ಬಿ.ಜಿ. ಬಣಕಾರ ವಿಶಿಷ್ಟ ರಾಜಕಾರಣಿ: ಶಾಸಕ ಯು.ಬಿ. ಬಣಕಾರ

| Published : Jul 24 2025, 12:45 AM IST

ಸಾರಾಂಶ

ಪ್ರತಿವರ್ಷ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬರಲಾಗಿದೆ. ಹಿರಿಯ ಹಾಗೂ ಕಿರಿಯ ನ್ಯಾಯವಾದಿಗಳು, ಸಹಕಾರಿ, ರೈತರು, ಸಾಹಿತ್ಯ, ಪತ್ರಕರ್ತರನ್ನು ಗುರುತಿಸಿ ಅಭಿನಂದಿಸುವ ಕಾರ‍್ಯ ಮಾಡಲಾಗುತ್ತಿದೆ.

ಹಿರೇಕೆರೂರು: ರಾಜಕಾರಣದಲ್ಲಿ ತಮ್ಮದೆ ಆದ ವಿಶಿಷ್ಟ ಛಾಪನ್ನು ಮೂಡಿಸಿದ್ದ ತಂದೆ, ಬಿ.ಜಿ. ಬಣಕಾರ ಅವರ ಆದರ್ಶಗಳನ್ನು ನನ್ನ ಜೀವನದಲ್ಲಿ ಅಳವಡಿಸಿಕೊಂಡಿದ್ದೇನೆ ಎಂದು ಶಾಸಕ ಯು.ಬಿ. ಬಣಕಾರ ತಿಳಿಸಿದರು.ಪಟ್ಟಣದ ಗುರುಭವನದಲ್ಲಿ ಮಂಗಳವಾರ ಬಿ.ಜಿ. ಬಣಕಾರ ಅವರ 98ನೇ ಜನ್ಮದಿನದ ಪ್ರಯುಕ್ತ ತಾಲೂಕಿನ ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರತಿವರ್ಷ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬರಲಾಗಿದೆ. ಹಿರಿಯ ಹಾಗೂ ಕಿರಿಯ ನ್ಯಾಯವಾದಿಗಳು, ಸಹಕಾರಿ, ರೈತರು, ಸಾಹಿತ್ಯ, ಪತ್ರಕರ್ತರನ್ನು ಗುರುತಿಸಿ ಅಭಿನಂದಿಸುವ ಕಾರ‍್ಯ ಮಾಡಲಾಗುತ್ತಿದೆ ಎಂದರು.ರೈತ ಮುಖಂಡ ರಾಮಣ್ಣ ಕೆಂಚಳ್ಳೇರ ಮಾತನಾಡಿ, ಮೌಲ್ಯಾಧಾರಿತ ರಾಜಕಾರಣವನ್ನು ಕೆಲವೇ ಕೆಲವು ವ್ಯಕ್ತಿಗಳಲ್ಲಿ ಕಾಣಲು ಸಾಧ್ಯ. ಅಂತಹ ಮುತ್ಸದ್ಧಿ ರಾಜಕಾರಣಿ ಬಿ.ಜಿ. ಬಣಕಾರ ಆಗಿದ್ದರು. ಅವರ ಕರ್ತವ್ಯನಿಷ್ಠೆ, ಸರಳತನ ಯುವ ಜನತೆಗೆ ಆದರ್ಶಗಳಾಗಿವೆ ಎಂದರು.ನ್ಯಾಯವಾದಿ ಎಸ್.ಬಿ. ತಿಪ್ಪಣ್ಣನವರ ಮಾತನಾಡಿದರು. ನ್ಯಾಯವಾದಿ ಎಂ.ಬಿ. ಹೊಳಿಯಪ್ಪನವರ, ಎಸ್.ಕೆ. ಕರಿಯಣ್ಣನವರ, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷೆ ಮಲ್ಲಿಕಾರ್ಜುನ್ ಬುರಡಿಕಟ್ಟಿ, ನಾರಾಯಣಪ್ಪ ಗೌರಕ್ಕನವರ, ಎನ್. ಸುರೇಶಕುಮಾರ, ಮಹೇಶ ಗುಬ್ಬಿ, ಸಿದ್ದಣ್ಣ ನರೇಗೌಡ್ರ, ಷಣ್ಮುಖ ಮಳಿಮಠ್, ರಮೇಶ ಮಡಿವಾಳರ, ಶಿವರಾಜ ಹರಿಜನ್, ದುರಗಪ್ಪ ನೀರಲಗಿ, ನಿಂಗಪ್ಪ ಚಳಗೇರಿ, ಹನುಮಂತಗೌಡ ಭರಮಣ್ಣನವರ, ರಮೇಶ ಬಂಡಿವಡ್ಡರ, ಅಂಜನೇಯ ಟಿ., ಸನಾವುಲ್ಲಾ ಮಕಾನದಾರ, ಯು.ಬಿ. ಬಣಕಾರ ಅಭಿಮಾನಿ ಬಳಗದ ಸದಸ್ಯರು ಉಪಸ್ಥಿತರಿದ್ದರು.

ಸಕ್ಕರೆ ಕಾರ್ಖಾನೆ ಬಳಿ ತೂಕದ ಯಂತ್ರ ಅಳವಡಿಕೆಗೆ ಒತ್ತಾಯ

ಹಾವೇರಿ: ಸಂಗೂರು ಸಕ್ಕರೆ ಕಾರ್ಖಾನೆ ಎದುರು ಸರ್ಕಾರದ ತೂಕದ ಯಂತ್ರ ಇಲ್ಲಿಯವರೆಗೂ ನಿರ್ಮಾಣವಾಗಿಲ್ಲ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತ ತುರ್ತು ಕ್ರಮಕ್ಕೆ ಮುಂದಾಗಬೇಕೆಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಆಗ್ರಹಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಸಕ್ಕರೆ ಕಾರ್ಖಾನೆಯಲ್ಲಿ ರೈತರಿಗೆ ಮೋಸವಾಗುತ್ತಿದ್ದು, ಕಬ್ಬು ಬೆಳೆಗಾರರಿಗೆ ತೂಕದಲ್ಲಿ ಅನ್ಯಾಯವಾಗಬಾರದು ಎಂದು ರಾಜ್ಯ ಸರ್ಕಾರ ಪ್ರತಿ ಕಾರ್ಖಾನೆ ಎದುರು ಸರ್ಕಾರದಿಂದಲೇ ತೂಕದ ಯಂತ್ರ ಹಾಕಬೇಕೆಂದು ಆದೇಶ ಮಾಡಿದೆ. ಆದಾಗ್ಯೂ ಸಕ್ಕರೆ ಕಾರ್ಖಾನೆ ಎದುರು ತೂಕದ ಯಂತ್ರ ನಿರ್ಮಾಣವಾಗಿಲ್ಲ. ಜಿಲ್ಲಾಧಿಕಾರಿಗಳು ಸಚಿವರ ಗಮನಕ್ಕೆ ತಂದು, ಕೂಡಲೇ ಸಂಗೂರು ಗ್ರಾಮದಲ್ಲಿ ಕರ್ನಾಟಕ ಸಹಕಾರಿ ಸಕ್ಕರೆ ಕಾರ್ಖಾನೆಯ 185 ಎಕರೆ ಪ್ರದೇಶವಿದ್ದು ಅದರಲ್ಲಿ ಹಾನಗಲ್ಲ- ಹಾವೇರಿ ರಸ್ತೆಗೆ ಹೊಂದಿಕೊಂಡು ತೂಕದ ಯಂತ್ರ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.