ವಿದ್ಯುತ್ ಇಲಾಖೆ ಕೆಲಸದಲ್ಲಿ ಜಾಗೃತಿ, ಸುರಕ್ಷತೆ ಅಗತ್ಯ: ಎಇಇ ಬೆನ್ನಪ್ಪ

| Published : Mar 21 2024, 01:04 AM IST

ಸಾರಾಂಶ

ಸಿರವಾರ ಜೆಸ್ಕಾಂ ಕಚೇರಿಯಲ್ಲಿ ಸಿರವಾರ ಮತ್ತು ಮಲ್ಲಟ ಶಾಖೆಯ ಲೈನ್‌ಮೆನ್‌ಗಳಿಗೆ ಸಮವಸ್ತ್ರ ಮತ್ತು ಸುರಕ್ಷತಾ ಕಿಟ್‌ಗಳನ್ನು ಜೆಸ್ಕಾಂ ಉಪವಿಭಾಗದ ಎಇಇ ಬೆನ್ನಪ್ಪ ಕರಿಬಂಟನಾಳ ವಿತರಣೆ ಮಾಡಿದರು.

ಸಿರವಾರ: ವಿದ್ಯುತ್ ಇಲಾಖೆಯಲ್ಲಿ ಕೆಲಸ ಮಾಡುವುದು ಅತ್ಯಂತ ಶ್ರಮದಾಯಕ, ಎಚ್ಚರಿಕೆಯಿಂದ ಮಾಡುವ ವೃತ್ತಿಯಾಗಿದ್ದು, ವಿದ್ಯುತ್ ಕಂಬ ಹತ್ತಿ ಕೆಲಸ ಮಾಡುವಾಗ ಜಾಗೃತಿ ಮತ್ತು ಅಗತ್ಯ ಸುರಕ್ಷತೆಯೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಜೆಸ್ಕಾಂ ಉಪವಿಭಾಗದ ಎಇಇ ಬೆನ್ನಪ್ಪ ಕರಿಬಂಟನಾಳ ಸಲಹೆ ನೀಡಿದರು. ಪಟ್ಟಣ ಜೆಸ್ಕಾಂ ಕಚೇರಿಯಲ್ಲಿ ಸಿರವಾರ ಮತ್ತು ಮಲ್ಲಟ ಶಾಖೆಯ ಲೈನ್‌ಮೆನ್‌ಗಳಿಗೆ ಸಮವಸ್ತ್ರ ಮತ್ತು ಸುರಕ್ಷತಾ ಕಿಟ್ ವಿತರಣೆ ಮಾಡಿ ಮಾತನಾಡಿದರು.

ಲೈನ್‌ಮೆನ್ ಕೆಲಸ ಮಾಡಬೇಕಾದರೆ ಸುರಕ್ಷತೆಯ ನಿಯಮಗಳನ್ನು ತಪ್ಪದೆ ಅನುಸರಿಸಬೇಕು. ಎಲ್ಲರಿಗೂ ಕೆಲಸ ಒತ್ತಡ ಇರುತ್ತದೆ. ಆದರೆ ಪ್ರತಿಯೊಬ್ಬ ಲೈನ್‌ಮೆನ್ ಕೆಲಸ ಮಾಡಬೇಕಾದರೆ ಜೀವ ಕೈಯಲ್ಲಿ ಹಿಡಿದು ಕೆಲಸ ಮಾಡಬೇಕಾಗುತ್ತದೆ. ಆದ್ದರಿಂದ ಮೊದಲು ತಮ್ಮ ಸುರಕ್ಷತೆ ದೃಷ್ಟಿಯಲ್ಲಿ ಇಟ್ಟುಕೊಂಡು ಇಲಾಖೆ ನೀಡಿದ ಕಿಟ್ ಸದ್ಬಳಕೆ ಮಾಡಿಕೊಂಡು ಕೆಲಸ ನಿರ್ವಹಿಸಬೇಕು ಎಂದರು.

ಜೆಸ್ಕಾಂ ಅಧಿಕಾರಿಗಳಾದ ಮೋಹನ ಸಿಂಗ್, ಸೈಯದ ಸಾಬ್, ಪ್ರಭಾರಿ ಶಾಖಾಧಿಕಾರಿ ಮಹೇಶ ಕುಮಾರ ಸಿಬ್ಬಂದಿ ನಾಗರಾಜ, ಮೌಲಸಾಬ, ದುರಗಪ್ಪ, ಪಾಷ, ರಾಘವೇಂದ್ರ, ಸಂತೋಷ ಸೇರಿದಂತೆ ಲೈನ್‌ಮೆನ್‌ಗಳು ಇದ್ದರು.