ಮಕ್ಕಳ ಸರ್ವತೋಮುಖ ಪ್ರಗತಿಗೆ ಹಕ್ಕುಗಳ ಜಾಗೃತಿ

| Published : Sep 01 2025, 01:03 AM IST

ಸಾರಾಂಶ

ದೊಡ್ಡಬಳ್ಳಾಪುರ: ಇಲ್ಲಿನ ಯುವ ಸಂಚಲನ ಚಾರಿಟಬಲ್ ಟ್ರಸ್ಟ್ ಮತ್ತು ಚೈಲ್ಡ್ ರೈಟ್ಸ್ ಟ್ರಸ್ಟ್ ಸಹಯೋಗದಲ್ಲಿ ನಡೆಯುತ್ತಿರುವ "ಎಲ್ಲಾ ಮಕ್ಕಳಿಗೂ ಎಲ್ಲಾ ಹಕ್ಕುಗಳು " ಹಕ್ಕಿನೊಂದಿಗೆ ಜವಾಬ್ದಾರಿ ಅಭಿಯಾನದ ಮೊದಲ ಹಂತವಾಗಿ ಸೈಕಲ್ ಜಾಗೃತಿ ಕಾರ್ಯಕ್ರಮಕ್ಕೆ ಭಾನುವಾರ ಇಲ್ಲಿನ ತಾಲೂಕು ಕಚೇರಿ ವೃತ್ತದಲ್ಲಿ ಟ್ರಸ್ಟ್‌ ಅಧ್ಯಕ್ಷ ಚಿದಾನಂದಮೂರ್ತಿ, ಖಜಾಂಚಿ ನವೀನ್ ಮತ್ತು ಸದಸ್ಯ ದಿವಾಕರ್ ಈ ವರ್ಷವಿಡೀ ನಡೆಯಲಿರುವ ಮಹತ್ವದ ಅಭಿಯಾನಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಟ್ರಸ್ಟ್‌ ಅಧ್ಯಕ್ಷ ಚಿದಾನಂದಮೂರ್ತಿ, ಈ ಅಭಿಯಾನದ ಮುಖ್ಯ ಉದ್ದೇಶ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ದರ್ಗಾಜೋಗಿಹಳ್ಳಿ, ಕೊಡಿಗೇಹಳ್ಳಿ ಮತ್ತು ಅರಳು ಮಲ್ಲಿಗೆ ಸೇರಿ 3 ಗ್ರಾಮ ಪಂಚಾಯಿತಿಯನ್ನು ಆರಿಸಿಕೊಂಡು, ಆ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ಎಲ್ಲಾ ಗ್ರಾಮಗಳಲ್ಲಿ, ಶಾಲಾ ಮಕ್ಕಳು ಮತ್ತು ಗ್ರಾಮಸ್ಥರಿಗೆ ಮಕ್ಕಳ ಹಕ್ಕುಗಳು ಮತ್ತು ಅವರಿಗಾಗಿ ರಾಜ್ಯ-ಕೇಂದ್ರ ಸರ್ಕಾರಗಳು ಜಾರಿಗೆ ತಂದಿರುವ ಯೋಜನೆಗಳ ಕುರಿತು ಜಾಗೃತಿ ಮೂಡಿಸುವುದಾಗಿದೆ ಎಂದರು.ಹಂತ ಹಂತದ ಕಾರ್ಯಯೋಜನೆ:

ಅಭಿಯಾನವನ್ನು ಹಂತಹಂತವಾಗಿ ನಡೆಸಲು ಯೋಜಿಸಲಾಗಿದೆ. ಮೊದಲ ಹಂತದಲ್ಲಿ ಸೈಕಲ್ ಜಾಥಾದ ಮೂಲಕ ಗ್ರಾಮಗಳಿಗೆ ಭೇಟಿ ನೀಡಿ ಮಕ್ಕಳ ಹಕ್ಕುಗಳ ಪ್ರಚಾರವನ್ನು ಮಾಡಲಾಗುವುದು. ನಂತರದ ಹಂತಗಳಲ್ಲಿ ಶಾಲೆ, ಅಂಗನವಾಡಿ ಮತ್ತು ಗ್ರಾಮಗಳಿಗೆ ನೇರ ಭೇಟಿ ನೀಡಿ ಸಮಗ್ರ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.

