ಆರೋಗ್ಯಕರ ಸಮಾಜಕ್ಕೆ ಎದುರಾಗುವ ಬೆದರಿಕೆಯನ್ನು ನಿಗ್ರಹಿಸಲು ಮತ್ತು ಮುಂಬರುವ ಪೀಳಿಗೆಗೆ ಉತ್ತಮ ಮತ್ತು ಸುಸ್ಥಿರ ಭವಿಷ್ಯವನ್ನು ಒದಗಿಸಲು, ಅಧಿಕ ಜನಸಂಖ್ಯೆಗೆ ಸಂಬಂಧಿಸಿದ ಅಪಾಯದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಜನರಿಗೆ ಶಿಕ್ಷಣ ನೀಡುವುದು ಅತ್ಯಗತ್ಯ.
ನರಗುಂದ: ಹೆಚ್ಚುತ್ತಿರುವ ಜನಸಂಖ್ಯೆಯು ಮಾನವನ ಉಳಿವಿಗೆ ಬೆದರಿಕೆಯಾಗುತ್ತಿದೆ. ಅಧಿಕ ಜನಸಂಖ್ಯೆಯಿಂದಾಗಿ, ವಿಶ್ವದ ನೈಸರ್ಗಿಕ ಸಂಪನ್ಮೂಲಗಳು ಪ್ರತಿದಿನವೂ ಸಮರ್ಥನೀಯವಲ್ಲದ ದರದಲ್ಲಿ ಕ್ಷೀಣಿಸುತ್ತಿವೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ. ಆರ್.ಸಿ. ಕೊರವನವರ ತಿಳಿಸಿದರು.
ಬುಧವಾರ ಪಟ್ಟಣದ ಯಡೆಯೂರ ಸಿದ್ಧಲಿಂಗೇಶ್ವರ ಶಿಕ್ಷಣ ಮಹಾವಿದ್ಯಾಲಯ ಮತ್ತು ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಹಾಗೂ ಬಿಇಡಿ ಕಾಲೇಜಿನ ಎನ್ಎಸ್ಎಸ್ ಘಟಕದ ಆಶ್ರಯದಲ್ಲಿ ನಡೆದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆರೋಗ್ಯ ವಿಜ್ಞಾನ ಮತ್ತು ತಂತ್ರಜ್ಞಾನದ ಪ್ರಗತಿಗಳು ತಾಯಿ ಮತ್ತು ಶಿಶು ಮರಣವನ್ನು ಕಡಿಮೆ ಮಾಡಿ ಜೀವಿತಾವಧಿಯನ್ನು ಹೆಚ್ಚಿಸಿವೆ ಎಂದರು.ಆರೋಗ್ಯಕರ ಸಮಾಜಕ್ಕೆ ಎದುರಾಗುವ ಬೆದರಿಕೆಯನ್ನು ನಿಗ್ರಹಿಸಲು ಮತ್ತು ಮುಂಬರುವ ಪೀಳಿಗೆಗೆ ಉತ್ತಮ ಮತ್ತು ಸುಸ್ಥಿರ ಭವಿಷ್ಯವನ್ನು ಒದಗಿಸಲು, ಅಧಿಕ ಜನಸಂಖ್ಯೆಗೆ ಸಂಬಂಧಿಸಿದ ಅಪಾಯದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಜನರಿಗೆ ಶಿಕ್ಷಣ ನೀಡುವುದು ಅತ್ಯಗತ್ಯ ಎಂದರು.
