ಇಂಧನ ಮಿತವ್ಯಯ, ವಾಯುಮಾಲಿನ್ಯ ತಡೆಗೆ ಅರಿವು ಮುಖ್ಯ

| Published : Oct 31 2025, 02:30 AM IST

ಇಂಧನ ಮಿತವ್ಯಯ, ವಾಯುಮಾಲಿನ್ಯ ತಡೆಗೆ ಅರಿವು ಮುಖ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿ ಶನಿವಾರ ಸ್ವಂತ ವಾಹನಗಳನ್ನು ಬಳಸದೇ ಸಾರ್ವಜನಿಕ ವಾಹನಗಳನ್ನು ಮಾತ್ರ ಬಳಸಬೇಕು. ಆ ಮೂಲಕ ವಿದ್ಯಾರ್ಥಿಗಳು, ಬೋಧಕರು ಮತ್ತು ಪೋಷಕರು ಇಂಧನ ಮಿತವ್ಯಯ, ಪರಿಸರ ಮಾಲಿನ್ಯ ತಡೆಗಟ್ಟಲು ಮುಂದಾಗಬೇಕು ಎಂದು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ.ಧನಂಜಯ ಹೇಳಿದ್ದಾರೆ.

- ವಾರದಲ್ಲಿ ಒಂದು ದಿನ ವಾಹನರಹಿತ ದಿನ ಕಾರ್ಯಕ್ರಮದಲ್ಲಿ ಡಾ.ಬಿ.ಜಿ.ಧನಂಜಯ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಪ್ರತಿ ಶನಿವಾರ ಸ್ವಂತ ವಾಹನಗಳನ್ನು ಬಳಸದೇ ಸಾರ್ವಜನಿಕ ವಾಹನಗಳನ್ನು ಮಾತ್ರ ಬಳಸಬೇಕು. ಆ ಮೂಲಕ ವಿದ್ಯಾರ್ಥಿಗಳು, ಬೋಧಕರು ಮತ್ತು ಪೋಷಕರು ಇಂಧನ ಮಿತವ್ಯಯ, ಪರಿಸರ ಮಾಲಿನ್ಯ ತಡೆಗಟ್ಟಲು ಮುಂದಾಗಬೇಕು ಎಂದು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ.ಧನಂಜಯ ಹೇಳಿದರು.

ಕಾಲೇಜು ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಇಂಧನ ಮಿತವ್ಯಯ ಹಾಗೂ ವಾಯುಮಾಲಿನ್ಯ ತಡೆಗಟ್ಟುವ ಬಗ್ಗೆ ವಿದ್ಯಾರ್ಥಿಗಳು, ಬೋಧಕರು ಹಾಗೂ ಪೋಷಕರಿಗೆ ಅರಿವು ಮೂಡಿಸುವ ಸಲುವಾಗಿ ವಾರದಲ್ಲಿ ಒಂದು ದಿನ ವಾಹನರಹಿತ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇಂದು ಜಗತ್ತಿನಲ್ಲಿ ಬರಿದಾಗುತ್ತಿರುವ ನೈಸರ್ಗಿಕ ಸಂಪನ್ಮೂಲಗಳ ಕೊರತೆ ಎದುರಾಗಿದೆ. ಇಂಧನ ಅಪವ್ಯಯ ಮತ್ತು ಅತಿಯಾದ ವಾಹನಗಳ ಅವಲಂಬನೆ ತಪ್ಪಿಸಲು ಈ ಆಚರಣೆ ಕೈಗೊಳ್ಳಲಾಗಿದೆ. ಇಂದು ವಾಹನಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದ್ದು, ಇಂಧನ ಕೊರತೆ ಜೊತೆಗೆ ಪರಿಸರ ಮಾಲಿನ್ಯವೂ ಹೆಚ್ಚಾಗುತ್ತಿದೆ. ಇದು ಕೇವಲ ಒಂದು ದೇಶದ ಸಮಸ್ಯೆಯಾಗಿರದೇ, ಇಡೀ ವಿಶ್ವದ ಸಮಸ್ಯೆಯಾಗಿದೆ. ಈ ಸಮಸ್ಯೆಗಳನ್ನು ಎದುರಿಸಲು ಇಂಧನ ಮಿತವ್ಯಯ ಅನಿವಾರ್ಯ ಎಂದರು.

