ಅಯೋಧ್ಯೆಯಲ್ಲಿ ಪ್ರಾಣಪ್ರತಿಷ್ಠೆ: ಬಂಟ್ವಾಳದಲ್ಲಿ ಸಂಭ್ರಮ

| Published : Jan 23 2024, 01:45 AM IST

ಅಯೋಧ್ಯೆಯಲ್ಲಿ ಪ್ರಾಣಪ್ರತಿಷ್ಠೆ: ಬಂಟ್ವಾಳದಲ್ಲಿ ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಪೊಳಲಿ ಶ್ರೀ ರಾಜರಾಜೇಶ್ವರಿ, ಸನ್ನಿಧಾನದ ಪಕ್ಕದ ಹಾಲ್‌ನಲ್ಲಿ ವಿವೇಕ ವೇದಿಕೆ, ರಾಮಕೃಷ್ಣ ತಪೋವನ ಪೊಳಲಿ ಇದರ ಸಹಯೋಗದಲ್ಲಿ ‘ಶ್ರೀ ರಾಮ ತಾರಕ ಯಜ್ಞ’ ನಡೆಯಿತು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆ ಹಾಗೂ ರಾಮನ ವಿಗ್ರಹದ ಪ್ರಾಣ ಪ್ರತಿಷ್ಠೆ ಹಿನ್ನೆಲೆಯಲ್ಲಿ ಸೋಮವಾರ ತಾಲೂಕಿನಾದ್ಯಂದ ಎಲ್ಲ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಸಲಾಯಿತು.

ಪೊಳಲಿ ಶ್ರೀ ರಾಜರಾಜೇಶ್ವರಿ, ಸನ್ನಿಧಾನದ ಪಕ್ಕದ ಹಾಲ್‌ನಲ್ಲಿ ವಿವೇಕ ವೇದಿಕೆ, ರಾಮಕೃಷ್ಣ ತಪೋವನ ಪೊಳಲಿ ಇದರ ಸಹಯೋಗದಲ್ಲಿ ನಡೆದ ‘ಶ್ರೀ ರಾಮ ತಾರಕ ಯಜ್ಞ’ದಲ್ಲಿ ಊರಿನ ಹಾಗೂ ಪರ ಊರಿನ ಜನರು ಭಾಗವಹಿಸಿದ್ದರು.

ಎಲ್.ಇ.ಡಿ ಪರದೆಯಲ್ಲಿ ಅಯೋಧ್ಯೆಯಿಂದ ಶ್ರೀ ರಾಮ ಲಲ್ಲಾರ ವಿಗ್ರಹ ಪ್ರತಿಷ್ಠಾಪನೆಯ ನೇರ ಪ್ರಸಾರ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿತ್ತು.ರಾಮಕೃಷ್ಣ ತಪೋವನದ ವಿವೇಕ ಚೈತನ್ಯಾನಂದ ಸ್ವಾಮೀಜಿ, ಶಾಸಕ ರಾಜೇಶ್ ನಾಯ್ಕ್, ಪೊಳಲಿ ಕ್ಷೇತ್ರದ ಅರ್ಚಕರು ಉಪಸ್ಥಿತರಿದ್ದರು. ಬಿ.ಸಿ.ರೋಡು ಸೇರಿದಂತೆ ತಾಲೂಕಿನ ಎಲ್ಲೆಡೆಗಳಲ್ಲಿ ಹಿಂದೂ ಸಮುದಾಯದ ಬಹುತೇಕರು ಅಂಗಡಿ ಮುಗ್ಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್‌ ಮಾಡಿ ಬಾಲರಾಮನ ಪ್ರಾಣಪ್ರತಿಷ್ಠೆಯ ಕಾರ್ಯಕ್ರಗಳಲ್ಲಿ ತೊಡಗಿಸಿಕೊಂಡರು.ಕಾರಿಂಜ ಕ್ಷೇತ್ರದಲ್ಲಿಯೂ ರಾಮೋತ್ಸ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಂಗವೊಂದು ಶ್ರೀರಾಮನ ಭಾವಚಿತ್ರದ ಬಳಿ ಬಂದದ್ದು ನೆರೆದ ಎಲ್ಲ ಭಕ್ತರನ್ನೂ ಬೆರಗುಗೊಳಿಸಿತು. ಈ ದೃಶ್ಯವನ್ನು ಭಕ್ತರೊಬ್ಬರು ಮೊಬೈಲ್‌ನಲ್ಲಿ ಚಿತ್ರೀಕರಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು ಎಲ್ಲೆಡೆ ವೈರಲ್‌ ಆಗುತ್ತಿದೆ.ಕುಕ್ಕೆ: ಭಜನಾ ಕಾರ್ಯಕ್ರಮ, ಕರಸೇವಕರಿಗೆ ಗೌರವ

ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆ ಅಂಗವಾಗಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಜನಾ ಕಾರ್ಯಕ್ರಮ ಹಾಗೂ ಕರ ಸೇವಕರಿಗೆ ಗೌರವ ಕಾರ್ಯಕ್ರಮ ನಡೆಯಿತು.

ಶ್ರೀ ದೇವಳದ ಹನುಮಂತ ಗುಡಿಯನ್ನು ಅಲಂಕರಿಸಲಾಗಿ, ವಿಶೇಷ ಪೂಜೆ ಸಲ್ಲಿಸಲಾಯಿತು. ಅದರ ಬಳಿಯಿಂದ ಬೆಳಗ್ಗೆಯಿಂದ ಸಂಜೆ ವರೆಗೆ ನಿರಂತರ ಭಜನಾ ಕಾರ್ಯಕ್ರಮ ನಡೆಯಿತು.

ದೇವಳದ ವತಿಯಿಂದ ಕರಸೇವೆಯಲ್ಲಿ ಭಾಗವಹಿಸಿದ್ದ ವೇಣುಗೋಪಾಲ ಶಾಸ್ತ್ರೀ ಹಾಗೂ ವನಜಾ ವಿ.ಭಟ್ ಅವರನ್ನು ಗೌರವಿಸಲಾಯಿತು. ಬೃಹತ್ ಎಲ್.ಇ.ಡಿ. ಪರದೆ ಮೂಲಕ ಅಯೋಧ್ಯೆ ಕಾರ್ಯಕ್ರಮದ ನೇರ ಪ್ರಸಾದ ವೀಕ್ಷಣೆಗೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿತ್ತು. ದೇವಳವನ್ನು ವಿಶೇಷ ರೀತಿಯಲ್ಲಿ ಅಲಂಕರಿಸಲಾಗಿತ್ತು. ಅನ್ನಸಂತರ್ಪಣೆ ಜರುಗಿತು.ಕುಕ್ಕೆ ಸುಬ್ರಹ್ಮಣ್ಯದ ಬಿಎಂಎಸ್ ಅಟೋ ಚಾಲಕ-ಮಾಲಕರಿಂದ ರಾಮ ಸೀತೆಯ ಕಟೌಟ್ ಹಾಗೂ ಕೇಸರಿ ಬಂಟಿಂಗ್ಸ್, ಧ್ವಜಗಳನ್ನು ಅಳವಡಿಸಲಾಗಿತ್ತು. ಕುಕ್ಕೆ ಶ್ರೀ ಅಟೋ ಚಾಲಕ ಮಾಲೀಕರಿಂದ ಭಕ್ತರಿಗೆ ಹಾಲು-ಪಾಯಸ ವಿತರಿಸಲಾಯಿತು.

ಕುಕ್ಕೆ ಸುಬ್ರಹ್ಮಣ್ಯ ಪರಿಸರದ ವಿವಿಧೆಡೆಯ ಧಾರ್ಮಿಕ ಕೇಂದ್ರಗಳಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಭಜನಾ ಕಾರ್ಯಕ್ರಮ, ಅನ್ನಸಂತರ್ಪಣೆ ನಡೆಯಿತು.