ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಮಾಜಿ ರಾಜ್ಯಪಾಲ ಬಿ.ರಾಚಯ್ಯ ಅವರ ಸ್ಮರಣಾರ್ಥ ಕೊಳ್ಳೇಗಾಲ ಕ್ಷೇತ್ರದ ಕುದೇರು ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕಮರವಾಡಿ ತಂಡವು ಉತ್ತಮ ಪ್ರದರ್ಶನ ನೀಡುವ ಮೂಲಕ ಬಿ.ರಾಚಯ್ಯ ಸೀಸನ್ 2 ಟ್ರೋಫಿ ತನ್ನದಾಗಿಸಿಕೊಂಡಿತು. ಬಾಗಳಿ ತಂಡವು ರನ್ನರ್ ಅಪ್ ಆಯಿತು.ಈ ವೇಳೆ ವಿಜೇತ ತಂಡಕ್ಕೆ ಟ್ರೋಫಿ ವಿತರಿಸಿದ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರು ಮಾತನಾಡಿ,ಕ್ರಿಕೆಟ್ ಪಂದ್ಯಾವಳಿಯನ್ನು ನಮ್ಮ ತಂದೆ ಹೆಸರಿನಲ್ಲಿ ಆಯೋಜಿಸಿರುವುದು ಸಂತಸ ಹಾಗೂ ಹೆಮ್ಮೆಯ ವಿಚಾರ. ಪಂದ್ಯಾವಳಿಯಲ್ಲಿ ಪಾಲ್ಗೊಂಡ ತಂಡಗಳು ಗೆಲುವು- ಸೋಲನ್ನು ಸಮಾನವಾಗಿ ಸ್ವೀಕರಿಸಬೇಕು, ಗೆದ್ದ ತಂಡಕ್ಕೆ ಅಭಿನಂದನೆ ಸಲ್ಲಿಸುವೆ, ಸೋತ ತಂಡ
ಮುಂದಿನ ಪಂದ್ಯಾವಳಿಗಳಲ್ಲಿ ಪಾಲ್ಗೊಂಡು ಗೆಲ್ಲುವಂತಾಗಲಿ, ಕ್ರೀಡೆಗಳಲ್ಲಿ ಸೋಲು, ಗೆಲುವು ಮುಖ್ಯವಲ್ಲ, ಪಾಲ್ಗೊಳ್ಳುವಿಕೆ ಮುಖ್ಯ ಎಂದರು.ನಮ್ಮ ತಂದೆ ಬಿ. ರಾಚಯ್ಯ ಅವರು ಈ ಭಾಗದಲ್ಲಿಯೇ ಅಧ್ಯಯನ ಮಾಡಿದವರು. ಅವರಿಗೂ ಕ್ರೀಡೆಗಳ ಪ್ರೋತ್ಸಾಹಿಸುವಿಕೆಯಲ್ಲಿ
ಹೆಚ್ಚಿನ ಆಸಕ್ತಿ ಇತ್ತು. ಅದೇ ರೀತಿ ನಾನು ಸಹಾ ಕ್ರೀಡಾಭಿಮಾನಿ, ವಿದ್ಯಾರ್ಥಿ ದೆಸೆಯಲ್ಲಿ ನಾನು ಸಹ ಹಲವು ಕ್ರೀಡಾಕೂಟಗಳಲ್ಲಿ ಕ್ರೀಡಾ ನಾಯಕನಾಗಿದ್ದೆ ಎಂದರು.
ಈ ವೇಳೆ ಚಾಮುಲ್ ವ್ಯವಸ್ಥಾಪಕ ನಿರ್ದೇಶಕ ರಾಜ್ ಕುಮಾರ್, ಜಿಪಂನ ಮಾಜಿ ಉಪಾಧ್ಯಕ್ಷ ಯೋಗೀಶ್, ರೇವಣ್ಣ ಕಮರವಾಡಿ,
ಸಂತೇಮರಳ್ಳಿಯ ಮಹದೇವಪ್ರಸಾದ್(ಪರ್ಶಿ), ಒಬಿಸಿ ಜಿಲ್ಲಾಧ್ಯಕ್ಷ ಚೇತನ್, ಅಯೋಜಕ ಕೈಲಾಸ್, ಮಧು, ಯೋಗೀಶ ಇನ್ನಿತರಿದ್ದರು.------
ಶಾಸಕ ಎ.ಆರ್. ಕೃಷ್ಣಮೂರ್ತಿಯವರು ಕ್ರೀಡಾಪ್ರೇಮಿಯಾಗಿದ್ದು, ಕ್ರೀಡಾಭಿಮಾನಿಗಳ ಪ್ರೋತ್ಸಾಹಕ್ಕಾಗಿ ಉತ್ಸುಕರಾಗಿದ್ದಾರೆ. ಸಜ್ಜನ ರಾಜಕಾರಣಿಗಳು, ಅವರೊಬ್ಬ ಸೌಮ್ಯ ಸ್ವಭಾವಿ, ಕ್ಷೇತ್ರದ ಅಭಿವೃದ್ದಿ ಪರ ಹೆಚ್ಚು ಕಾಳಜಿ ವಹಿಸುತ್ತಿರುವ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಸಚಿವ ಸ್ಥಾನ ನೀಡಲಿ.- ಕಮರವಾಡಿ ರೇವಣ್ಣ. ಚಾಮುಲ್ ನಿರ್ದೇಶಕ