೇಶ್, ಸಂಘದ ಅಧ್ಯಕ್ಷ ಮಂಜುನಾಥ್, ಬಾಬು, ಪ್ರಧಾನ ಕಾರ್ಯದರ್ಶಿ ವಾಸುದೇವ, ಕಾರ್ಯದರ್ಶಿ ಮಾದೇಶ್, ಉಪಾಧ್ಯಕ್ಷ ದೇವರಾಜ್, ಚಿಕ್ಕೇಗೌಡ, ಪರಮೇಶ್, ವೇಣು ಮತ್ತಿತರಿದ್ದರು.