ಗದುಗಿನ ಡಿಎಚ್ಒ ಪುಷ್ಪಾ ಮಾತನಾಡಿ, ಯುವಜನರು ತಮ್ಮ ಜವಾಬ್ದಾರಿಗಳನ್ನು ಅರ್ಥಮಾಡಿಕೊಳ್ಳಬೇಕು. ಸಮಾಜದಲ್ಲಿರುವ ಲಿಂಗ ತಾರತಮ್ಯವನ್ನು ತಪ್ಪಿಸಲು ಜನರಿಗೆ ಶಿಕ್ಷಣ ನೀಡಬೇಕು ಎಂದರು.ಆರೋಗ್ಯ ಇಲಾಖೆಯ ಆಪ್ತ ಸಮಾಲೋಚಕ ಎನ್.ಎಲ್. ಮಡಿವಾಳರ, ಕಾಲೇಜಿನ ಪ್ರಾಂಶುಪಾಲ ಆರ್.ಬಿ. ಪಾಟೀಲ ಮಾತನಾಡಿದರು. ಕಾರ್ಯಕ್ರಮದಲ್ಲಿ ಡಾ. ಮಂಜುನಾಥ ಕುದರಿ, ಎನ್ಎಸ್ಎಸ್ ಘಟಕದ ಕಾರ್ಯಕ್ರಮಾಧಿಕಾರಿ ಎಂ.ಈ. ವಿಶ್ವಕರ್ಮ, ಸಿ.ಎಫ್. ಕುಂಬಾರ, ಎನ್ಎಸ್ಎಸ್ ವಿದ್ಯಾರ್ಥಿ ಪ್ರತಿನಿಧಿಗಳಾದ ಅನಿಲ ಹಟ್ಟಿ, ಶಶಿಕಲಾ ಬೇಡಗೌಡರ ಇತರರು ಇದ್ದರು.
ಕಾವೇರಿ ನಾಯ್ಕರ ಮತ್ತು ಪವಿತ್ರ ರೋಣದ ಸ್ವಾಗತಿಸಿದರು. ಅಕ್ಷತಾ ಯಡಹಳ್ಳಿ ಮತ್ತು ಲಿಂಗ ಬಸಪ್ಪ ಚಿಕ್ಕಬಾವಿ ನಿರೂಪಿಸಿದರು, ಅಭಿಷೇಕ ಓಲೇಕಾರ ವಂದಿಸಿದರು.ಇಂದಿನಿಂದ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ
ಗದಗ: ಕಾಶಿ ನೂತನ ಜಗದ್ಗುರುಗಳ ಅವರ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜೆ ಕಾಶಿಯ ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಶ್ರೀಗಳಿಂದ ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆ ಹಾಗೂ ಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ ಜು. 16ರಿಂದ 21ರ ವರೆಗೆ ನಗರದ ಮಾಂಗಲ್ಯ ಮಂದಿರದಲ್ಲಿ ನಡೆಯಲಿದೆ ಎಂದು ಪಂಚಾಚಾರ್ಯ ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ ಬೆಲೇರಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜು. 16 ರಂದು ಬೆಳಗ್ಗೆ ಮಹಾಪೂಜೆ ಹಾಗೂ ಸಂಜೆ ಧರ್ಮ ಸಭೆಯು ಉದ್ಘಾಟನೆಗೊಂಡು ಜು. 21ರ ವರೆಗೆ ಕಾರ್ಯಕ್ರಮಗಳು ನಡೆಯಲಿವೆ. ಬೆಳಗ್ಗೆ ಪೂಜೆ ಹಾಗೂ ಸಂಜೆ ಪ್ರವಚನದ ನಂತರ ಮಹಾಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.ಜು. 21ರಂದು ಮಂಗಲೋತ್ಸವ ಕಾರ್ಯಕ್ರಮಕ್ಕೆ ಬಾಳೆಹೊನ್ನೂರಿನ ರಂಭಾಪುರಿ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮಿಗಳು ಆಗಮಿಸುವರು ಎಂದರು.ಈ ವೇಳೆ ಉಮಾಪತಿ ಭೂಸನೂರಮಠ, ಅಜ್ಜಣ್ಣ ಮಲ್ಲಾಡದ, ಸುರೇಶ ಅಬ್ಬಿಗೇರಿ, ಸಿದ್ದಲಿಂಗಪ್ಪ ಚಳಗೇರಿ, ರಾಜು ಮುಧೋಳ, ರಾಜಣ್ಣ ಮಲ್ಲಾಡದ, ಗುರುಸಿದ್ದಯ್ಯ ಹಿರೇಮಠ ಇದ್ದರು.