ಗೋವಾದ ರಾಮನಾಥ ದೇವಸ್ಥಾನದ ಕೌಂಡಿಣ್ಯ ಗೋತ್ರ ನಾಯಕ್ ಕುಲಪುರುಷ ಸಮಿತಿಯ ಉಡುಪಿ ಜಿಲ್ಲಾ ಶಾಖೆ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇತ್ತೀಚಿಗೆ ಹರಿಖಂಡಿಗೆಯ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ಸುಧೀಂದ್ರ ತೀರ್ಥ ಸಭಾಭವನದಲ್ಲಿ ಜರುಗಿತು.
ಉಡುಪಿ: ಗೋವಾದ ರಾಮನಾಥ ದೇವಸ್ಥಾನದ ಕೌಂಡಿಣ್ಯ ಗೋತ್ರ ನಾಯಕ್ ಕುಲಪುರುಷ ಸಮಿತಿಯ ಉಡುಪಿ ಜಿಲ್ಲಾ ಶಾಖೆ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇತ್ತೀಚಿಗೆ ಹರಿಖಂಡಿಗೆಯ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ಸುಧೀಂದ್ರ ತೀರ್ಥ ಸಭಾಭವನದಲ್ಲಿ ಜರುಗಿತು. ದಿ. ಬಿ. ಜಯರಾಮ ನಾಯಕ್ ಅವರ ಸ್ಮರಣಾರ್ಥ 8ನೇ ವರ್ಷದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಈ ಬಾರಿಯ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಉಡುಪಿ ಜಿಲ್ಲೆಯ ವಿವಿಧ ಪ್ರದೇಶಗಳಿಂದ ಆಗಮಿಸಿದ 23 ಮಂದಿ ವಿದ್ಯಾರ್ಥಿಗಳನ್ನು ತಲಾ 5 ಸಾವಿರ ನಗದು, ಸ್ಮರಣಿಕೆ ಹಾಗೂ ಪ್ರಶಂಸಾಪತ್ರಗಳೊಂದಿಗೆ ಪುರಸ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಸದಸ್ಯ ಉಮೇಶ್ ನಾಯಕ್, ಪ್ರೇಮಾನಂದ ನಾಯಕ್, ಶ್ರೀಧರ ನಾಯಕ್, ಕಮಲಾಕ್ಷ ನಾಯಕ್, ರಾಜಾರಾಮ ನಾಯಕ್, ಚಂದ್ರಕಾಂತ ನಾಯಕ್, ಡಾ. ಕೃಷ್ಣಾನಂದ ನಾಯಕ್, ರಾಧಾಕೃಷ್ಣ ನಾಯಕ್, ಶ್ರೀಪತಿ ನಾಯಕ್, ಶಾಂತಾ ನಾಯಕ್ ಹಾಗೂ ಅಶೋಕ್ ಪ್ರಭಾಕರ ನಾಯಕ್, ದೇವಳದ ಆಡಳಿತ ಮಂಡಳಿ ಸದಸ್ಯರು, ನೂರಾರು ಸಮಾಜ ಬಾಂಧವರು ಉಪಸ್ಥಿತರಿದ್ದರು.