ಕರ್ನಾಟಕ ಬ್ಯಾಂಕಿನಲ್ಲಿರುವ ವಿಮೆ ಸೌಲಭ್ಯ ಪಡೆದುಕೊಳ್ಳಿ

| Published : Oct 27 2024, 02:30 AM IST

ಸಾರಾಂಶ

ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲಿ ಅನೇಕ ವಿಮೆಗಳಿದ್ದು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು.

ಕುಷ್ಟಗಿ:

ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲಿ ಅನೇಕ ವಿಮೆಗಳಿದ್ದು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ದೋಟಿಹಾಳ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕ ಎಂ. ಅನಿಲಕುಮಾರ ಹೇಳಿದರು.

ತಾಲೂಕಿನ ದೋಟಿಹಾಳ ಗ್ರಾಮದ ನಿವಾಸಿ ದಿಲ್ಶಾದ್ಬಿ ಕೋಡಿಹಾಳ ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲಿ ₹436 ಪಾವತಿಸುವ ಮೂಲಕ ವಿಮೆ ಮಾಡಿಸಿದ್ದರು. ಅವರು ಮೃತಪಟ್ಟ ಹಿನ್ನೆಲೆಯಲ್ಲಿ ವಾರಸುದಾರರಾದ ಪತಿ ಮೆಹಬೂಬಸಾಬ ಕೋಡಿಹಾಳ ಅವರಿಗೆ ವಿಮೆ ಮೊತ್ತ ₹2 ಲಕ್ಷ ಚೆಕ್‌ ವಿತರಿಸಿ ಮಾತನಾಡಿದರು.

ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲಿ ಅನೇಕ ವಿಮೆ ಕಂತಿನ ಯೋಜನೆಗಳು ಚಾಲ್ತಿಯಲ್ಲಿದ್ದು, ಪ್ರತಿಯೊಬ್ಬ ಗ್ರಾಹಕರು ತಮ್ಮ ಕುಟುಂಬದ ಒಳಿತಿಗಾಗಿ, ಭದ್ರತೆಗಾಗಿ ವಿಮೆ ಮಾಡಿಸಬೇಕು ಎಂದರು.

ಕರ್ನಾಟಕ ಗ್ರಾಮೀಣ ಬ್ಯಾಂಕಿನ ಸಿಬ್ಬಂದಿ ಮಂಜುನಾಥ, ನಾಗರಾಜ, ಅಮುಲ್, ಸಂಪತ್, ವೀರೇಶ್ ಬಿಜಕಲ್ ಇದ್ದರು.

ವಿಜೃಂಭಣೆಯ ವಿರೂಪಾಕ್ಷಲಿಂಗ ಶಿವಾಚಾರ್ಯರ ಅಡ್ಡಪಲ್ಲಕ್ಕಿ ಉತ್ಸವ:

ಕುಷ್ಟಗಿ ತಾಲೂಕಿನ ಚಳಗೇರಾ ಗ್ರಾಮದ ಲಿಂ.ಪರಮ ಪೂಜ್ಯ ಶ್ರೀ ವಿರೂಪಾಕ್ಷಲಿಂಗ ಶಿವಾಚಾರ್ಯರ ದಶಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಅಡ್ಡಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ನಡೆಯಿತು.ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ ಲಿಂ. ಶ್ರೀ ರುದ್ರಮುನಿ ಶಿವಾಚಾರ್ಯ ಗದ್ದುಗೆ, ಲಿಂ.ಶ್ರೀ ವಿರೂಪಾಕ್ಷಲಿಂಗ ಶಿವಾಚಾರ್ಯ ಗದ್ದುಗೆ ಹಾಗೂ ಶ್ರೀ ವೀರಭದ್ರೇಶ್ವರ ಮತ್ತು ಭದ್ರಕಾಳಿ ಮೂರ್ತಿಗಳಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ ಜರುಗಿದವು. ನಂತರ ವಟುಗಳಿಗೆ ಅಯ್ಯಾಚಾರ, ಲಿಂಗದೀಕ್ಷೆ ನೆರವೇರಿಸಲಾಯಿತು.ಗ್ರಾಮದ ಪ್ರಮುಖ ಬೀದಿಗಳಲ್ಲಿ ರುದ್ರಸ್ವಾಮಿ ಹಿರೇಮಠದಿಂದ ಲಿಂ.ಶ್ರೀ ವಿರೂಪಾಕ್ಷಲಿಂಗ ಶಿವಾಚಾರ್ಯ ಭಾವಚಿತ್ರದ ಅಡ್ಡಪಲ್ಲಕ್ಕಿ ಉತ್ಸವ ಪ್ರಾರಂಭವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮಹಿಳೆಯರು ಕುಂಭ ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ಸಕಲ ವಾದ್ಯಗಳೊಂದಿಗೆ ಹೊಸ ಹಿರೇಮಠದ ಶೀಲಾ ಮಂಟಪದವರೆಗೆ ಮೆರವಣಿಗೆ ಸಂಚರಿಸಿತು.

ವೀರಸಂಗಮೇಶ್ವರ ಶಿವಾಚಾರ್ಯರ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆದವು. ಗ್ರಾಮದ ಮುಖಂಡರಾದ ಸುರೇಶ ವೈಜಾಪೂರ, ಬಸವರಾಜ ಸಾಲಿಮಠ, ರಾಜಶೇಖರ ಹಿರೇಮಠ, ವೀರನಗೌಡ ಮಾಲಿಪಾಟೀಲ್, ಪ್ರಭುರಾಜ ಗಾಣಿಗೇರ, ಸಂಗಮೇಶ ಮಾಲಿಪಾಟೀಲ್, ಅಯ್ಯನಗೌಡ ಮಾಲಿಪಾಟೀಲ್, ಮುದಕನಗೌಡ ಮಾಜಿಗೌಡರ, ಬಸಪ್ಪ ಅಂಗಡಿ, ಪ್ರವೀಣ ವೈಜಾಪೂರ, ಗವಿಸಿದ್ಧಪ್ಪ ರಂಜಣಗಿ, ಸುರೇಶ ಸಾಲಿಮಠ, ವೀರಯ್ಯ ಸಾಲಿಮಠ, ಈಶ್ವರಯ್ಯ ಹಿರೇಮಠ, ಕಳಕಪ್ಪ ಗುಗ್ಗರಶೆಟ್ಟರ, ಮಾಸಪ್ಪ ಕ್ವಾಟಿಮನಿ, ಗವಿಸಿದ್ಧಪ್ಪ ಬಳಿಗೇರ, ಈಶಪ್ಪ ವಣಗೇರಿ, ವಿನಾಯಕ ನರಸಕೊಪ್ಪ, ಉಮೇಶ ಬಡಿಗೇರ, ಸಂಗಣ್ಣ ಬಳಿಗಾರ ಸೇರಿದಂತೆ ನಾನಾ ಸಮಾಜದ ಹಿರಿಯರು ಇದ್ದರು.