ಸರಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಛತೆಯೇ ಸೇವೆ
ಕುಷ್ಟಗಿ: ಕುಷ್ಟಗಿ ಪುರಸಭೆ ಕಾರ್ಯಾಲಯದ ವತಿಯಿಂದ ಪಟ್ಟಣದ ಸರಕಾರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ಸ್ವಚ್ಛತೆಯೇ ಸೇವೆ’ ಕಾರ್ಯಕ್ರಮ ಆಯೋಜಿಸಿ, ಮಕ್ಕಳಿಗೆ ಸ್ವಚ್ಛತೆ ಹಾಗೂ ತ್ಯಾಜ್ಯ ನಿರ್ವಹಣೆ ಕುರಿತು ಜಾಗೃತಿ ಮೂಡಿಸಲಾಯಿತು.
ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ಬೀಳಗಿ ಹಾಗೂ ಆರೋಗ್ಯ ವಿಭಾಗದ ಅಧಿಕಾರಿಗಳಾದ ಪ್ರಾಣೇಶ ಬಳ್ಳಾರಿ, ಹುಲ್ಲಪ್ಪ ಗಾಂಜಿ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಿತು.ಈ ಸಂದರ್ಭದಲ್ಲಿ ಕಮ್ಯುನಿಟಿ ಮೊಬಿಲೈಜರ್‌ಗಳಾದ ಶ್ರೀದೇವಿ ತೆಗ್ಗಿನಮನಿ, ಶಂಕ್ರಮ್ಮ ಹಿರೇಮಠ, ಮಾಲನ್ ಬಾನು, ಸಂಗೀತಾ ಕಟ್ಟಿಮನಿ ಹಾಗೂ ದೀಪಾ ಕಾರ್ಯಕ್ರಮ ನಿರ್ವಹಿಸಿದರು.
ಶಾಲೆಯ ಮುಖ್ಯಗುರು ಶರಣಮ್ಮ ಪೆದ್ದಿ, ಶಿಕ್ಷಕರು, ಪುರಸಭೆ ಸಿಬ್ಬಂದಿ, ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.