ಮಾಹಿತಿ ಕೊರತೆ ನಿವಾರಣೆಯೇ ಗುರಿ:

ಸಮಾಜದಲ್ಲಿ ಮಕ್ಕಳ ಹಕ್ಕುಗಳು, ಅವರಿಗಾಗಿರುವ ಕಾಯ್ದೆಗಳು, ನೀತಿಗಳು, ಸರ್ಕಾರಿ ಸುತ್ತೋಲೆಗಳು, ಸಂಬಂಧಿತ ಇಲಾಖೆಗಳು ಮತ್ತು ಲಭ್ಯವಿರುವ ಯೋಜನೆಗಳ ಬಗ್ಗೆ ಸಾಕಷ್ಟು ಮಾಹಿತಿ ಕೊರತೆ ಇದೆ ಎಂಬುದು ಈ ಅಭಿಯಾನದ ಹಿನ್ನೆಲೆ. ''''''''ಮಕ್ಕಳು ಯಾರು?'''''''', ''''''''ಅವರಿಗಿರುವ ಹಕ್ಕುಗಳು ಯಾವುವು?'''''''', ''''''''ಸಮಾಜದಲ್ಲಿ ಮಕ್ಕಳನ್ನು ಹೇಗೆ ನಡೆಸಿಕೊಳ್ಳಬೇಕು?'''''''' ಇಂತಹ ಪ್ರಶ್ನೆಗಳಿಗೆ ಉತ್ತರಗಳನ್ನು, ಈ ಮೂಲಕ ತಲುಪಿಸಲು ಉದ್ದೇಶಿಸಲಾಗಿದೆ.

ಜೊತೆಗೆ, ಶಾಲಾ ಮಕ್ಕಳಿಗೆ ತಮ್ಮ ಹಕ್ಕುಗಳ ಜೊತೆಗೆ ನೆಲೆನಿಲ್ಲುವ ಜವಾಬ್ದಾರಿಗಳ ಬಗ್ಗೆ ಶಿಕ್ಷಣ ನೀಡಲಾಗುವುದು. ಆರೋಗ್ಯ ಜಾಗೃತಿಯನ್ನು ಉತ್ತೇಜಿಸುವ ಸಲುವಾಗಿ ಮುಟ್ಟು, ಸುರಕ್ಷಿತ-ಅಸುರಕ್ಷಿತ ಸ್ಪರ್ಶ, ವೈಯಕ್ತಿಕ ನೈತಿಕತೆ, ಸ್ವಚ್ಛತೆ, ದೇಹದ-ಮಾನಸಿಕ ಬದಲಾವಣೆಗಳು ಮುಂತಾದ ಅಗತ್ಯ ವಿಷಯಗಳ ಬಗ್ಗೆಯೂ ಮಕ್ಕಳೊಂದಿಗೆ ಮಾಹಿತಿ ಹಂಚಿಕೊಳ್ಳಲಾಗುವುದು.ಈ ಪ್ರಯತ್ನದ ಮೂಲಕ ಗ್ರಾಮೀಣ ಭಾಗದ ಪ್ರತಿ ಮಗು ತನ್ನ ಹಕ್ಕುಗಳನ್ನು ತಿಳಿದು, ಸುರಕ್ಷಿತ ಸಂರಕ್ಷಿತ ವಾತಾವರಣದಲ್ಲಿ ಬೆಳೆಯುವುದನ್ನು ಖಚಿತಪಡಿಸುವುದು ಈ ಸಂಸ್ಥೆಗಳ ಧ್ಯೇಯವಾಗಿದೆ ಎಂದು ತಿಳಿಸಿದರು.

31ಕೆಡಿಬಿಪಿ2- ದೊಡ್ಡಬಳ್ಳಾಪುರದಲ್ಲಿ ಮಕ್ಕಳ ಹಕ್ಕುಗಳ ಜಾಗೃತಿ ಕುರಿತ ಸೈಕಲ್‌ ಜಾಥಾಗೆ ಭಾನುವಾರ ಚಾಲನೆ ನೀಡಲಾಯಿತು.