ಸಾರಾಂಶ
ಆಧುನಿಕ ದಿನಗಳಲ್ಲಿ ಹೊಸ ಅವಿಷ್ಕಾರಗಳ ಮೂಲಕ ಸ್ಮಾರ್ಟ್ ಆಗಿ ವಿದ್ಯುತ್ ಬಳಸುತ್ತಿದ್ದು ಸುರಕ್ಷತೆ ಮತ್ತು ನಿವರ್ಹಣೆ ಮಾಡಲು ಅರಿವು ಹಾಗೂ ಜಾಗೃತಿ ಮೂಡಿಸಲು ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹ ಹಮ್ಮಿಕೊಳ್ಳಲಾಗಿದೆ.
ಕುಷ್ಟಗಿ:
ಸುರಕ್ಷತೆ ಮತ್ತು ಜಾಗೃತೆಯಿಂದ ವಿದ್ಯುತ್ ಬಳಸಬೇಕು ಎಂದು ಎಲೆಕ್ಟ್ರಿಕಲ್ ಇನ್‌ಸ್ಪೆಕ್ಟರ್ ಸಂತೋಷ ಹೇಳಿದರು.ಪಟ್ಟಣದ ಕೆಇಬಿ ಕಚೇರಿಯ ಆವರಣದಲ್ಲಿ ನಡೆದ ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ವಿದ್ಯುತ್‌ನಿಂದ ನಡೆಯುವ ಅವಘಡ ತಡೆಯಲು ಜಾಗೃತಿ ಮೂಡಿಸುವುದು ಅತಿ ಮುಖ್ಯವಾಗಿದೆ. ಜಾಗೃತಿಯಿಂದ ವಿದ್ಯುತ್ ಬಳಸಿದಾಗ ಮಾತ್ರ ಅವಘಡಗಳು ನಿಯಂತ್ರಣಕ್ಕೆ ಬರುತ್ತವೆ ಎಂದರು.
ಆಧುನಿಕ ದಿನಗಳಲ್ಲಿ ಹೊಸ ಅವಿಷ್ಕಾರಗಳ ಮೂಲಕ ಸ್ಮಾರ್ಟ್ ಆಗಿ ವಿದ್ಯುತ್ ಬಳಸುತ್ತಿದ್ದು ಸುರಕ್ಷತೆ ಮತ್ತು ನಿವರ್ಹಣೆ ಮಾಡಲು ಅರಿವು ಹಾಗೂ ಜಾಗೃತಿ ಮೂಡಿಸಲು ಈ ಸಪ್ತಾಹ ಹಮ್ಮಿಕೊಳ್ಳಲಾಗಿದೆ ಎಂದ ಅವರು, ವಿದ್ಯುತ್ ಉಪಕರಣಗಳನ್ನು ಸುರಕ್ಷತೆಯಿಂದ ಬಳಸಬೇಕು. ಸಣ್ಣ-ಸಣ್ಣ ತಪ್ಪಿನಿಂದ ಅವಘಡಗಳು ಆಗುತ್ತಿದ್ದು ಈ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಅಂದಾಗ ಮಾತ್ರ ಅವಘಡ ತಡೆಯಬಹುದು ಎಂದರು. ಪವರ್‌ಮನ್‌ಗಳು ಕೆಲಸ ಮಾಡುವಾಗ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು. ಎಲ್‌ಸಿ ತೆಗೆದುಕೊಳ್ಳಬೇಕು, ಡಬಲ್ ಚೆಕ್ ಮಾಡಬೇಕು ಎಂದು ಹೇಳಿದರು.ಎಇಟಿ ಯಲ್ಲಮ್ಮ ಮಾತನಾಡಿ, ಜಿಲ್ಲೆಯಲ್ಲಿ ಒಂದು ವರ್ಷದಲ್ಲಿ 39 ಅವಘಡ ಸಂಭವಿಸಿವೆ ಎಂದು ತಿಳಿಸಿದರು. ಎಇಇ ಕೆಂಚಪ್ಪ ಭಾವಿಮನಿ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಎಇಇ ಜಂಬುನಾಥ, ಮುನಿರಾಬಾದ್ ಶಾಖೆಯ ಎಇಇ ರಮೇಶ ಹಿರೇಮನಿ, ದೀಪಾ ಎಚ್, ಎಂ.ಎಂ. ಮುದೇಗೌಡ್ರು, ನಿತ್ಯಾನಂದಗೌಡ, ಗಿರಿಧರ, ಮಲ್ಲಪ್ಪ, ಯಮನೂರಪ್ಪ, ಮಲ್ಲಪ್ಪ ಸೇರಿದಂತೆ ಅನೇಕರು ಇದ್ದರು.