ರಾಮಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್ ನ ವಿಶ್ವಸ್ಥ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರ ನೇತೃತ್ವದಲ್ಲಿ ಶನಿವಾರದಿಂದದ 5 ದಿನಗಳ ಕಾಲ ವಿಶೇಷ ಉತ್ಸವ ಮತ್ತು ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲಾಗುತ್ತಿದೆ.‌

ಉಡುಪಿ: ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ‌ ಪ್ರತಿಷ್ಠಾಪನೆಯಾಗಿ 2ನೇ ವರ್ಷಾಚರಣೆ ಮತ್ತು ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಂಡಿರುವ ಅಂಗವಾಗಿ ರಾಮಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್ ನ ವಿಶ್ವಸ್ಥ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರ ನೇತೃತ್ವದಲ್ಲಿ ಶನಿವಾರದಿಂದದ 5 ದಿನಗಳ ಕಾಲ ವಿಶೇಷ ಉತ್ಸವ ಮತ್ತು ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲಾಗುತ್ತಿದೆ.‌

ಶನಿವಾರ ಉಡುಪಿಯಿಂದ ಆಗಮಿಸಿರುವ ವೈದಿಕರಿಂದ ತತ್ವ ಹೋಮ‌, ಸುದರ್ಶನ ಯಾಗ, ಶ್ರೀಗಳಿಂದ ತತ್ವ ಕಲಶಾರಾಧನೆ ಸಹಿತ ರಾಮದೇವರಿಗೆ ತತ್ವ ಕಲಶಾಭಿಷೇಕ ಸಹಿತ ಪೂಜೆ ಮಂಗಳಾರತಿ ನೆರವೇರಿತು.‌ ಸಾಯಂಕಾಲ ಪಲ್ಲಕ್ಲಿ ಉತ್ಸವ, ತೊಟ್ಟಿಲು ಸೇವೆ, ಅಷ್ಟಾವಧಾನ ಸೇವೆಗಳನ್ನು ನಡೆಲಾಯಿತು.