ದುಡಿಯುವ ಸಂಸ್ಥೆ ಘನತೆ ಎತ್ತರಿಸುವ ಜಾಗೃತಿ ಅಗತ್ಯ: ಸುಣ್ಣಂಬಳ

| Published : Oct 31 2025, 03:15 AM IST

ದುಡಿಯುವ ಸಂಸ್ಥೆ ಘನತೆ ಎತ್ತರಿಸುವ ಜಾಗೃತಿ ಅಗತ್ಯ: ಸುಣ್ಣಂಬಳ
Share this Article
  • FB
  • TW
  • Linkdin
  • Email

ಸಾರಾಂಶ

ಕಟೀಲು ಶ್ರೀನಿಕೇತನದಲ್ಲಿ ಮೂರು ದಿನಗಳ ಕಾಲ ಕಟೀಲು ಯಕ್ಷಗಾನ ಮಂಡಳಿಯ ಏಳೂ ಮೇಳಗಳ ಕಲಾವಿದರಿಗೆ ಆಯೋಜಿಸಿದ ಪುನರ್ ಮನನ ಕಾರ್ಯಾಗಾರದ ಸಮಾರೋಪ ಸಮಾರಂಭ ಬುಧವಾರ ನೆರವೇರಿತು.

ಕಟೀಲು ಯಕ್ಷಗಾನ ಮೇಳಗಳ ಪುನರ್ ಮನನ ಶಿಬಿರ ಸಮಾರೋಪ

ಮೂಲ್ಕಿ: ಕಲಾಜೀವನವನ್ನು ಆಯ್ಕೆ ಮಾಡಿ ಯಕ್ಷಗಾನ ಕ್ಷೇತ್ರಕ್ಕೆ ಬಂದ ಮೇಲೆ ಪ್ರಾಮಾಣಿಕವಾಗಿ ತೊಡಗಿಸಿಕೊಂಡು ತಾನು ದುಡಿಯುವ ಸಂಸ್ಥೆ, ದೇವರು, ಯಜಮಾನರ ಘನತೆ ಎತ್ತರಿಸುವಲ್ಲಿ ನಾವು ಸದಾ ಜಾಗೃತರಾಗಿರಬೇಕೆಂದು ಕಟೀಲು ಮೇಳದ ಪ್ರಬಂಧಕ ಸುಣ್ಣಂಬಳ ವಿಶ್ವೇಶ್ವರ ಭಟ್ ಹೇಳಿದ್ದಾರೆ.

ಕಟೀಲು ಶ್ರೀನಿಕೇತನದಲ್ಲಿ ಮೂರು ದಿನಗಳ ಕಾಲ ಕಟೀಲು ಯಕ್ಷಗಾನ ಮಂಡಳಿಯ ಏಳೂ ಮೇಳಗಳ ಕಲಾವಿದರಿಗೆ ಆಯೋಜಿಸಿದ ಪುನರ್ ಮನನ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಲಾವಿದರಾದ ದೇವಾನಂದ ಭಟ್, ದಿನಕರ ಗೋಖಲೆ ಅನಿಸಿಕೆ ಹೇಳಿದರು.ಯಕ್ಷಲಹರಿ ಸಂಸ್ಥೆಯ ಪಶುಪತಿಶಾಸ್ತ್ರಿ ಮಾತನಾಡಿ ಪ್ರಜ್ಞಾವಂತ ಪ್ರೇಕ್ಷಕರನ್ನು ತಲುಪುವಲ್ಲಿ ಕಲಾವಿದರು ಅಧ್ಯಯನಶೀಲರಾಗಬೇಕೆಂದು ಹೇಳಿದರು.ಮೇಳಗಳ ಸಂಚಾಲಕ ಕಲ್ಲಾಡಿ ದೇವೀಪ್ರಸಾದ ಶೆಟ್ಟಿ ಉಪಸ್ಥಿತರಿದ್ದರು. ಡಾ. ಶ್ರುತಕೀರ್ತಿರಾಜ ನಿರೂಪಿಸಿದರು. ಡಾ. ವಾದಿರಾಜ ಕಲ್ಲೂರಾಯ ವಂದಿಸಿದರು. 200ಕ್ಕೂ ಹೆಚ್ಚು ಮಂದಿ ಕಾರ್ಯಾಗಾರದಲ್ಲಿ ಭಾಗವಹಿಸಿದರು.ಪೂರ್ವರಂಗ, ರಂಗನಡೆಗಳು, ಪ್ರಸಂಗನಡೆಗಳು, ರಂಗಶಿಸ್ತು, ಜೀವನ ಶಿಸ್ತು, ಅರ್ಥಗಾರಿಕೆ ಮೊದಲಾದ ವಿಚಾರಗಳನ್ನು ಕಾರ್ಯಾಗಾರ ಒಳಗೊಂಡಿತ್ತು. ಗರಿಷ್ಠ ಮಟ್ಟದಲ್ಲಿ ಪ್ರದರ್ಶನಗೊಳ್ಳುವ ದೇವೀಮಾಹಾತ್ಮ್ಯೆ ಪ್ರಸಂಗದ ಬಗ್ಗೆ ವಿಸ್ತ್ರೃತ ವಿಮರ್ಶೆ ನಡೆಯಿತು.