ಕೊರಟಗೆರೆಯಲ್ಲಿ ಅರಿವು ಕಾರ್ಯಕ್ರಮ

| Published : Aug 09 2024, 12:36 AM IST

ಸಾರಾಂಶ

ಇಲ್ಲಿನ ತಾಲೂಕು ಆಸ್ಪತ್ರೆಯಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಅರಿವು ಕಾಯಕ್ರಮ ನಡೆಯಿತು. ಈ ವೇಳೆ ಕಾರ್ಯಕ್ರಮದ ಮೂಲ ಉದ್ದೇಶವನ್ನು ಗರ್ಭಿಣಿ ಬಾಣಂತಿಯರಿಗೆ ತಿಳಿಸಿಕೊಡಲಾಯಿತು.

ಕೊರಟಗೆರೆ: ಇಲ್ಲಿನ ತಾಲೂಕು ಆಸ್ಪತ್ರೆಯಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಅರಿವು ಕಾಯಕ್ರಮ ನಡೆಯಿತು. ಈ ವೇಳೆ ಕಾರ್ಯಕ್ರಮದ ಮೂಲ ಉದ್ದೇಶವನ್ನು ಗರ್ಭಿಣಿ ಬಾಣಂತಿಯರಿಗೆ ತಿಳಿಸಿಕೊಡಲಾಯಿತು. ತಾಯಂದಿರು ಮಗುವಿಗೆ ಎದೆಹಾಲು ಕುಡಿಯುವುದರಿಂದ ಆಗುವ ಅನುಕೂಲಗಳನ್ನು, ಅದರ ಮಹತ್ವವನ್ನು ತಿಳಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ.ಲಕ್ಷ್ಮೀಕಾಂತ, ಹಿರಿಯ ವೈದ್ಯಾಧಿಕಾರಿ ಡಾ ಮೋಹನ್ ದಾಸ್ ಹಾಗೂ ಮಕ್ಕಳ ತಜ್ಞರಾದ ಡಾ. ಷಣ್ಮುಗಪ್ರಿಯ ಅವರು ಉಪಸ್ಥಿತರಿದ್ದರು. ಶುಶ್ರೂಶಕ ಅಧಿಕಾರಿ ಶಿವರಾಜ್ ವಂದಿಸಿದರು.