ಎಸ್‌ಡಿಎಂಎ ಕಾಲೇಜಿನಿಂದ ‘ಏಕ್ ಪೇಡ್ ಮಾ ಕೆ ನಾಮ್’ ಸಂಪನ್ನ

| Published : Nov 06 2024, 12:31 AM IST

ಸಾರಾಂಶ

ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಅಂಗವಾಗಿ ‘ಏಕ್ ಪೇಡ್ ಮಾ ಕೆ ನಾಮ್ - ತಾಯಿ ಹೆಸರಿನಲ್ಲಿ ಒಂದು ಮರ’ ನೆಡುವ ಕಾರ್ಯಕ್ರಮ ಉಡುಪಿ ಸಮೀಪದ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಉದ್ಯಾವರ

ಇಲ್ಲಿನ ಕುತ್ಪಾಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ೯ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಅಂಗವಾಗಿ ‘ಏಕ್ ಪೇಡ್ ಮಾ ಕೆ ನಾಮ್ - ತಾಯಿ ಹೆಸರಿನಲ್ಲಿ ಒಂದು ಮರ’ ನೆಡುವ ಕಾರ್ಯಕ್ರಮ ಉಡುಪಿ ಸಮೀಪದ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ನಡೆಸಲಾಯಿತು. ಅಲ್ಲದೇ ವಿದ್ಯಾರ್ಥಿಗಳಲ್ಲಿ ಆಯುರ್ವೇದ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ಎನ್ಸಿಐಎಸ್‌ಎಂ ನಿರ್ದೇಶನದಂತೆ ‘ಏಕ ಪೇಡ್ ಮಾ ಕೆ ನಾಮ್’ ಅಭಿಯಾನದಡಿ ಮೊರಾರ್ಜಿ ದೇಸಾಯಿ ಶಾಲೆ ಪಟ್ಲ, ಮೊರಾರ್ಜಿ ದೇಸಾಯಿ ಶಾಲೆ ಕಳತೂರು, ಕಾಪು ಮತ್ತು ಮೊರಾರ್ಜಿ ದೇಸಾಯಿ ಶಾಲೆ ಯಡಾಡಿ ಮತ್ಯಾಡಿ ಕುಂದಾಪುರದಲ್ಲಿ ೨೦೦ಕ್ಕೂ ಹೆಚ್ಚು ಔಷಧೀಯ ಸಸಿಗಳನ್ನು ನೆಡಲಾಯಿತು.

ಈ ಸಂದರ್ಭದಲ್ಲಿ ಮಣ್ಣಿನ ಫಲವತ್ತತೆ, ಆರೋಗ್ಯಕರ ಜೀವನ ಶೈಲಿಯ ಮಹತ್ವ, ಆರೋಗ್ಯ ನಿರ್ವಹಣೆಯಲ್ಲಿ ಔಷಧೀಯ ಸಸ್ಯಗಳ ಮಹತ್ವ ಬಗ್ಗೆ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಯಿತು. ಮಕ್ಕಳಿಗೆ ಸಸ್ಯಗಳ ಮೇಲೆ ಹಾಗೂ ಅವುಗಳ ಔಷಧೀಯ ಉಪಯೋಗಗಳ ಬಗ್ಗೆ ಪೋಸ್ಟರ್‌ಗಳನ್ನು ಹಂಚಲಾಯಿತು.ಎಸ್‌ಡಿಎಂ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಸುಮಾ ಮಲ್ಯ, ಡಾ. ತೇಜಸ್ವಿ ನಾಯ್ಕ್, ಡಾ. ಪೂರ್ಣಿಮಾ, ಡಾ. ರವಿಕೃಷ್ಣ ಎಸ್. ಅವರು ತಿಳುವಳಿಕೆ ಹಂಚುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದರು.