ಗೃಹಲಕ್ಷ್ಮೀ ಯೋಜನೆಯ 24ನೇ ಕಂತು ಬಿಡಗಡೆಗೊಳಿಸಲಾಗಿದೆ. ಇದೇ ಮಹಿಳೆಯರ ಸಬಲೀಕರಣಕ್ಕಾಗಿ ಗೃಹಲಕ್ಷ್ಮೀ ಸಹಕಾರಿ ಬ್ಯಾಂಕ್‌ಗಳನ್ನು ಶೀಘ್ರದಲ್ಲಿ ಪ್ರಾರಂಭಿಸಲಿದ್ದೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಹೇಳಿದರು.
ಕನ್ನಡಪ್ರಭ ವಾರ್ತೆ ಚಡಚಣ
27ನೇ ವಯಸ್ಸಿನಲ್ಲಿ ಗ್ರಾಮೀಣ ಪ್ರದಶದ ಮಕ್ಕಳ ಶೈಕ್ಷಣಿಕೆ ಬೆಳವಣಿಗೆಯ ಕನಸು ಕಂಡ ಸಂಸ್ಥಾಪಕ ಅಧ್ಯಕ್ಷ ಬಿ.ಎಂ ಕೋರೆ ಅವರು ಪ್ರಾಮಾಣಿಕ, ಸಾಮಾಜಿಕ ಬದ್ಧತೆ, ಕಳಕಳಿ ಹೊಂದಿರುವ ಮೇರು ವ್ಯಕ್ತಿತ್ವದ ನಾಯಕ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಹೇಳಿದರು.ತಾಲೂಕಿನ ಲೋಣಿ ಬಿ.ಕೆ ಗ್ರಾಮದಲ್ಲಿ ಶ್ರೀ ಸಿದ್ದೇಶ್ವರ ಶಿಕ್ಷಣ ಸಂಸ್ಥೆ ಸುವರ್ಣ ಸಂಭ್ರಮೋತ್ಸವ ನಿಮಿತ್ತ ವಿಜ್ಞಾನ ಭವನದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಸಮಾಜ ಸಮೃದ್ಧವಾಗಿರಲು ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಯಾವುದೇ ರಾಜಕಾರಣ ಮಾಡಬಾರದು. ಗೃಹಲಕ್ಷ್ಮೀ ಯೋಜನೆಯ 24ನೇ ಕಂತು ಬಿಡಗಡೆಗೊಳಿಸಲಾಗಿದೆ. ಇದೇ ಮಹಿಳೆಯರ ಸಬಲೀಕರಣಕ್ಕಾಗಿ ಗೃಹಲಕ್ಷ್ಮೀ ಸಹಕಾರಿ ಬ್ಯಾಂಕ್‌ಗಳನ್ನು ಶೀಘ್ರದಲ್ಲಿ ಪ್ರಾರಂಭಿಸಲಿದ್ದೇವೆ ಎಂದರು.
ಸಾಂಸ್ಕೃತಿಕ ಸಭಾಭವನ ಉದ್ಘಾಟಿಸಿದ ಜವಳಿ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ ಮಾತನಾಡಿ, ಬಹುಮುಖ ಪ್ರತಿಭೆಯುಳ್ಳ ಬಿ.ಎಂ ಕೋರೆ ಅವರ ಸಾಮಾಜಿಕ ಸೇವೆ, ಶಿಕ್ಷಣ ಕ್ರಾಂತಿ ನಾಂದಿ ಹಾಡಿದ ಬಂತನಾಳ ಶ್ರೀಗಳ ನಂತರ ಇವರೇ ಅಂದರೂ ತಪ್ಪಾಗಲಿಕ್ಕಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಸಲ್ಲಿಸಿದ ನಿಷ್ಠಾವಂತ, ಪ್ರಾಮಾಣಿಕ ಸೇವೆ ನೋಡಿದರೇ ಅವರು ಉನ್ನತವಾದ ಹುದ್ದೆಗೇರಬೇಕಿತ್ತು. ಆದರೆ ಒಳ್ಳೆಯವರಿಗೆ ಈ ರಾಜಕಾದಲ್ಲಿ ಒಳ್ಳೆಯ ಹೆದ್ದೆ ಸಿಗದಿರುವುದ ಬೇಸರದ ವಿಷಯ. ಇನ್ನಾದರೂ ಪಕ್ಷನಿಷ್ಠೆಗೆ ಹೆಸರಾದ ಕೋರೆ ಸಾಹುಕಾರರನ್ನು ದೊಡ್ಡ ಹುದ್ದೆಗೇರಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಹೇಳಿದರು.ಶೈಕ್ಷಣಿಕ ಸಮಾವೇಶ ಉದ್ಘಾಟಿಸಿದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ, ರಾಜಕಾರಣದಲ್ಲಿ ಅಜಾತಶತ್ರು, ಗಡಿಭಾಗದ ಶಿಕ್ಷಣ ಕ್ರಾಂತಿ ಹರಿಕಾರರಾದ ಕೋರೆ ಅವರು, ಲಕ್ಷಾಂತರ ವಿದ್ಯಾರ್ಥಿಗಳ ಬದುಕಿಗೆ ಆಸರೆಯಾದ ಮೇರು ವ್ಯಕ್ತಿತ್ವದ ನಾಯಕರ ಹೆಸರು ಇತಿಹಾಸ ಪುಟದಲ್ಲಿ ಉಳಿಯಲಿ. ಮುಂದಿನ ದಿನಗಳಲ್ಲಿ ಈ ಸಂಸ್ಥೆ ಶತಮಾನೋತ್ಸವ ಅಚರಿಸಿಕೊಳ್ಳಲಿ ಹಾಗೂ ಕೋರೆ ಸಾಹುಕಾರ ನೂರು ವರ್ಷ ವಯಸ್ಸು ಹೆಚ್ಚಾಗಲಿ ಎಂದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಬೀದರ ಸುದ್ದರೋದ ಆಶ್ರಮದ ಶಿವಕುಮಾರ ಮಹಾಸ್ವಾಮೀಜಿ, ಅಳೂರ ದ ಸಿದ್ದರೋಡ ಆಶ್ರಮದ ಶಂಕರಾನಂದ ಮಹಾಸ್ವಾಮೀಜಿ ಆಶಿರ್ವಚನ ನೀಡಿದರು. ಅಧ್ಯಕ್ಷತೆ ವಹಿಸಿದ ಶಾಸಕ ವಿಠ್ಠಲ ಕಟಕದೋಂಢ ಮಾತನಾಡಿ, ಪ್ರಾಮಾಣಿಕಕ್ಕೆ ಮತ್ತೊಂದು ಹೆಸರೆ ಬಿ.ಎಂ ಕೋರೆ. ಈ ಸಂಸ್ಥೆಯಲ್ಲಿ ಇನ್ನೂ ಸಾವಿರಾರು ವಿದ್ಯಾರ್ಥಿಗಳು ವ್ಯಾಸಂಗ ಮಾಡಿ ಉತ್ತಮ ಹುದ್ದೆಗೇರಲಿ ಹಾಗೂ ಸಂಸ್ಥೆ ಶತಮಾನೋತ್ಸವ ಆಚರಿಸುವಂತಾಗಲಿ ಎಂದರು. ಮಹಿಳಾ ವಿವಿ ಕುಲಪತಿ ಡಾ.ವಿಜಯಾ ಕೋರಿಶೆಟ್ಟಿ, ವೀರಶೈವ ಮಹಾಸಭಾ ಅಧ್ಯಕ್ಷ ವಿ.ಸಿ ನಾಗಠಾಣ, ಜಿಪಂ ಸದಸ್ಯ ಪಂಚಪ್ಪ ಕಲಬುರ್ಗಿ, ಸಂಗಮೇಶ ಬಬಲೇಶ್ವರ ಮಾತನಾಡಿದರು.ವೇದಿಕೆ ಮೇಲೆ ವಿಧಾನ ಸಭಾ ಮಾಜಿ ಸದಸ್ಯ ಅರುಣಾ ಶಹಾಪುರ, ರೇಣುಕಾ ಕಟಕದೋಂಢ, ಸಾಹಿತಿ ಡಾ.ಎಸ್.ಕೆ ಕೊಪ್ಪಾ, ಪ್ರಾಚಾರ್ಯ ಡಾ. ಸಂಗಮೇಶ ಮೇತ್ರಿ, ಜಂಬುನಾಥ ಕಾಂಚಾಣಿ, ಓಂಕಾರ ಕಾಕಡೇ, ರಮೇಶ ಅವಜಿ, ವ್ಹಿ.ಡಿ ಕಲ್ಯಾಣಶೆಟ್ಟಿ, ಕಾಂತೂಗೌಡ ಪಾಟೀಲ, ಸಿದರಾಯ ಘಂಟಿ ಸೇರಿದಂತೆ ಇತರರಿದ್ದರು.ನಮ್ಮ ಜೊತೆ ಗುದ್ದಾಡಲಿ, ಅದನ್ನು ಬಿಟ್ಟು ನಮ್ಮ ಅಪ್ಪನ ಜೊತೆ ಗುದ್ದಾಡಲು ಬರುತ್ತಾರೆ. ಅಂತವರಿಂದ ಏನು ನಿರೀಕ್ಷೆ ಮಾಡೋಕೆ ಸಾಧ್ಯವಾಗುವುದಿಲ್ಲ. ಪ್ರಾಮಾಣಿಕ, ನಿಷ್ಠಾವಂತರಾದ ಬಿ.ಎಂ ಕೋರೆ ಅವರಿಗೆ ನಮ್ಮ ಸರ್ಕಾರದಲ್ಲಿ ಒಂದು ಉನ್ನತ ಹುದ್ದೆ ನೀಡಿ ಗೌರವಿಸಬೇಕು ಎನ್ನುವ ಮಹಾದಾಸೆಯಿದೆ.
ಶಿವಾನಂದ ಪಾಟೀಲ, ಕೃಷಿ ಮಾರುಕಟ್ಟೆ ಸಚಿವಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಟಿವಿ, ಮೊಬೈಲ್‌ದಿಂದ ಮಕ್ಕಳ ಶಿಕ್ಷಣ ಕುಸಿಯಬಾರದೆಂದು ನಮ್ಮ ಸರ್ಕಾರ ನೂತನವಾಗಿ ಗ್ರಾಪಂ ಹಂತದಲ್ಲಿ ಗ್ರಾಮೀಣ ಪ್ರದೇಶ ಮಕ್ಕಳ ಶಿಕ್ಷಣ ಶ್ರೇಯೋಭಿವೃದ್ಧಿಗಾಗಿ ಡಿಜಿಟಲ್ ಡಿಟಾಕ್ಷ ಎಂಬ ಯೋಜನೆ ಜಾರಿ ಮಾಡಲಿದೆ. ಅಂದರೆ ಪ್ರತಿ ದಿನ ಸಂಜೆ 7ರಿಂದ ರಾತ್ರಿ 9 ರವರೆಗೆ ಪೋಷಕರು ಮೊಬೈಲ್ ಹಾಗೂ ಟಿವಿ ಪ್ರಾರಂಭಿಸದೆ ಶಿಕ್ಷಣಕ್ಕೆ ಒತ್ತು ನೀಡುವ ಯೋಜನೆ ಇದಾಗಿದೆ.
ಲಕ್ಷ್ಮೀ ಹೆಬ್ಬಾಳ್ಕರ, ಮಹಿಳಾ, ಮಕ್ಕಳ ಕಲ್ಯಾಣ ಇಲಾಖೆ ಸಚಿವೆ