ರಾಜ್ಯ ಪ್ರಶಸ್ತಿಗೆ ಆಯ್ಕೆಯಾದ ಪತ್ರಕರ್ತರಿಗೆ ಸನ್ಮಾನ

| Published : Feb 02 2024, 01:06 AM IST

ರಾಜ್ಯ ಪ್ರಶಸ್ತಿಗೆ ಆಯ್ಕೆಯಾದ ಪತ್ರಕರ್ತರಿಗೆ ಸನ್ಮಾನ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾ ಹಾಗೂ ಪ್ರಾದೇಶಿಕ ದಿನಪತ್ರಿಕೆಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿವೆ. ನಮ್ಮ ಬೇಡಿಕೆ ಈಡೇರಿಕೆಗೆ ಎಲ್ಲ ಸಂಪಾದಕರು ಸಂಘಟಿತರಾಗಬೇಕು ಎಂದು ಕರ್ನಾಟಕ ಕಾರ್ಯನಿರತ ದಿನ ಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯ ಉಪಾಧ್ಯಕ್ಷ ಮಂಜುನಾಥ ಅಬ್ಬಿಗೇರಿ ಹೇಳಿದರು.

ಗದಗ: ಜಿಲ್ಲಾ ಹಾಗೂ ಪ್ರಾದೇಶಿಕ ದಿನಪತ್ರಿಕೆಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿವೆ. ನಮ್ಮ ಬೇಡಿಕೆ ಈಡೇರಿಕೆಗೆ ಎಲ್ಲ ಸಂಪಾದಕರು ಸಂಘಟಿತರಾಗಬೇಕು ಎಂದು ಕರ್ನಾಟಕ ಕಾರ್ಯನಿರತ ದಿನ ಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯ ಉಪಾಧ್ಯಕ್ಷ ಮಂಜುನಾಥ ಅಬ್ಬಿಗೇರಿ ಹೇಳಿದರು.

ನಗರದ ಕಿತ್ತೂರು ಕರ್ನಾಟಕ ಪ್ರಾದೇಶಿಕ ಕನ್ನಡ ದಿನ ಪತ್ರಿಕೆ ಕಚೇರಿಯಲ್ಲಿ ಬುಧವಾರ ಕರ್ನಾಟಕ ಕಾರ್ಯನಿರತ ಜಿಲ್ಲಾ ಹಾಗೂ ಪ್ರಾದೇಶಿಕ ದಿನ ಪತ್ರಿಕೆಗಳ ಸಂಪಾದಕರ ಸಂಘದ ಸಭೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ರಾಜ್ಯ ಪ್ರಶಸ್ತಿಗೆ ಆಯ್ಕೆಯಾದ ಜಿಲ್ಲೆಯ ಪತ್ರಕರ್ತರನ್ನು ಸನ್ಮಾನಿಸಿ ಮಾತನಾಡಿದರು.

ಈಗಾಗಲೇ ಸಂಘದಿಂದ ಸಂಪಾದಕರ ಬೇಡಿಕೆ ಈಡೇರಿಕೆಗೆ ಸಂಬಂಧಿಸಿದಂತೆ ಇಲಾಖೆ ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಗಿದ್ದು, ಸಂಘಕ್ಕೆ ಹೆಚ್ಚಿನ ಶಕ್ತಿ ತುಂಬಲು ಸಂಪಾದಕರು ಸಂಘಟಿತರಾಗೋಣ ಎಂದರು.

ಜಿಲ್ಲಾಧ್ಯಕ್ಷ ನೂರಅಹ್ಮದ್ ಮಕಾನದಾರ ಮಾತನಾಡಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಈ ಬಾರಿ ಗದಗ ಜಿಲ್ಲೆಯಿಂದ ಇಬ್ಬರು ಪತ್ರಕರ್ತರಿಗೆ ಪ್ರಶಸ್ತಿ ಲಭಿಸಿದ್ದು, ಸಂತಸ ತಂದಿದೆ. ಪತ್ರಕರ್ತರಾದ ವೆಂಕಟೇಶ್ ಇಮರಾಪೂರ ಹಾಗೂ ಮಹಳಿಂಗರಾಯ ಪೂಜಾರ್ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದು ಹೆಮ್ಮೆ ತಂದಿದೆ ಎಂದರು.

ಈ ಸಂದರ್ಭದಲ್ಲಿ ಬದರಿನಾಥ ಹೊಂಬಾಳಿ ಪ್ರಶಸ್ತಿಗೆ ಆಯ್ಕೆಯಾದ ವೆಂಕಟೇಶ್ ಇಮರಾಪೂರ ಹಾಗೂ ಯಜಮಾನ್ ಟಿ. ನಾರಾಯಣಪ್ಪ ಪ್ರಶಸ್ತಿಗೆ ಆಯ್ಕೆಯಾದ ಮಹಳಿಂಗರಾಯ್ ಪೂಜಾರ್ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಉಪಾಧ್ಯಕ್ಷ ಎನ್.ಆರ್. ಭಾಂಡಗೆ, ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಅಜಿತ್ ಹೊಂಬಾಳಿ, ಎಚ್.ಎಂ. ಶರೀಫನವರ್, ಕಾನಿಪ ಜಿಲ್ಲಾಧ್ಯಕ್ಷ ರಾಜು ಹೆಬ್ಬಳ್ಳಿ, ಜಗದೀಶ್ ಪೂಜಾರ್, ಎಂ.ಜಿ. ಕುಲಕರ್ಣಿ, ಮೌನೇಶ್ ಬಡಿಗೇರ, ಚನ್ನಯ್ಯ ಹಿರೇಮಠ, ಮಂಜು ಜಡಿ, ಸುಭಾಸ್ ಮಳಗಿ, ಕಿರಣ ಕೆಂಚಗುಂಡಿ, ಹುಸೇನ್ ನದಾಫ್, ನಾಗರಾಜ್ ರಾಹುತ್, ಹರೀಶ್ ಬೆಲೇರಿ, ಪರಶುರಾಮ್ ಬಾರಕೇರ, ಈರಣ್ಣ ಮೂರಶಿಳ್ಳಿನ ಸೇರಿದಂತೆ ಇತರರು ಇದ್ದರು.