ಸಾರಾಂಶ
ಹುಬ್ಬಳ್ಳಿಯ ಜೈನ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜೂ.7, 8ರಂದು ನಡೆದ ವೈಭವ್ - 2ಕೆ24 ಕಾಲೇಜಿನ ವಾರ್ಷಿಕೋತ್ಸವ ಅಂಗವಾಗಿ ನಡೆಸಲಾದ ಸ್ಪರ್ಧೆಗಳಲ್ಲಿ ದಾವಣಗೆರೆ ನಗರದ ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯದ ಇನ್ಫಾರ್ಮೇಷನ್ ಸೈನ್ಸ್ ಅಂಡ್ ಎಂಜಿನಿಯರಿಂಗ್ ವಿಭಾಗದ 4ನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳಾದ ಪ್ರವೀಣ ಎಚ್., ಪ್ರಜ್ವಲ್ ಕೆ.ಎಲ್., ವರುಣ ಡಿ.ಕೆ. ಅವರು “ಐಡಿಯಾಥಾನ್” ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಪ್ರಶಸ್ತಿಯನ್ನು ಪಡೆದಿದ್ದಾರೆ.
ದಾವಣಗೆರೆ: ಹುಬ್ಬಳ್ಳಿಯ ಜೈನ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜೂ.7, 8ರಂದು ನಡೆದ ವೈಭವ್ - 2ಕೆ24 ಕಾಲೇಜಿನ ವಾರ್ಷಿಕೋತ್ಸವ ಅಂಗವಾಗಿ ನಡೆಸಲಾದ ಸ್ಪರ್ಧೆಗಳಲ್ಲಿ ನಗರದ ಜಿ.ಎಂ. ತಾಂತ್ರಿಕ ಮಹಾವಿದ್ಯಾಲಯದ ಇನ್ಫಾರ್ಮೇಷನ್ ಸೈನ್ಸ್ ಅಂಡ್ ಎಂಜಿನಿಯರಿಂಗ್ ವಿಭಾಗದ 4ನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳಾದ ಪ್ರವೀಣ ಎಚ್., ಪ್ರಜ್ವಲ್ ಕೆ.ಎಲ್., ವರುಣ ಡಿ.ಕೆ. ಅವರು “ಐಡಿಯಾಥಾನ್” ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಪ್ರಶಸ್ತಿಯನ್ನು ಪಡೆದಿದ್ದಾರೆ.
ಹಾಗೂ ಮನೋಜ್ ಎಸ್.ಸಿ., ಆರ್.ಪೂರ್ವಜ್, ರಜತ್ ಓ.ಎಸ್. ಅವರು ದ್ವಿತೀಯ ಪ್ರಶಸ್ತಿ ಪಡೆದಿದ್ದು, ನಿಹಾಲ್ ಎಸ್.ಜೆ., ಗೌತಮ್ ಎಲ್.ಎಂ., ಕಿಶೋರ್ ಕೆ. ಬಿಸ್ಲೇರಿ “ಟೆಕ್ ಟೈಟಾನ್ಸ್” ಸ್ಪರ್ಧೆಯಲ್ಲಿ ದ್ವಿತೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಪ್ರತಿನಿಧಿ ವೈ.ಯು. ಸುಭಾಶ್ಚಂದ್ರ, ಪ್ರಾಚಾರ್ಯ ಡಾ. ಎಂ.ಬಿ. ಸಂಜಯ್ ಪಾಂಡೆ , ಇನ್ಫಾರ್ಮೇಷನ್ ಸೈನ್ಸ್ ಅಂಡ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಟಿ.ಎಂ. ವೀರಗಂಗಾಧರ ಸ್ವಾಮಿ, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.
- - - -14ಕೆಡಿವಿಜಿ33ಃ: