ಅಯ್ಯಪ್ಪ ಸ್ವಾಮಿಯ ಪಡಿಪೂಜೆ

| Published : Jan 07 2024, 01:30 AM IST

ಸಾರಾಂಶ

ತುಮಕುರಿನಲ್ಲಿ ಅಯ್ಯಪ್ಪಸ್ವಾಮಿ ಪಡಿಪೂಜೆ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ತುಮಕೂರು

ನಗರದ ಅಗ್ರಹಾರದ ತತ್ವಮಸಿ ಭಕ್ತ ಮಂಡಳಿಯಿಂದ ಅಗ್ರಹಾರ ಶಿಶುವಿಹಾರದ ಬಳಿ ನಿರ್ಮಿಸಿದ್ದ ವಿಶೇಷ ಮಂಟಪದಲ್ಲಿ ಶಬರಿಮಲೆ ಅರ್ಚಕ ಆನಂದ್ ನಂಬೂರಿ ನೇತೃತ್ವದಲ್ಲಿ ಅಯ್ಯಪ್ಪ ಸ್ವಾಮಿಯ ವಿಶೇಷ ಪಡಿಪೂಜೆ ಹಾಗೂ ಹೆಸರಾಂತ ಗಾಯಕ ವೀರಮಣಿರಾಜು ಅವರ ಭಜನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಶಾಸಕ ಜಿ.ಬಿ. ಜ್ಯೋತಿಗಣೇಶ್, ಕೆಪಿಸಿಸಿ ವಕ್ತಾರ ಮುರಳೀಧರ ಹಾಲಪ್ಪ, ಅಖಿಲ ಭಾರತ ಅಯ್ಯಪ್ಪ ಸ್ವಾಮಿ ಮಂಡಳಿ ಅಧ್ಯಕ್ಷ ಟಿ.ಬಿ. ಶೇಖರ್, ಕೃಷ್ಣಯ್ಯ, ನಗರ ಪಾಲಿಕೆ ಮಾಜಿ ಉಪ ಮೇಯರ್ ಟಿ.ಅರ್. ನಾಗರಾಜು ಮತ್ತಿತರ ಗಣ್ಯರು ಆಗಮಿಸಿ ಅಯ್ಯಪ್ಪ ಸ್ವಾಮಿಯ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

ಇದರ ಅಂಗವಾಗಿ ಬೆಳಿಗ್ಗೆ 5 ಗಂಟೆಗೆ ಗಣ ಹೋಮ, 5.30 ಕ್ಕೆ ಅಯ್ಯಪ್ಪ ಸ್ವಾಮಿಯ ಮೂರ್ತಿಯನ್ನು ಮೆರವಣಿಗೆ ಮೂಲಕ ಕರೆತಂದು ಅಲಂಕೃತ ವಿಶೇಷ ಮಂಟಪದಲ್ಲಿ ಪ್ರತಿಷ್ಠಾಪಿಸಿ ಶಾಸ್ತ್ರೋಕ್ತವಾಗಿ ಪೂಜೆ, ನೈವೇದ್ಯ ಸಲ್ಲಿಸಲಾಯಿತು. ಬೆಳಿಗ್ಗೆ 7.30ಕ್ಕೆ ಸ್ವಾಮಿಗೆ ಅಷ್ಟಾಭಿಷೇಕ 9ಕ್ಕೆ ಉಷಾ ಪೂಜೆ, 11 ಕ್ಕೆ ಉಛ್ಚ ಪೂಜೆ, ಸಂಜೆ 4 ಗಂಟೆಗೆ ಅಯ್ಯಪ್ಪ ಸ್ವಾಮಿಗೆ ಅರ್ಪಿಸುವ ವಿವಿಧ ವಿಶೇಷ ಪುಷ್ಟಗಳ ಮೆರವಣಿಗೆ ನಂತರ ಸ್ವಾಮಿಗೆ ಪುಷ್ಪಾರ್ಚನೆ. ಸಂಜೆ 6 ಗಂಟೆಗೆ ದೀಪಾರಾಧನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಶಬರಿಲೆ ಮಾದರಿಯಲ್ಲಿ ವಿಶೇಷ 18 ಮೆಟ್ಟಿಲು ಸ್ಥಾಪನೆ ಮಾಡಿ ಈ ಮೆಟ್ಟಿಲುಗಳಿಗೆ ವಿಶೇಷ ಪಡಿಪೂಜೆ, ನಂತರ ಅತಳ ಪೂಜೆ, ಹರಿವರಾಸನಂ ಹಮ್ಮಿಕೊಳ್ಳಲಾಗಿತ್ತು. ಖ್ಯಾತಗಾಯಕ ವೀರಮಣಿರಾಜು ಅವರ ಅಯ್ಯಪ್ಪ ಸ್ವಾಮಿಯ ಭಜನೆ ವ್ಯವಸ್ಥೆಯಾಗಿತ್ತು. ನೂರಾರು ಸಂಖ್ಯೆಯಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಹಾಗೂ ಭಕ್ತರು ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು.

ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಮಂಡಳಿಯ ಶ್ರೀನಿವಾಸ್, ಜಗದೀಶ್ ಸೇರಿದಂತೆ ಮುಖಂಡರಾದ ಪ್ರಸನ್ನ(ಪಚ್ಚಿ), ಟಿ.ಅರ್. ಸುರೇಶ್ ಮತ್ತಿತರು ಭಾಗವಹಿಸಿದ್ದರು.