ಸಾರಾಂಶ
ಕಾರ್ಮಿಕರು ದೇಶದ ಅಭಿವೃದ್ಧಿಗೆ ಶ್ರಮಿಸುವ ಅತಿ ದೊಡ್ಡ ಆಸ್ತಿ ಎಂದು ಕಾರ್ಮಿಕರ ಜೀವನ ಸುಧಾರಣೆಗಾಗಿ ಹಲವು ಕಾಯ್ದೆಯನ್ನು ಜಾರಿಗೆ ತಂದಿದ್ದರು. ಬಡತನವಿರುವ ಕುಟುಂಬದಲ್ಲಿ ಹುಟ್ಟಿದ ಡಾ.ಬಾಬು ಜಗಜೀವನ ರಾಂ ಆರ್ಥಿಕ ಅಸಮಾನತೆ, ಅಸ್ಪಶ್ಯತೆ ಹೋಗಲಾಡಿಸಲು ಶ್ರಮಿಸಿದ್ದರು.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ್‌ರಾಂ ಅವರು ಹಸಿರು ಕ್ರಾಂತಿ ಹರಿಕಾರರಾಗಿ ದೇಶದ ಪ್ರಗತಿಗೆ ಮಾದರಿಯಾಗಿದ್ದರು ಎಂದು ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಐ.ಆರ್ ಮೂರ್ತಿ ಹೇಳಿದರು.ಪಟ್ಟಣದ ಅಂಬೇಡ್ಕರ್ ಭವನದಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಮಾಜಿ ಉಪಪ್ರಧಾನಿ ಡಾ.ಜಗಜೀವನ್ ರಾಂ ಅವರ 117 ನೇ ವರ್ಷದ ಜನ್ಮ ಜಯಂತಿ ಅಚರಣೆಯಲ್ಲಿ ಮಾತನಾಡಿ, ಕಾರ್ಮಿಕರು ದೇಶದ ಅಭಿವೃದ್ಧಿಗೆ ಶ್ರಮಿಸುವ ಅತಿ ದೊಡ್ಡ ಆಸ್ತಿ ಎಂದು ಕಾರ್ಮಿಕರ ಜೀವನ ಸುಧಾರಣೆಗಾಗಿ ಹಲವು ಕಾಯ್ದೆಯನ್ನು ಜಾರಿಗೆ ತಂದಿದ್ದರು ಎಂದರು.
ಬಡತನವಿರುವ ಕುಟುಂಬದಲ್ಲಿ ಹುಟ್ಟಿದ ಡಾ.ಬಾಬು ಜಗಜೀವನ ರಾಂ ಆರ್ಥಿಕ ಅಸಮಾನತೆ, ಅಸ್ಪಶ್ಯತೆ ಹೋಗಲಾಡಿಸಲು ಶ್ರಮಿಸಿದ್ದರು ಎಂದರು.ತಹಸೀಲ್ದಾರ್ ಪರಶುರಾಮ್ ಹಾಗೂ ವಿವಿಧ ಸಂಘಟನೆ ಮುಖಂಡರುಗಳು ಸೇರಿ ಬಾಬು ಜಗಜೀವನರಾಂ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಇದಕ್ಕೂ ಮುನ್ನ ತಾಲೂಕು ಕಚೇರಿಯಿಂದ ಪಟ್ಟಣದ ಮುಖ್ಯ ರಸ್ತೆ ಮೂಲಕ ಅಂಬೇಡ್ಕರ್ ಭವನದವರೆಗೆ ತೆರೆದ ವಾಹನದಲ್ಲಿ ಬಾಬು ಜಗಜೀವನ್‌ರಾಂ ರವರ ಭಾವಚಿತ್ರ ವಿರಿಸಿ ಹೂವಿನಿಂದ ಅಲಂಕರಿಸಿ ತಮಟೆಯೊಂದಿಗೆ ಮೆರವಣಿಗೆ ನಡೆಸಲಾಯಿತು.
ಈ ವೇಳೆ ಬಿಇಒ ಮಹೇಶ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಮೇಘನಾ, ಬಾಬು ಜಗಜೀವನ್‌ರಾಂ ಜನಜಾಗೃತಿ ಅಭಿವೃದ್ದಿ ಸಂಘಟನೆ ಅರಕೆರರೆ ಸಿದ್ದರಾಜು, ಆಟೋ ಶಂಕರ್, ದಲಿತ ಸಂಘಟನೆ ಮುಖಂಡರಾದ ಶಿವಯ್ಯ, ರವಿಚಂದ್ರ, ಪಾಂಡು, ನಂಜುಂಡ, ಹೊನ್ನಯ್ಯ, ಕೆ.ಟಿ ರಂಗಪ್ಪ, ಅಲ್ಲಾಪಟ್ಟಣ ರಾಜು, ಸುರೇಶ್, ಕುಮಾರ್, ಸಿದ್ದು, ಸ್ವಾಮಿ, ವೆಂಕಟೇಶ್, ಶಿವಶಂಕರ್, ಮಹದೇವು ಸೆರಿದಂತೆ ಇತರ ಸಂಘಟನೆಗಳ ಮುಖಂಡರು, ತಾಲೂಕು ಆಡಳಿತದ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.