ವಾಯು ಮಾಲಿನ್ಯ ಮತ್ತು ಸಂಚಾರ ದಟ್ಟಣೆಯಿಂದಾಹಿ ರಾಷ್ಟ್ರ ರಾಜಧಾನಿ ದೆಹಲಿ ದೊಡ್ಡ ಸುದ್ದಿಯಾಗಿದೆ. ಈ ಪರಿಸ್ಥಿತಿ ಯಾವುದೇ ಪ್ರದೇಶಕ್ಕೂ ಬರಬಾರದು. ಮುನ್ನೆಚ್ಚರಿಕೆಯಾಗಿ ನಮ್ಮ ಪರಿಸರ ಕಾಪಾಡಿಕೊಳ್ಳದಿದ್ದರೆ ದೆಹಲಿಯಂತಹ ನಗರಗಳಿಗೆ ಸೀಮಿತವಾದ ಈ ಸಮಸ್ಯೆ ಇಲ್ಲಿಯೂ ಬರಬಹುದು. ಆದ್ದರಿಂದ ಕಾಲೇಜಿನ ಐಕ್ಯೂಎಸಿ ಘಟಕ ಇನ್ನು ಮುಂದೆ ಪ್ರತಿ ಶನಿವಾರ ವಾಹನರಹಿತ ದಿನ ಆಚರಣೆಗೆ ಕ್ರಮವಹಿಸಿದೆ ಎಂದು ತಿಳಿಸಿದರು.

ವಾಹನರಹಿತ ದಿನ ಆಚರಣೆ ಮಹತ್ವವನ್ನು ಎಲ್ಲ ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ಸ್ವಯಂಪ್ರೇರಿತರಾಗಿ ಈ ಅಚರಣೆ ಕೈಗೊಂಡು ಪರಿಸರ ಮಾಲಿನ್ಯ ತಡೆಗಟ್ಟಬೇಕಾಗಿದೆ. ಇಂದು ವಾಯುಮಾಲಿನ್ಯದ ಕಾರಣಕ್ಕಾಗಿ ಪಕ್ಷಿಗಳ ಸಂಖ್ಯೆಯೂ ತೀವ್ರವಾಗಿ ಕಡಿಮೆಯಾಗುತ್ತಿದೆ. ಇದರ ದುಷ್ಪರಿಣಾಮ ಮುಂದಿನ ದಿನಗಳಲ್ಲಿ ಗಂಭೀರ ಪ್ರಭಾವ ಬೀರಬಾರದೆಂದರೆ ನಾವುಗಳು ವಾಯುಮಾಲಿನ್ಯ ತಡೆಗಟ್ಟಲೇಬೇಕು. ಇಂಧನವನ್ನು ಮಿತವಾಗಿ ಬಳ‍ಸಬೇಕು ಸಲಹೆ ನೀಡಿದರು.

ಕಾಲೇಜುನ ಐಕ್ಯೂಎಸಿ ಘಟಕದ ಸಂಚಾಲಕರು, ಎನ್.ಎಸ್.ಎಸ್. ಸ್ವಯಂಸೇವಕರು, ಪ್ರಾಧ್ಯಾಪಕ ವೃಂದದವರು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

- - -

-29ಎಚ್.ಎಲ್.ಐ1ಜೆಪಿಜಿ:

ಹೊನ್ನಾಳಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾರದಲ್ಲಿ ಒಂದು ದಿನ ವಾಹನರಹಿತ ದಿನ ಕಾರ್ಯಕ್ರಮ ನಡೆಯಿತು.