ಬಣ್ಣದಲ್ಲಿ ಮಿಂದೆದ್ದ ಸಂಸದ ಬಿ.ವೈ.ರಾಘವೇಂದ್ರ

| Published : Mar 27 2024, 01:04 AM IST

ಸಾರಾಂಶ

ಶಿವಮೊಗ್ಗದಲ್ಲಿ ಸಂಭ್ರಮದಿಂದ ಹೋಳಿ ಆಚರಿಸಲಾಗುತ್ತಿದೆ. ಶಿವನ ತಪಸ್ಸು ಭಂಗ ಮಾಡಲು ಹೋದ ಕಾಮನ ದಹನವಾಗಿತ್ತು. ಅದೇ ರೀತಿ ಈ ದೇಶದ ಸಮಸ್ಯೆಗಳು ದೂರಾಗಿ ದೇಶಕ್ಕೆ ಒಳಿತಾಗಬೇಕಿದೆ. ಇವತ್ತು ಹೋಳಿ ಆಚರಣೆಯಲ್ಲಿ ಭಾಗವಹಿಸಿದ್ದು ನನ್ನ ಕಾಲೇಜು ಜೀವನ ನೆನಪಾಯಿತು. ಆಗೆಲ್ಲ ಸ್ನೇಹಿತರ ಜೊತೆಗೆ ಆಚರಣೆ ಮಾಡುತ್ತಿದ್ದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಲೋಕಸಭೆ ಚುನಾವಣಾ ಪ್ರಚಾರದ ಒತ್ತಡದ ನಡುವೆಯೇ ಸಂಸದ ಬಿ.ವೈ.ರಾಘವೇಂದ್ರ ಮಂಗಳವಾರ ಶಿವಮೊಗ್ಗದಲ್ಲಿ ಹೋಳಿ ಆಚರಣೆಯಲ್ಲಿ ಪಾಲ್ಗೊಂಡರು. ಮೈ ತುಂಬ ಬಣ್ಣ ಹಚ್ಚಿಸಿಕೊಂಡು ಯುವಕರ ಜೊತೆಗೆ ನೃತ್ಯ ಮಾಡಿದರು.

ಗೋಪಿ ಸರ್ಕಲ್‌ನಲ್ಲಿ ಹಿಂದೂ ಕೇಸರಿ ಅಲಂಕಾರ ಸಮಿತಿ ಆಯೋಜಿಸಿದ್ದ ರೈನ್‌ ಡಾನ್ಸ್‌ ಮತ್ತು ಡಿಜೆ ಸಂಭ್ರಮದಲ್ಲಿ ಸಂಸದ ರಾಘವೇಂದ್ರ ಭಾಗವಹಿಸಿದ್ದರು. ಈ ವೇಳೆ ಅಲ್ಲಿ ನೆರೆದಿದ್ದವರು ಸಂಸದ ರಾಘವೇಂದ್ರರಿಗೆ ಬಣ್ಣ ಹಚ್ಚಿ ಸಂಭ್ರಮಿಸಿದರು.

ಕಾಲೇಜು ಜೀವನ ನೆನಪಾಯಿತು:

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿ, ಶಿವಮೊಗ್ಗದಲ್ಲಿ ಸಂಭ್ರಮದಿಂದ ಹೋಳಿ ಆಚರಿಸಲಾಗುತ್ತಿದೆ. ಶಿವನ ತಪಸ್ಸು ಭಂಗ ಮಾಡಲು ಹೋದ ಕಾಮನ ದಹನವಾಗಿತ್ತು. ಅದೇ ರೀತಿ ಈ ದೇಶದ ಸಮಸ್ಯೆಗಳು ದೂರಾಗಿ ದೇಶಕ್ಕೆ ಒಳಿತಾಗಬೇಕಿದೆ. ಇವತ್ತು ಹೋಳಿ ಆಚರಣೆಯಲ್ಲಿ ಭಾಗವಹಿಸಿದ್ದು ನನ್ನ ಕಾಲೇಜು ಜೀವನ ನೆನಪಾಯಿತು. ಆಗೆಲ್ಲ ಸ್ನೇಹಿತರ ಜೊತೆಗೆ ಆಚರಣೆ ಮಾಡುತ್ತಿದ್ದೆ. ಇವತ್ತು ಯುವಕರ ಜೊತೆ ಹಬ್ಬ ಆಚರಿಸಿ ಖುಷಿಯಾಯಿತು ಎಂದರು.----------------------