ಮಾದೇಶ್ವರ ಬೆಟ್ಟ ಅರಣ್ಯ ಪ್ರದೇಶದಲ್ಲಿ ಜಾಗೃತಿ

| Published : Apr 08 2024, 01:02 AM IST

ಸಾರಾಂಶ

ಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತಾದಿಗಳಿಗೆ ಮೈಸೂರು ಪರಿಸರ ವಾರಿಯರ್ಸ್ ಗ್ರೂಪ್ ವತಿಯಿಂದ ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ಅಭಿಯಾನ ನಡೆಸಲಾಯಿತು.

ಚಾಮರಾಜನಗರ: ಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತಾದಿಗಳಿಗೆ ಮೈಸೂರು ಪರಿಸರ ವಾರಿಯರ್ಸ್ ಗ್ರೂಪ್ ವತಿಯಿಂದ ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ಅಭಿಯಾನ ನಡೆಸಲಾಯಿತು.

ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಅರಣ್ಯ ಪ್ರದೇಶದಲ್ಲಿ ಪಾದಯಾತ್ರೆಗಳು ಬರುವ ಸ್ಥಳಗಳಲ್ಲಿ ಅರಿವು ಮೂಡಿಸಲಾಯಿತು. ಈ ಸಂದರ್ಭದಲ್ಲಿ ಮೈಸೂರು ಪರಿಸರ ವಾರಿಯರ್ಸ್‌ ಗ್ರೂಪ್‌ನ ಸದಸ್ಯ ಮಂಜುನಾಥ್ ಮಾತನಾಡಿ, ಬಿರು ಬಿಸಿಲಿನಲ್ಲಿ ಪಾದಯಾತ್ರೆಗಳು ಅರಣ್ಯ ಪ್ರದೇಶದಲ್ಲಿ ಭಕ್ತಿ ಪೂರ್ವಕವಾಗಿ ಕರ್ಪೂರವನ್ನು ಹಚ್ಚುವುದರಿಂದ ಗಾಳಿಗೆ ತೂರಿ ಅರಣ್ಯ ಪ್ರದೇಶಕ್ಕೆ ಬೆಂಕಿ ಕಿಡಿಬಿದ್ದು ಅರಣ್ಯವೆಲ್ಲ ಭಸ್ಮವಾಗುತ್ತದೆ. ಹೀಗಾಗಿ ಭಕ್ತಾದಿಗಳು ನಿಗದಿತ ಸ್ಥಳವಾದ ತಾಳು ಬೆಟ್ಟದಲ್ಲಿ ರಂಗಸ್ವಾಮಿ ಒಡ್ಡು ಮತ್ತು ಶ್ರೀ ಕ್ಷೇತ್ರ ದೇವಾಲಯದ ಮುಂಭಾಗ ಹಚ್ಚಬೇಕಾಗಿ ಮನವಿ ಮಾಡಿದರು.ಶ್ರೀ ಕ್ಷೇತ್ರದಲ್ಲಿ ಪ್ಲಾಸ್ಟಿಕ್ ಮುಕ್ತ ಅಭಿಯಾನ ಕಳೆದ ಹಲವಾರು ವರ್ಷಗಳಿಂದ ಹಮ್ಮಿಕೊಳ್ಳಲಾಗಿದೆ. ಮಾದಪ್ಪನ ಶ್ರೀ ಕ್ಷೇತ್ರಕ್ಕೆ ಬರುವ ಭಕ್ತಾದಿಗಳು ಪ್ಲಾಸ್ಟಿಕ್ ಮುಕ್ತ ಏಕ ಬಳಕೆ ಅಭಿಯಾನಕ್ಕೆ ಸಹಕಾರ ನೀಡುವಂತೆ ಮತ್ತು ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಬಾಟಲ್ ತ್ಯಾಜ್ಯಗಳನ್ನು ನಿಗದಿತ ಸ್ಥಳಗಳಲ್ಲಿ ಹಾಕುವಂತೆ ಮತಯಾತ್ರೆ ಭಕ್ತವೃಂದಕ್ಕೆ ತಿಳಿಸಿದರು. ಅಂತರಗಂಗೆ ಬಳಿ ಬರುವ ಭಕ್ತಾದಿಗಳು ಸ್ನಾನ ಮಾಡಿ ಹಳೆ ಬಟ್ಟೆ ಮತ್ತು ಪ್ಲಾಸ್ಟಿಕ್ ತ್ಯಾಜ್ಯ ಇನ್ನಿತರ ವಸ್ತುಗಳನ್ನು ಅಂತರಗಂಗೆ ಒಳಗೆ ಹಾಕುವುದು ಮತ್ತು ಎಲ್ಲಿಂದರಲ್ಲಿ ತ್ಯಾಜ್ಯಗಳನ್ನು ಬಿಸಾಡುವುದು, ಶ್ರೀ ಕ್ಷೇತ್ರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ ನಮ್ಮ ಮನೆ ಎಂದು ತಿಳಿದು ಪ್ರತಿಯೊಬ್ಬರು ತ್ಯಾಜ್ಯಗಳನ್ನು ನಿಗದಿತ ಕಸದ ಬುಟ್ಟಿಗಳಲ್ಲಿ ಹಾಕುವಂತೆ ಮನವಿ ಮಾಡಿದರು.