ಸಾರಾಂಶ
ಯಾದಗಿರಿ:ಅಂಚೆ ಇಲಾಖೆಯಿಂದ ಅಭಿಯಾನ 3.0 ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿವೃತ್ತ ಪಿಂಚಣಿದಾರರು ಡಿಜಿಟಲ್ ಲೈಫ್ ಸರ್ಟಿಫಿಕೆಟ್ ಸಲ್ಲಿಸುವಂತೆ ಜಾಗೃತಿ ಪಿಂಚಣಿದಾರಿಗೆ ಅನುಕೂಲಕ್ಕೆಕೇಂದ್ರ ಸರ್ಕಾರದ ಅಂಚೆ ಇಲಾಖೆಯ ನ.1ರಿಂದ 30 ರವರೆಗೆ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಅಂಚೆ ವಿಭಾಗದ ಅಂಚೆ ಅಧೀಕ್ಷಕರಾದ ಶಿವಾನಂದ್ ಹೀರಾಪೂರ್ ತಿಳಿಸಿದ್ದಾರೆ. ನಿವೃತ್ತ ಪಿಂಚಣಿದಾರರು ಪ್ರತಿವರ್ಷ ನವೆಂಬರ್ ತಿಂಗಳಲ್ಲಿ ಜೀವನ ಪ್ರಮಾಣ ಪತ್ರ ಸಲ್ಲಿಸಬೇಕಾಗಿರುತ್ತದೆ. ಜಿಲ್ಲೆಯ ಪಿಂಚಣಿದಾರರು ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ ಈ ಡಿಜಿಟಲ್ ಸರ್ಟಿಫಿಕೇಟ್ ಪಡೆಯಬೇಕು. ಭಾರತೀಯ ಅಂಚೆ ಇಲಾಖೆಯ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಹಾಗೂ ಅಂಚೆ ಇಲಾಖೆಯ ಪೋಸ್ಟ್ ಮ್ಯಾನ್‌ನವರು, ಗ್ರಾಮೀಣ ಡಾಕ್ ಸಿಬ್ಬಂದಿ ಅವರ ಈ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಒದಗಿಸುತ್ತಾರೆ. ಈ ಡಿಎಲ್‌ಸಿ ಮಾಡಲು ಕೇವಲ 70 ರು.ಗಳು ಮಾತ್ರ ಪಿಂಚಣಿದಾರರು ಪಾವತಿಸಬೇಕು. ಯಾದಗಿರಿ ಜಿಲ್ಲೆಯ ನಿವೃತ್ತ ಪಿಂಚಣಿದಾರರು ಈ ಡಿಎಲ್‌ಸಿ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದ್ದಾರೆ.