ಸಾರಾಂಶ
ಗದಗ: ಡಿ. 20ರ ಸಂಜೆ 6.50ಕ್ಕೆ ಗದಗ ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಹಾಗೂ ಅಖಿಲ ಭಾರತೀಯ ಅನ್ನದಾನ ಸಮಿತಿಯ ಸದಸ್ಯ ಕೆ.ಈ. ಕಾಂತೇಶ ಗುರುಸ್ವಾಮಿಗಳ ಸಹಯೋಗದಲ್ಲಿ ಅಯ್ಯಪ್ಪಸ್ವಾಮಿ ಮಹಾಪೂಜಾ ಹಾಗೂ ಮಹಾ ಪ್ರಸಾದ ಜರುಗಲಿದೆ ಎಂದು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ ಅಬ್ಬಿಗೇರಿ ಹೇಳಿದರು. ಸೋಮವಾರ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಗದಗ ಜಿಲ್ಲೆಯ ಮಟ್ಟಿಗೆ ಇದೊಂದು ವಿಶೇಷ ಪೂಜೆಯಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಅಯ್ಯಪ್ಪ ಸ್ವಾಮಿ ಭಕ್ತರು ಒಂದೆಡೆ ಸೇರಿ ಮಹಾಪೂಜೆಯನ್ನು ನೆರವೇರಿಸುವ ಮೂಲಕ ಜಿಲ್ಲೆಯ ಜನರಿಗೆ ಒಳಿತನ್ನು ಬಯಸಿದ್ದಾರೆ ಎಂದರು. ರಮೇಶ ಸಜ್ಜಗಾರ ಮಾತನಾಡಿ, ಈ ಮಹಾಪೂಜೆಯಲ್ಲಿ ಒಂದು ಸಾವಿರದಿಂದ 15 ನೂರು ಜನ ಅಯ್ಯಪ್ಪ ಮಾಲಾಧಾರಿಗಳು ಪಾಲ್ಗೊಂಡು ಪಾಲ್ಗೊಳ್ಳಲಿದ್ದಾರೆ. ಇದರೊಟ್ಟಿಗೆ 2500ಕ್ಕೂ ಹೆಚ್ಚು ಸಾರ್ವಜನಿಕರು ಪಾಲ್ಗೊಳ್ಳಲಿದ್ದಾರೆ. ಇದರೊಟ್ಟಿ ನಿರಂತರವಾಗಿ 20ರಿಂದ 25 ವರ್ಷಗಳ ಕಾಲ ಅಯ್ಯಪ್ಪ ಮಾಲೆ ಧರಿಸಿ ಪೂಜೆ ಸಲ್ಲಿಸಿದ ಗುರುಸ್ವಾಮಿಗಳಿಂದ ಪೂಜೆ ಜರುಗಲಿದೆ. ಜಿಲ್ಲೆಯ ಎಲ್ಲಾ ಸನ್ನಿಧಿಯ ಮಾಲಾಧಾರಿಗಳು ಮಹಾಪೂಜೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ರಮೇಶ, ವೆಂಕಟೇಶ ಪೂಜಾರ, ಆನಂದ ಹೊಸಮನಿ, ಮಂಜುನಾಥ ಹಳ್ಳೂರಮಠ, ಶಿವಾನಂದ ಕಮ್ಮಾರ, ನಾಗರಾಜ ಬಾಗಲಕೋಟಿ, ಪ್ರಸಾದ ಕೊಡ್ತೀಕರ್, ಜಗದೀಶ ಸಂಕನಗೌಡ್ರ, ರಂಗಪ್ಪ ಬಂಡಿವಡ್ಡರ, ಮುತ್ತಣ್ಣ ಬೂದಿಹಾಳ, ಶಿದ್ಲಿಂಗಪ್ಪ ಉಮಚಗಿ, ಗುರನಾಥ ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ ಜಿಲ್ಲಾಧ್ಯಕ್ಷ ವೆಂಕಟೇಶ ದ್ವಾಸಲಕೇರಿ ಮುಂತಾದವರು ಹಾಜರಿದ್ದರು.